ಡಿಕೆಶಿಗೆ ಇಲ್ಲ ರಿಲೀಫ್-ಶನಿವಾರಕ್ಕೆ ಜಾಮೀನು ಆದೇಶ ಕಾಯ್ದಿರಿಸಿದ ಕೋರ್ಟ್

ನವದೆಹಲಿ: ತಿಹಾರ್ ಜೈಲಲ್ಲಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ಇವತ್ತು ಕೂಡ ಬೇಲ್ ಸಿಕ್ಕಿಲ್ಲ. ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಸಂಬಂಧ ಸುಮಾರು 3 ಗಂಟೆಗೂ ಅಧಿಕ ಕಾಲ ವಾದ-ಪ್ರತಿವಾದ ಆಲಿಸಿದ ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ, ಆದೇಶವನ್ನು ಶನಿವಾರ ಕಾಯ್ದಿರಿಸಿದ್ದಾರೆ. ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಬಾರದೆಂದು ಇಡಿ ಪರ ವಕೀಲರು ಹೊಸ ಹೊಸ ವಿಷಯಗಳನ್ನು ಕೋರ್ಟ್ ನಲ್ಲಿ ಪ್ರಸ್ತಾಪಿಸಿದರು.

ದೊಡ್ಡ ದೊಡ್ಡ ಬ್ಯಾಗ್‍ಗಳಲ್ಲಿ ಹೊತ್ತು ತಂದಿದ್ದ ದಾಖಲೆಗಳನ್ನು ಕೋರ್ಟ್ ಮುಂದೆ ಇಟ್ಟು, ಡಿಕೆ ಶಿವಕುಮಾರ್ ಅವರಿಗೆ ಯಾವುದೇ ಕಾರಣಕ್ಕೂ ಜಾಮೀನು ನೀಡೋದು ಬೇಡ ಎಂದು ಇಡಿ ಪರ ವಕೀಲರು ವಾದ ಮಂಡಿಸಿದರು. ಡಿಕೆ ಶಿವಕುಮಾರ್ ತಾಯಿ ಗೌರಮ್ಮ, ಪುತ್ರಿ ಐಶ್ವರ್ಯ ಹೆಸರಿನಲ್ಲಿ ನಡೆದಿರುವ ವ್ಯವಹಾರಗಳ ಮಾಹಿತಿಯನ್ನು ನ್ಯಾಯಾಲಯದ ಗಮನಕ್ಕೆ ತಂದರು. ಇದಕ್ಕೆ ಡಿಕೆಶಿ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಬೇಲ್ ನೀಡಬೇಕು ಎಂದು ಮನವಿ ಮಾಡಿಕೊಂಡರು. ಕೊನೆಗೆ ನ್ಯಾಯಮೂರ್ತಿಗಳು, ಶನಿವಾರ ಆದೇಶವನ್ನು ಕಾಯ್ದಿರಿಸಿದರು.

ಇದಕ್ಕೂ ಮುನ್ನ ಮಧ್ಯಾಹ್ನ 3.30ಕ್ಕೆ ವಿಚಾರಣೆ ಆರಂಭವಾದಾಗ ಇ.ಡಿ ಪರ ವಕೀಲರು ಬಂದಿರಲಿಲ್ಲ. ಇದಕ್ಕೆ ಗರಂ ಆದ ನ್ಯಾಯಮೂರ್ತಿಗಳು, ವಿಚಾರಣೆಯನ್ನು ಮುಂದೂಡಿದರು. ಕೂಡಲೇ ಕೋರ್ಟಿಗೆ ಆಗಮಿಸಿದ ಇ.ಡಿ ಪರ ವಕೀಲ ಕೆಎಂ ನಟರಾಜ್, ಜಡ್ಜ್ ಕೊಠಡಿಗೆ ಹೋಗಿ ಚರ್ಚೆ ನಡೆಸಿದ್ರು. ಬಳಿಕ ಅರ್ಜಿದಾರರ ಒಪ್ಪಿಗೆ ಪಡೆದ ನ್ಯಾಯಮೂರ್ತಿಗಳು ವಿಚಾರಣೆ ನಡೆಸಿದರು.

ಇಡಿ ಪರ ವಕೀಲರ ವಾದ ಏನು?
* ಭ್ರಷ್ಟಾಚಾರದಲ್ಲಿ ಡಿಕೆ ಶಿವಕುಮಾರ್ ದಾಖಲೆ ಮಾಡಿದ್ದಾರೆ.
* ಅಕ್ರಮ ಆಸ್ತಿಯಲ್ಲಿ ಡಿಕೆಶಿ ತ್ರಿಬಲ್ ಸೆಂಚುರಿ ಬಾರಿಸಿದ್ದಾರೆ.
* ಮುಂದೆ ಮತ್ತಷ್ಟು ಮಂದಿಯನ್ನು ವಿಚಾರಣೆ ನಡೆಸಲಾಗುತ್ತದೆ.
* ಕೃಷಿಯಿಂದ ಹಣ ಬಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿಕೊಂಡಿದ್ದು, ಆದಾಯದ ಮೂಲವನ್ನು ತೋರಿಸಿಲ್ಲ.
* ಡಿಕೆಶಿ 24 ಕೃಷಿ ಆಸ್ತಿ, ಸುರೇಶ್ 27 ಕೃಷಿ ಆಸ್ತಿ, ಗೌರಮ್ಮ 38 ಕೃಷಿ ಆಸ್ತಿ ಹೊಂದಿದ್ದಾರೆ.
* 24 ವರ್ಷದ ಮಗಳಿಂದ 108 ಕೋಟಿ ಆಸ್ತಿ ಘೋಷಣೆ.
* ಈ 108 ಕೋಟಿ ಹಣದ ಮೂಲಕ್ಕೆ ತಳಹದಿಯೇ ಇಲ್ಲ.
* ಲೋನ್ ಕೊಟ್ಟವರು ಯಾರೆಂದು ಡಿಕೆ ಮಗಳಿಗೆ ಗೊತ್ತಿಲ್ಲ.
* ಅಕ್ರಮ ಹಣ ವರ್ಗಾವಣೆಯ ಕ್ಲಾಸಿಕ್ ಕೇಸ್ ಇದಾಗಿದ್ದು, ಸಾಕ್ಷ್ಯ ನಾಶ ಆಗಿರೋದಕ್ಕೆ ನಮ್ಮಲ್ಲಿ ಸಾಕ್ಷ್ಯ ಇದೆ.
* ಡಿಕೆ ಶಿವಕುಮಾರ್ ಬೇಲ್ ಕೊಟ್ರೆ ಮತ್ತೆ ಸಾಕ್ಷ್ಯ ನಾಶ ಆಗುವ ಸಾಧ್ಯತೆಗಳು ಹೆಚ್ಚಿವೆ.

ಡಿಕೆಶಿ ಪರ ವಕೀಲರ ವಾದ
* ಇಡಿ ವಕೀಲರ ವಾದಕ್ಕೆ ನೊಬೆಲ್ ಪ್ರಶಸ್ತಿ ಕೊಡಬೇಕು.
* 800 ಕೋಟಿ ಆಸ್ತಿಗೆ ದಾಖಲೆ ನೀಡಲಾಗಿದೆ.
* ಇದೇ ರೀತಿಯ ಪ್ರಕರಣಗಳಲ್ಲಿ ಜಾಮೀನು ನೀಡಲಾಗಿದೆ.
* ನೋಟ್ ಬ್ಯಾನ್ ಆದ ಕೆಲವೇ ದಿನಗಳಲ್ಲಿ ಐಟಿ ರೇಡ್ ನಡೆದಿತ್ತು.
* ಹೀಗಾಗಿ ಹೊಸನೋಟು ಜೊತೆ ಹಳೆ ನೋಟುಗಳು ಸಿಕ್ಕಿವೆ.
* ದೆಹಲಿಯಲ್ಲಿ ಸಿಕ್ಕ ಹಣವನ್ನೆಲ್ಲಾ ಡಿಕೆಶಿಯದ್ದೇ ಎಂದು ಸುಳ್ಳು ಹೇಳ್ತಿದ್ದಾರೆ.
* ಡಿಕೆಶಿ ಅಕ್ರಮ ಆಸ್ತಿ ಮಾಡಿದ್ರೆ ಐಟಿ ತನಿಖೆ ಮಾಡಲಿ.. ಇಡಿ ಯಾಕೆ?

Comments

Leave a Reply

Your email address will not be published. Required fields are marked *