ಪತ್ನಿಗೆ ಸ್ನೇಹಿತರೊಟ್ಟಿಗೂ ಮಲಗು ಎಂದ ವಿಕೃತ ಪತಿ – ಸೆಕ್ಸ್ ವಿಡಿಯೋ ಇಟ್ಟುಕೊಂಡು ಬ್ಲಾಕ್‍ಮೇಲ್

ನವದೆಹಲಿ: ಪತಿಯೊಬ್ಬ ತನ್ನ ಪತ್ನಿ ಜೊತೆಗೆ ಸೆಕ್ಸ್ ಮಾಡಿದ ವಿಡಿಯೋ ರೆಕಾರ್ಡ್ ಮಾಡಿಕೊಂಡು, ತನ್ನ ಸ್ನೇಹಿತರೊಟ್ಟಿಗೂ ಮಲಗು ಇಲ್ಲವಾದರೆ ವಿಡಿಯೋ ವೈರಲ್ ಮಾಡುತ್ತೇನೆ ಎಂದು ಹೆದರಿಸಿದ ಘಟನೆ ದೆಹಲಿಯಲ್ಲಿ ನಡೆದಿದೆ.

ದೆಹಲಿಯ ಗೀತಾ ಕಾಲೋನಿಯ ನಿವಾಸಿ ಅತುಲ್ ಅಗರ್ವಾಲ್ ಪತ್ನಿಗೆ ಬ್ಲಾಕ್‍ಮೇಲ್ ಮಾಡಿದ ಪತಿ. ಅತುಲ್ ತನ್ನ ಪತ್ನಿ ಜೊತಗಿನ ಸೆಕ್ಸ್ ವಿಡಿಯೋ ರೆಕಾರ್ಡ್ ಮಾಡಿ ಇಟ್ಟುಕೊಂಡು ತನ್ನ ಮಾತು ಕೇಳದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ ವಿಡಿಯೋವನ್ನು ಇಟ್ಟುಕೊಂಡು, ಮನಗೆ ಸ್ನೇಹಿತರನ್ನು ಕರೆದುಕೊಂಡು ಬಂದು ಪತ್ನಿಗೆ ಅವರ ಜೊತೆಗೂ ಮಲಗು ಎಂದು ಒತ್ತಾಯಿಸಿದ್ದನು ಎಂದು ಸ್ವತಃ ಪತ್ನಿಯೇ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

ಜನವರಿಯಲ್ಲಿ ಅತುಲ್ ಮನೆಗೆ ಕುಡಿದು ಬಂದು ಗಲಾಟೆ ಮಾಡಿದ್ದನು. ಸ್ನೇಹಿತ ಸಂಜಯ್ ಕೌಷಿಕ್‍ನನ್ನು ಮನೆಗೆ ಕರೆದುಕೊಂಡು ಬಂದು ನನಗೆ ಆತನ ಜೊತೆ ಸೆಕ್ಸ್ ಮಾಡು ಎಂದು ಒತ್ತಾಯಿಸಿದ್ದನು. ಆದರೆ ಇದಕ್ಕೆ ನಾನು ನಿರಾಕರಿಸಿದಾಗ ಸಿಟ್ಟಿಗೆದ್ದ ಅತುಲ್ ನನಗೆ ಹೊಡೆದು, ಚಿತ್ರಹಿಂಸೆ ಕೊಟ್ಟು ಸ್ನೇಹಿತನೊಂದಿಗೆ ರೂಂನಲ್ಲಿ ಕೂಡ ಹಾಕಿದ್ದನು. ಅಲ್ಲಿ ಸಂಜಯ್ ನನ್ನನ್ನು ಅತ್ಯಾಚಾರ ಮಾಡಿದನು ಎಂದು ಆರೋಪಿ ಪತ್ನಿ ಪೊಲೀಸರಿಗೆ ತಿಳಿಸಿದ್ದಾರೆ.

ಅಲ್ಲದೆ ಸಂಜಯ್ ಮನೆಯಿಂದ ಹೋದ ಬಳಿಕ ಇನ್ನೋರ್ವ ಸ್ನೇಹಿತ ಪುಷ್ಪೇಂದ್ರ ಮಿಶ್ರಾನನ್ನು ಅತುಲ್ ಮನೆಗೆ ಕರೆದುಕೊಂಡು ಬಂದಿದ್ದಾನೆ. ಆತನ ಜೊತೆ ಕೂಡ ನನಗೆ ಮಲಗುವಂತೆ ಒತ್ತಾಯಿಸಿದನು. ಆಗಲೂ ನಾನು ನಿರಾಕರಿಸಿದ್ದೆ. ಆದರೆ ಪುಷ್ಪೇಂದ್ರ ನನ್ನ ಮೇಲೆ ಅತ್ಯಾಚಾರ ಎಸಗಿ ಮನೆಯಿಂದ ಹೋದ. ನಂತರ ಅತುಲ್ ಕೂಡ ನನ್ನನ್ನು ಅಸಹಜ ಲೈಂಗಿಕತೆಗೆ ಬಳಸಿಕೊಂಡು ಕಿರುಕುಳ ನೀಡಿದ, ಹಿಂಸೆಕೊಟ್ಟು ದೌರ್ಜನ್ಯ ನಡೆಸಿದ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಸಂಬಂಧ ಸೆ. 17ರಂದು ಮಹಿಳೆ ಪತಿ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ದೂರು ನೀಡಿದ್ದು, ಪೊಲೀಸರು ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 376/377/34 ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *