ವಿಧಾನಸಭೆ ಚುನಾವಣೆ- ಮತದಾನದತ್ತ ಆಸಕ್ತಿ ತೋರದ ರಾಷ್ಟ್ರ ರಾಜಧಾನಿ ಮಂದಿ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿ ವಿಧಾನಸಭೆಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ ಎಂಟು ಗಂಟೆಯಿಂದ ಮತದಾನ ಪ್ರಕ್ರಿಯೆ ಆರಂಭವಾಗಿದ್ದು, ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬೆಳಗ್ಗೆಯಿಂದಲೂ ಮತಗಟ್ಟೆಗಳತ್ತ ಬಂದು ಮತ ಚಲಾಯಿಸುವವರ ಪ್ರಮಾಣದಲ್ಲಿ ಕಡಿಮೆಯಾಗಿದ್ದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಶೇ.17 ರಷ್ಟು ಮತ ಚಲಾವಣೆಯಾಗಿದೆ.

ಬೆಳಗ್ಗೆ 11 ಗಂಟೆ ವೇಳೆಗೆ ಶೇ.12.24 ರಷ್ಟು ಮತ ಚಲಾವಣೆಯಾಗಿತ್ತು 12 ಗಂಟೆಗೆ ವೇಳೆಗೆ ಶೇ.16.60 ರಷ್ಟು ಮತ ಚಲಾವಣೆಯಾಗಿದೆ. ಈಶಾನ್ಯ ದೆಹಲಿಯಲ್ಲಿ ಶೇ.19.85 ಅತಿ ಹೆಚ್ಚು, ದೆಹಲಿ ಸೆಂಟ್ರಲ್ ನಲ್ಲಿ ಶೇ.13.31 ಕನಿಷ್ಠ ಮತ ಚಲಾವಣೆ ದಾಖಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿಕೊಂಡರೆ ಭಾರೀ ಪ್ರಮಾಣದ ಇಳಿಕೆ ಎಂದು ಚುನಾವಣಾ ಅಧಿಕಾರಿಗಳು ಪ್ರತಿಕ್ರಿಯಿಸಿದ್ದಾರೆ. ಸರ್ಕಾರಿ ರಜೆಯ ಹಿನ್ನೆಲೆಯಲ್ಲಿ ಸಂಜೆ ವೇಳೆಗೆ ಮತಗಟ್ಟೆಗಳತ್ತ ಬಂದು ಜನರು ಮತದಾನ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗುತ್ತಿದೆ.

ದೆಹಲಿಯಲ್ಲಿ ಒಟ್ಟು 1.46 ಕೋಟಿ ಮತದಾರರಿದ್ದು 13571 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಸಂಜೆ ಆರು ಗಂಟೆವರೆಗೂ ಮತದಾನ ನಡೆಯಲಿದ್ದು, ಫೆಬ್ರವರಿ 11ರಂದು ಫಲಿತಾಂಶ ಹೊರಬೀಳಲಿದೆ.

Comments

Leave a Reply

Your email address will not be published. Required fields are marked *