ಇಂಟರ್​ವ್ಯೂಗೆ ಬಂದಿದ್ದ ಯುವತಿ ಮೇಲೆ ಗ್ಯಾಂಗ್ ರೇಪ್ – ಕಟ್ಟಡದಿಂದ ಹೊರಗೆ ಎಸೆದ ಪಾಪಿಗಳು

RAPE

ನವದೆಹಲಿ: ಇಂಟರ್​ವ್ಯೂಗಾಗಿ ದೆಹಲಿಯಿಂದ ರಾಜಸ್ಥಾನದ ಚುರುಗೆ ಬಂದಿದ್ದ 25 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ನಂತರ ಆಕೆಯನ್ನು ಕಟ್ಟಡದ ಮೊದಲ ಮಹಡಿಯ ಕಿಟಕಿಯಿಂದ ಹೊರಗೆ ಎಸೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶುಕ್ರವಾರ ಚುರು ರೈಲು ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಆರೋಪಿಗಳಲ್ಲಿ ಒಬ್ಬ ಆಕೆಗೆ ಕೆಲಸ ಕೊಡಿಸುವುದಾಗಿ ಹೇಳಿದ್ದರಿಂದ ಸಂತ್ರಸ್ತೆ ನವದೆಹಲಿಯಿಂದ ರಾಜಸ್ಥಾನಕ್ಕೆ ಚುರುವಿಗೆ ಬಂದಿದ್ದಳು. ನಂತರ ನಾಲ್ವರು ಆರೋಪಿಗಳು ಆಕೆಯನ್ನು ಹೋಟೆಲ್‍ಗೆ ಕರೆದೊಯ್ದರು. ಅಲ್ಲಿ ದೇವೇಂದ್ರ ಸಿಂಗ್ ಮತ್ತು ವಿಕ್ರಮ್ ಸಿಂಗ್ ಮೊದಲಿಗೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಬಳಿಕ ಆಕೆಯ ಕೈಗಳನ್ನು ಹಗ್ಗದಿಂದ ಕಟ್ಟಿ ಹೋಟೆಲ್‍ನ ಮೊದಲ ಮಹಡಿಯ ಕಿಟಕಿಯಿಂದ ಹೊರಗೆ ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಭವಿಷ್ಯದ ದಿನಗಳಲ್ಲಿ ವಾಹನ ಚಾಲನೆ ಮಾಡುವಾಗ ಫೋನ್‍ನಲ್ಲಿ ಮಾತಾಡಿದ್ರೆ ಅದು ಅಪರಾಧವಲ್ಲ: ನಿತಿನ್ ಗಡ್ಕರಿ

ಇದೀಗ ಯುವತಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರ ಹಾಗೂ ಹಲ್ಲೆ ಪ್ರಕರಣ ದಾಖಲಿಸಲಾಗಿದೆ. ಉಳಿದ ಇನ್ನಿಬ್ಬರು ಆರೋಪಿಗಳನ್ನು ಭವಾನಿ ಸಿಂಗ್ ಮತ್ತು ಸುನೀಲ್ ರಜಪೂತ್ ಎಂದು ಗುರುತಿಸಲಾಗಿದ್ದು, ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಡಿಎಸ್‍ಪಿ ಮಮತಾ ಸಾರಸ್ವತ್ ಹೇಳಿದ್ದಾರೆ. ಇದನ್ನೂ ಓದಿ: ಪತ್ನಿ ಬಿಟ್ಟು ಪ್ರೇಯಸಿಯನ್ನು ಮದುವೆಯಾಗಲು ಹೊರಟಿದ್ದ ಭೂಪ – ಕುಟುಂಬಸ್ಥರಿಂದಲೇ ಬಿತ್ತು ಗೂಸಾ

Comments

Leave a Reply

Your email address will not be published. Required fields are marked *