ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಘೋಷಿಸಿದ ದೀಪಿಕಾ

ಮ್ಮ ತಂದೆಯ 70ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone)`ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್’ (PSB) ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ.

ಹೌದು, ದೀಪಿಕಾ ಪಡುಕೋಣೆ ತಂದೆ ಪ್ರಕಾಶ್ ಪಡುಕೋಣೆ (Prakash Padukone) ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಈ ಕುರಿತು ತಮ್ಮ ಇನಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ದೀಪಿಕಾ ಪಿಎಸ್‌ಬಿಯ ಸಂಸ್ಥಾಪಕಿಯಾಗಿರಲಿದ್ದು, ಪ್ರಕಾಶ್ ಪಡುಕೋಣೆ ಅವರು ಮಾರ್ಗದರ್ಶಕ ಹಾಗೂ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ. ಇನ್ನೂ ಬ್ಯಾಡ್ಮಿಂಟನ್ ಕಲಿಕೆಯ ಮೂಲಕ ಆರೋಗ್ಯದ ಕಡೆ ಗಮನಹರಿಸುವುದನ್ನು ಉತ್ತೇಜಿಸುವ ಗುರಿಯನ್ನು ಹೊಂದಿದ್ದಾರೆ.ಇದನ್ನೂ ಓದಿ: ಬಾಲಯ್ಯ ಜನ್ಮದಿನಕ್ಕೆ `ಅಖಂಡ-2′ ಟೀಸರ್ ರಿಲೀಸ್ – ಮಾಸ್ ಅವತಾರದಲ್ಲಿ ಅಬ್ಬರಿಸಿದ ನಂದಮೂರಿ ಬಾಲಕೃಷ್ಣ

ನನ್ನ ತಂದೆಯ ಬ್ಯಾಡ್ಮಿಂಟನ್ ಆಟವನ್ನು ನೋಡುತ್ತಾ, ಆಡುತ್ತಾ ಬೆಳೆದಿದ್ದೇನೆ. ಇದು ಓರ್ವ ವ್ಯಕ್ತಿಯ ಜೀವನವನ್ನು ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ಯಾವ ರೀತಿ ರೂಪಿಸುತ್ತದೆ ಎಂಬುದನ್ನು ನಾನು ನೇರವಾಗಿ ಕಂಡಿದ್ದೇನೆ. ಹೀಗಾಗಿ ಪಡುಕೋಣೆ ಸ್ಕೂಲ್ ಆಫ್ ಬ್ಯಾಡ್ಮಿಂಟನ್ ಮೂಲಕ ಜನರಿಗೆ ಹಂತ ಹಂತವಾಗಿ ಸಂತೋಷ ಮತ್ತು ಶಿಸ್ತಿನ ಪಾಠ ಮಾಡಲು ಬಯಸುತ್ತೇವೆ ಹಾಗೂ ಆರೋಗ್ಯದ ಕಡೆ ಹೆಚ್ಚಿನ ಗಮನ, ಕ್ರೀಡೆ ಯಾವ ರೀತಿ ಸ್ಪೂರ್ತಿ ನೀಡುತ್ತದೆ ಎನ್ನುವುದನ್ನು ತೋರಿಸುತ್ತೇವೆ ಎಂದು ತಿಳಿಸಿದ್ದಾರೆ.

ಈ ಮೂಲಕ ಪಿಎಸ್‌ಬಿಯನ್ನು ಒಂದು ವರ್ಷದ ಅಂತ್ಯದೊಳಗೆ 100 ಕೇಂದ್ರಗಳಿಗೆ ಹಾಗೂ 3 ವರ್ಷದೊಳಗೆ 250 ಕೇಂದ್ರಗಳಿಗೆ ವಿಸ್ತರಿಸುವ ಗುರಿಯನ್ನು ಹೊಂದಿದ್ದೇವೆ. ನಾನು ಬ್ಯಾಡ್ಮಿಂಟನ್ ಆಟಗಾರ್ತಿಯಾಗಿರಬಹುದು, ಆದರೆ ನನಗೆ ಇಷ್ಟವಾದ್ದದ್ದು ಮಾಡಲಿಂಗ್. ಹೀಗಾಗಿ ನಾನು ನನ್ನ ತಂದೆಯ ಉತ್ಸಾಹವನ್ನು ಜೀವಂತವಾಗಿರಿಸಲು ಬಯಸುತ್ತೇನೆ. ಜೊತೆಗೆ ಬ್ಯಾಡ್ಮಿಂಟನ್‌ನಿಂದ ಪ್ರೇರಿತರಾದ ಪೀಳಿಗೆಯನ್ನು ಹುಟ್ಟುಹಾಕಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.

ಸದ್ಯ ದೀಪಿಕಾ ಪಡುಕೋಣೆ ಜವಾನ್ ನಿರ್ದೇಶಕ ಅಟ್ಲೀ ಅವರ ಬಿಗ್-ಬಜೆಟ್ ಸೈನ್ಸ್ ಫಿಕ್ಷನ್‌ನಲ್ಲಿ ನಟಿಸಲಿದ್ದು, ಪುಷ್ಪಾ ಸ್ಟಾರ್ ಅಲ್ಲು ಅರ್ಜುನ್ (Allu Arjun) ಜೊತೆ ತೆರೆಹಂಚಿಕೊಳ್ಳಲಿದ್ದಾರೆ.ಇದನ್ನೂ ಓದಿ: ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ