ಮೆಟ್ರೋ ನಿಲ್ದಾಣದ ಗ್ರಿಲ್‍ನಲ್ಲಿ ಸಿಲುಕಿದ್ದ ಬಾಲಕಿ ರಕ್ಷಿಸಿದ CISF ಸಿಬ್ಬಂದಿ!

ನವದೆಹಲಿ: ಮೆಟ್ರೋ ನಿಲ್ದಾಣದಲ್ಲಿ ಕಿರಿದಾದ ಕಟ್ಟೆಯಲ್ಲಿ 9 ವರ್ಷದ ಬಾಲಕಿ ಸಿಕ್ಕಿಕೊಂಡಿದ್ದು, ಆಕೆಯನ್ನು ಸಿಐಎಸ್‍ಎಫ್ ಸಿಬ್ಬಂದಿ ರಕ್ಷಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಭಾನುವಾರ ಸಂಜೆ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಗ್ರಿಲ್‍ನ ಹಿಂದೆ ಒಂಬತ್ತು ವರ್ಷದ ಬಾಲಕಿ ಸಿಕ್ಕಿಕೊಂಡಿದ್ದಳು. ಇದನ್ನು ಗಮನಿಸಿದ ಸ್ಥಳೀಯರು ಆಕೆಯ ರಕ್ಷಣೆಗಾಗಿ ಸಿಬ್ಬಂದಿಯನ್ನು ಕರೆದಿದ್ದು, ಸಿಐಎಸ್‍ಎಫ್ ಸಿಬ್ಬಂದಿ ಬಾಲಕಿಯನ್ನು ರಕ್ಷಿಸಿದ್ದಾರೆ. ಇದನ್ನೂ ಓದಿ: ರಷ್ಯಾ, ಉಕ್ರೇನ್ ಸಂಘರ್ಷ ಕೃಷಿ ರಫ್ತಿನ ಮೇಲೆ ಪರಿಣಾಮ ಬೀರುತ್ತೆ: ನಿರ್ಮಲಾ

ನಡೆದಿದ್ದೇನು?
ಬಾಲಕಿ ಮೆಟ್ಟಿಲುಗಳ ಸುತ್ತಲೂ ಆಟವಾಡುತ್ತಿದ್ದಳು. ಈ ವೇಳೆ ಬಾಲಕಿ ಮೆಟ್ಟಿಲುಗಳ ಮೇಲೆ ನೆಗೆಯುವ ಬದಲಿಗೆ ಪಕ್ಕಕ್ಕೆ ನೆಗೆದಿದ್ದಾಳೆ. ಪರಿಣಾಮ ಆಕೆ 15-20 ಅಡಿ ಎತ್ತರದ ಕಟ್ಟೆಯ ಮೇಲೆ ಸಿಲುಕಿಕೊಂಡಿದ್ದಾಳೆ. ಇದನ್ನು ನೋಡಿದ ಬಾಲಕಿಯ ಕುಟುಂಬ ಸಹಾಯಕ್ಕಾಗಿ ಕಿರುಚಲು ಪ್ರಾರಂಭಿಸಿದೆ. ನಂತರ ಸಿಐಎಸ್‍ಎಫ್ ಕ್ವಿಕ್ ರೆಸ್ಪಾನ್ಸ್ ತಂಡವನ್ನು ಸಹಾಯಕ್ಕಾಗಿ ಕರೆ ಮಾಡಲಾಗಿದೆ.

ಸುದ್ದಿ ತಿಳಿದ ತಕ್ಷಣ ಬಂದ ಸಿಬ್ಬಂದಿ ಬಾಲಕಿಯನ್ನು ರಕ್ಷಿಸಿದ್ದಾರೆ. ಪ್ರಸ್ತುತ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ವೀಡಿಯೋದಲ್ಲಿ, ಸಿಐಎಸ್‍ಎಫ್ ಸಿಬ್ಬಂದಿ ಗ್ರಿಲ್ ನಲ್ಲಿ ಸಿಕ್ಕಿಕೊಂಡಿದ್ದ ಬಾಲಕಿಯನ್ನು ಹಿಂದಿನಿಂದ ಹೊರಬರಲು ಸಹಾಯ ಮಾಡುವುದನ್ನು ಸೆರೆಹಿಡಿಯಲಾಗಿದೆ. ಅಲ್ಲದೆ ಬಾಲಕಿಯನ್ನು ಸೂಕ್ಷ್ಮವಾಗಿ ಮೆಟ್ಟಿಲುಗಳಿಂದ ಜಾಗಕ್ಕೆ ಕರೆದುಕೊಂಡು ಹೋಗಲು ಹಗ್ಗದ ಸಹಾಯ ಪಡೆದುಕೊಳ್ಳುತ್ತಿರುವುದು ವೀಡಿಯೋದಲ್ಲಿ ಕಾಣಬಹುದು.  ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಯ್ತು ಪುಡಿ ರೌಡಿಗಳ ಹಾವಳಿ

ವೀಡಿಯೋವನ್ನು ಸಿಐಎಸ್‍ಎಫ್ ಟ್ಟಿಟ್ಟರ್, ಫೆಬ್ರವರಿ 27ರಂದು ನಿರ್ಮಾನ್ ವಿಹಾರ್ ಮೆಟ್ರೋ ನಿಲ್ದಾಣದ ಪ್ರದೇಶದಲ್ಲಿ ಆಟವಾಡುತ್ತಿದ್ದ ಮಗು ಗ್ರಿಲ್‍ನಲ್ಲಿ ಸಿಲುಕಿಕೊಂಡಿತು. ಸಿಐಎಸ್‍ಎಫ್ ಕ್ಯೂಆರ್‌ಟಿ ತಂಡದ ಸಿಟಿ/ಜಿಡಿ ನಾಯಕ್ ಕೂಡಲೇ ಸ್ಪಂದಿಸಿ ಮಗುವನ್ನು ರಕ್ಷಿಸಿದ್ದಾರೆ ಎಂದು ಬರೆದು ಟ್ವೀಟ್ ಮಾಡಿದೆ.

Comments

Leave a Reply

Your email address will not be published. Required fields are marked *