ವರ `ಚೋಲಿ ಕೆ ಪೀಚೆ ಕ್ಯಾ ಹೈ’ ಡ್ಯಾನ್ಸ್ ಮಾಡಿದ್ದಕ್ಕೆ ಮದ್ವೆ ನಿಲ್ಲಿಸಿದ ವಧುವಿನ ತಂದೆ

ನವದೆಹಲಿ: ಮದುವೆಯಲ್ಲಿ ವರ ಡ್ಯಾನ್ಸ್ ಮಾಡಿದ್ದಕ್ಕೆ ವಧುವಿನ ತಂದೆ ಮದುವೆಯನ್ನೇ ನಿಲ್ಲಿಸಿದ ವಿಚಿತ್ರ ಘಟನೆಯೊಂದು ನವದೆಹಲಿಯಲ್ಲಿ (NewDelhi) ನಡೆದಿದೆ.

ಸಾಮಾನ್ಯವಾಗಿ ಮದುವೆಗಳಲ್ಲಿ ಡ್ಯಾನ್ಸ್ ಮಾಡುವುದು ಸಹಜ. ಆದರೆ ದೆಹಲಿಯ ಮದುವೆಯೊಂದರಲ್ಲಿ ಡ್ಯಾನ್ಸ್ ಮಾಡಿದ್ದಕ್ಕೆ ಅಚಾತುರ್ಯ ನಡೆದಿದೆ. ಮದುವೆಯ ಮೆರವಣಿಗೆ ವೇಳೆ ವರನ ಸ್ನೇಹಿತರ ಒತ್ತಾಯದ ಮೇರೆಗೆ ವರ ಡ್ಯಾನ್ಸ್ ಮಾಡಿದ್ದಕ್ಕೆ ಮದುವೆ ನಿಂತಿಹೋಗಿದೆ.ಇದನ್ನೂ ಓದಿ: ಚರ್ಚ್‌ನಲ್ಲಿ ಪಾದ್ರಿ ಮೇಲೆ ಭಿನ್ನಮತೀಯ ಗುಂಪಿನಿಂದ ಹಲ್ಲೆ

ಮೆರವಣಿಗೆಯಲ್ಲಿ ವರನಿಗೆ ಡ್ಯಾನ್ಸ್ ಮಾಡುವಂತೆ ಆತನ ಸ್ನೇಹಿತರು ಒತ್ತಾಯಿಸಿದ್ದಾರೆ. ಆಗ ಬಾಲಿವುಡ್‌ನ `ಕಳ್ ನಾಯಕ್’ ಸಿನಿಮಾದ ಪ್ರಸಿದ್ಧ ಹಾಡು `ಚೋಲಿ ಕೆ ಪೀಚೆ ಕ್ಯಾ ಹೈ’ ಪ್ರಾರಂಭವಾಗಿದ್ದು, ಡ್ಯಾನ್ಸ್ ಮಾಡಲು ಪ್ರಾರಂಭಿಸಿದರು. ಅಲ್ಲಿದ್ದ ಅತಿಥಿಗಳು ಕೂಡ ಆತನನ್ನು ಹುರಿದುಂಬಿಸಿದರು. ಆದರೆ ಇದನ್ನು ಕಂಡ ವಧುವಿನ ತಂದೆ ಕೋಪಗೊಂಡು ಮೆರವಣಿಗೆಯನ್ನು ನಿಲ್ಲಿಸಿ ಮದುವೆ ನಿಲ್ಲಿಸಿದ್ದಾರೆ.

ಇದನ್ನು ಕಂಡ ವರ, ವಧುವಿನ ತಂದೆಯ ಬಳಿ ಹೋಗಿ ಇದೆಲ್ಲವೂ ಮೋಜು, ತಮಾಷೆ ಎಂದು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾವುದನ್ನು ಲೆಕ್ಕಿಸದೇ ಸಂಪೂರ್ಣವಾಗಿ ವಧು ಹಾಗೂ ವರನ ಮನೆಯವರೊಂದಿಗಿನ ಸಂಪರ್ಕವನ್ನು ಕಡಿದುಕೊಂಡರು ಎಂದು ಮೂಲಗಳು ತಿಳಿಸಿವೆ.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅತಿಥಿಗಳನ್ನು ರಂಜಿಸಲು ವರ ಡ್ಯಾನ್ಸ್ ಮಾಡಿರಬಹುದು, ವಧುವಿನ ತಂದೆ ಸರಿಯಾಗಿ ಮಾಡಿದ್ದಾರೆ, ಇಲ್ಲದಿದ್ದರೆ ಪ್ರತಿ ದಿನ ಡ್ಯಾನ್ಸ್ ನೋಡಬೇಕಿತ್ತು ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಉತ್ತರ ಪ್ರದೇಶದ ಚಂದೌಲಿಯಲ್ಲಿ ವರನೊಬ್ಬ ಊಟ ಬಡಿಸಲು ವಿಳಂಬ ಮಾಡಿದ ಕಾರಣ ತನ್ನ ಮದುವೆಯನ್ನು ರದ್ದುಗೊಳಿಸಿದ್ದ. ಬಳಿಕ ಬೇರೆಯವರೊಂದಿಗೆ ಮದುವೆ ಮಾಡಿಕೊಂಡಿದ್ದ ಘಟನೆ ನಡೆದಿತ್ತು.ಇದನ್ನೂ ಓದಿ: Mandya | ಕೇಕ್‌ ಕೊಡಿಸಿ, ಚಾಕು ಹಾಕುವುದಾಗಿ ಬೆದರಿಸಿ ಬಾಲಕಿ ಮೇಲೆ ಗ್ಯಾಂಗ್‌ ರೇಪ್