ಮಾದಪ್ಪನ ಬೆಟ್ಟದಲ್ಲಿ ಸರಳವಾಗಿ ನಡೆದ ಹಾಲರುವೆ ಉತ್ಸವ

Male Mahadeshwara

ಚಾಮರಾಜನಗರ: ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಹಾಲುರುವೆ ಉತ್ಸವ ನಡೆಯಿತು.

ಕೊರೊನಾ ಸೋಂಕಿನ ಹಿನ್ನಲೆ ಈ ಬಾರಿಯೂ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ರದ್ದುಗೊಳಿಸಲಾಗಿದೆ. ಆದರೆ ಅಮಾವಾಸ್ಯೆ ದಿನವಾದ ಇಂದು ಸಾಂಪ್ರದಾಯಿಕವಾಗಿ ಹಾಲುರುವೆ ಉತ್ಸವ ನಡೆಸಲು ಅವಕಾಶ ನೀಡಲಾಗಿದ್ದು, ಹೊರಗಿನ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ ಮತ್ತು ಸ್ಥಳೀಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ:  ದೇವಸ್ಥಾನದ ಆವರಣದಲ್ಲಿ ಚಪ್ಪಲಿ ಧರಿಸಿ ವಿಕೃತಿ ಮೆರೆದಿದ್ದ ಪುಂಡರು ಅರೆಸ್ಟ್

Male Mahadeshwara

101 ಬೇಡಗಂಪಣ ಬಾಲಕಿಯರಿಂದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಹಾಲಹಳ್ಳದಿಂದ ನೀರು ಹೊತ್ತು ತರುವ ಹಾಲರುವೆ ಉತ್ಸವ ನಡೆಯಿತು. ಬಳಿಕ ಬೇಡಗಂಪಣ ಬಾಲಕಿಯರು ಹೊತ್ತು ತಂದ ಹಾಲಹಳ್ಳದ ನೀರಿನಿಂದ ಮಹದೇಶ್ವರನಿಗೆ ಅಭಿಷೇಕ ಮಾಡಲಾಯಿತು. ಲಕ್ಷಾಂತರ ಜನರು ಸೇರುತ್ತಿದ್ದ ಮಹದೇಶ್ವರ ಬೆಟ್ಟದ ದೀಪಾವಳಿ ಜಾತ್ರೆಗೆ ನಿರ್ಬಂಧ ಹೇರಲಾಗಿದ್ದು, ಭಕ್ತರಿಗೆ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇದನ್ನೂ ಓದಿ: ಪುನೀತ್ ಭೇಟಿಯಾಗುವ ಸೌಭಾಗ್ಯ ನನಗೆ ಸಿಕ್ಕಿಲ್ಲ: ವಿಜಯ್ ಸೇತುಪತಿ

Comments

Leave a Reply

Your email address will not be published. Required fields are marked *