ಫೇಸ್‍ಬುಕ್‍ನಲ್ಲಿ 47ರ ಆಂಟಿಯೊಂದಿಗೆ 26ರ ಯುವಕನ ಲವ್!

ನವದೆಹಲಿ: ಯುವಕನೊಬ್ಬ ತನ್ನ ಜೊತೆ ಲೀವ್ ಇನ್ ರಿಲೇಶನ್ ಶಿಪ್‍ನಲ್ಲಿದ್ದ ಮಹಿಳೆಯನ್ನು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ನಗರದ ಗಾಜಿಯಾಬಾದ್ ನಲ್ಲಿ ನಡೆದಿದೆ.

47 ವರ್ಷದ ಮಹಿಳೆಯ ಕೊಲೆ ಮಾಡಿದ 26 ವರ್ಷದ ಯುವಕ ಸ್ಥಳೀಯ ಪೊಲೀಸ್ ಠಾಣೆಗೆ ಬಂದು ತಪ್ಪೊಪ್ಪಿಕೊಂಡು ಶರಣಾಗಿದ್ದಾನೆ. ಯುವಕ ಮತ್ತು ಮಹಿಳೆ ಎರಡು ತಿಂಗಳಿನಿಂದ ಒಂದೇ ಮನೆಯಲ್ಲಿ ವಾಸವಾಗಿದ್ರು. ಆದ್ರೆ ಶುಕ್ರವಾರ ರಾತ್ರಿ ಮಹಿಳೆಯ ದುಪ್ಪಟ್ಟದಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾನೆ.

ಕೆಲವು ತಿಂಗಳ ಹಿಂದೆ ಯುವಕನಿಗೆ ಮಹಿಳೆ ಫೇಸ್ ಬುಕ್‍ನಲ್ಲಿ ಪರಿಚಯವಾಗಿದ್ದಳು. ಪರಿಚಯದ ಬಳಿಕ ಯುವಕ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನು. ಇಬ್ಬರೂ ದೆಹಲಿಯ ಗಾಜಿಯಾಬಾದ್ ಬಳಿ ಮನೆ ಮಾಡಿ ಜೊತೆಯಾಗಿಯೇ ವಾಸವಾಗಿದ್ದರು.

ಯುವಕನಿಗೆ ನಿನ್ನ ಕುಟುಂಬಸ್ಥರನ್ನು ಬಿಟ್ಟು ಬಂದು ನನ್ನ ಜೊತೆ ವಾಸಿಸಬೇಕು ಅಂತಾ ಮಹಿಳೆ ಬ್ಲಾಕ್ ಮೇಲೆ ಮಾಡಲಾರಂಭಿಸಿದ್ದಾಳೆ. ಇದರಿಂದ ರೊಚ್ಚಿಗೆದ್ದ ಯುವಕ ಆಕೆಯನ್ನು ಕೊಲೆ ಮಾಡಿದ್ದಾನೆ. ಈ ಮೊದಲು ಯುವಕ ಮತ್ತೊಬ್ಬ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿರಬಹುದು ಅಥವಾ ಆತನಿಗೆ ಮೊದಲೇ ಮದ್ವೆ ಆಗಿರುವ ಬಗ್ಗೆ ಸಾಕಷ್ಟು ಅನುಮಾನಗಳಿವೆ ಅಂತಾ ಪೊಲೀಸರು ಶಂಕಿಸಿದ್ದಾರೆ.

ಯುವಕ ನಗರದಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದನು. ಕೊಲೆಯಾದ ಮಹಿಳೆ ಮುಂಬೈನ ಗೋರೇಗಾಂವ್ ಮೂಲದವಳು ಅಂತಾ ಮಾಹಿತಿಗಳು ಲಭ್ಯವಾಗಿದ್ದು, ಯುವಕನ ವಿಚಾರಣೆ ನಡೆಸಲಾಗ್ತಿದೆ ಅಂತಾ ಪೊಲೀಸರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *