ಸೂಪರ್ ಹಾಟ್ ದೀಪಿಕಾ ಪಡುಕೋಣೆ ತೊಟ್ಟ ಡ್ರೆಸ್ ಬೆಲೆ ಎಷ್ಟು ಗೊತ್ತಾ?

ಮುಂಬೈ: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಸಿನಿಮಾ ವಿಚಾರವಾಗಿ, ಫೋಟೋಶೂಟ್ ಮೂಲಕ ಸುದ್ದಿಯಲ್ಲಿರುವುದು ಹೊಸತೇನು ಅಲ್ಲ. ಅವರು ತೊಡುವ ವಿಭಿನ್ನವಾದ ಮತ್ತು ದುಬಾರಿ ಬೆಲೆಯ ಬಟ್ಟೆಗಳು ನೆಟ್ಟಿಗರ ಕಣ್ಣನ್ನು ಕುಕ್ಕುತ್ತಿವೆ. ಇದೀಗ ದೀಪಿಕಾ ಪಡುಕೋಣೆ ಅವರ ಹಾಟ್ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.

 

View this post on Instagram

 

A post shared by Shaleena Nathani (@shaleenanathani)

ಶಕುನ್ ಬಾತ್ರಾ ನಿರ್ದೇಶನದ ಗೆಹ್ರೈಯಾನ್ ಚಿತ್ರದ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸೂಪರ್ ಹಾಟ್ ದೀಪಿಕಾ ಪಡುಕೋಣೆ ಕಪ್ಪು ಬಣ್ಣದ (faux leather mini dress) ಮಿನಿ ಡ್ರೆಸ್ ತೊಟ್ಟು ಮಿಂಚಿದ್ದಾರೆ. ಈ ಫೋಟೋಗಳನ್ನು ಸ್ಟೈಲಿಸ್ಟ್ ಶಲೀನ್ ನಥಾನಿ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗಳಲ್ಲಿ ನಟಿ ಕಪ್ಪು ಬಣ್ಣದ ಮಿನಿ ಡ್ರೆಸ್ ಧರಿಸಿದ್ದಾರೆ. ಲಂಡನ್ ಮೂಲದ ವಸ್ತ್ರವಿನ್ಯಾಸಕಾರ ಈ ಬಟ್ಟೆಯನ್ನು ಡಿಸೈನ್ ಮಾಡಿದ್ದಾರೆ. ಈ ಉಡುಪಿನ ಬೆಲೆ 41 ಸಾವಿರ ರೂಪಾಯಿ ಎಂದು ತಿಳಿದು ಬಂದಿದೆ.

ದೀಪಿಕಾ ಪಡುಕೋಣೆ ಮಿನಿ ಡ್ರೆಸ್‍ಗೆ ಹೊಂದಿಕೆಯಾಗುವಂತೆ ಗೋಲ್ಡನ್ ಬಣ್ಣದ ಕಿವಿಯೋಲೆ, ಕಪ್ಪು ಬಣ್ಣದ ಪಾಯಿಂಟ್ ಹೀಲ್ಸ್ ಧರಿಸಿದ್ದಾರೆ. ಈ ಮಿನಿ ಡ್ರೆಸ್‍ನಲ್ಲಿ ದೀಪಿಕಾ ಪಡುಕೋಣೆ ಸಖತ್ ಬೋಲ್ಡ್ ಅಗಿ ಮಾದಕ ನೋಟವನ್ನು ಬೀರುತ್ತಾ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ನೋಡಿದ ಪಡ್ಡೆ ಹುಡುಗರ ದೀಪಿಕಾ ಅವರ ಹಾಟ್ ಅವತಾರಕ್ಕೆ ಕ್ಲಿನ್ ಬೋಲ್ಡ್ ಆಗಿದ್ದಾರೆ. ಇದನ್ನೂ ಓದಿ: ಅದ್ದೂರಿಯಾಗಿ ನಡೆಯುತ್ತಿದೆ ಮೌನಿ ರಾಯ್ ಅರಿಶಿನ ಶಾಸ್ತ್ರ

ಕೆಲವು ದಿನಗಳ ಹಿಂದೆ ಆಕರ್ಷಕ ವಿನ್ಯಾಸದ ಜೀಬ್ರಾ ಪ್ರಿಂಟ್‍ನ ಉಡುಪು ಧರಿಸಿ ನಟಿ ದೀಪಿಕಾ ಪಡುಕೋಣೆ ಫೋಟೊಗೆ ಪೋಸ್ ಕೊಟ್ಟಿದ್ದು, ಇಂಟರ್‍ನೆಟ್‍ನಲ್ಲಿ ವೈರಲ್ ಆಗಿತ್ತು. ಆದರೆ ಇದು ಪತಿ ಡ್ರೆಸ್ ಎಂದು ನೆಟ್ಟಿಗರು ಟ್ರೋಲ್ ಕೂಡಾ ಮಾಡಿದ್ದರು. ದೀಪಿಕಾ ಪತಿ ರಣವೀರ್ ಸಿಂಗ್ ಅವರು ವೈವಿಧ್ಯಮಯ ಫ್ಯಾಷನ್‍ಗೆ ಹೆಸರುವಾಸಿ. ಅವರ ವಿವಿಧ ರೀತಿಯ ಫ್ಯಾಷನ್ ಉಡುಗೆಗಳು ಹೊಸ ಚಿತ್ರದ ಪ್ರಚಾರದ ಸಂದರ್ಭದಲ್ಲಿ ಕಾಣಸಿಗುತ್ತವೆ. ಅದೇ ರೀತಿಯಲ್ಲಿ ದೀಪಿಕಾ ಕೂಡ ಸಾಗುತ್ತಿದ್ದಾರೆ ಎಂದು ನೆಟ್ಟಿಗರು ದೀಪಿಕಾ ಅವರ ಫೋಟೋಗೆ ಕಾಮೆಂಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *