ಊರಿಗೆ ಹೋಗಲಾರದೇ ಮೂಡಿತ್ತು ಬೇಸರ- ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿ ಸಡಗರ

ಮಂಗಳೂರು: ದೇಶದೆಲ್ಲೆಡೆ ದೀಪಾವಳಿ ಹಬ್ಬದ ಸಂಭ್ರಮ. ಆದರೆ ಶಿಕ್ಷಣಕ್ಕಾಗಿ ಮನೆಯವರಿಂದ ದೂರ ಇರುವ ವಿದ್ಯಾರ್ಥಿಗಳು (Stuents) ಮಾತ್ರ ಹಬ್ಬದಿಂದ ವಂಚಿತರಾಗುತ್ತಾರೆ. ಮಂಗಳೂರಿಗೆ ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ವಿದ್ಯಾಭ್ಯಾಸಕ್ಕಾಗಿ ಬಂದಿದ್ದು, ಅವರೆಲ್ಲ ದೀಪಾವಳಿ (Deepavali) ಯ ಸಂಭ್ರಮದಿಂದ ವಂಚಿತರಾಗಬಾರದರು ಎಂದು ಶಿಕ್ಷಣ ಸಂಸ್ಥೆಯೊಂದು ಕಾಲೇಜು ಕ್ಯಾಂಪಸ್‍ನಲ್ಲೇ ದೀಪಾವಳಿಯನ್ನು ಸಡಗರ ಸಂಭ್ರಮದಿಂದ ಆಚರಿಸಿದ್ದು ವಿಶೇಷವಾಗಿತ್ತು.

ದೀಪಾವಳಿಯನ್ನು ಎಲ್ಲೆಡೆ ದೀಪ ಹಚ್ಚಿ, ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮದಿಂದ ಆಚರಿಸುತ್ತಾರೆ. ಆದರೆ ದೇಶದ ವಿವಿಧೆಡೆಯಿಂದ ವಿದ್ಯಾಭ್ಯಾಸಕ್ಕಾಗಿ ನಗರ ಪ್ರದೇಶಕ್ಕೆ ಬರುವ ವಿದ್ಯಾರ್ಥಿಗಳಿಗೆ ದೀಪಾವಳಿ ಸಂದರ್ಭ ತಮ್ಮ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಇದಕ್ಕಾಗಿಯೇ ಮಂಗಳೂರಿನ ಕೊಟ್ಟಾರ (Kottara Mangaluru) ದಲ್ಲಿರುವ ಕರಾವಳಿ ಗ್ರೂಫ್ ಆಫ್ ಕಾಲೇಜು (Karavali Group Of College) ವಿಭಿನ್ನ ಕಾರ್ಯಕ್ರಮವನ್ನು ಆಯೋಜಿಸಿತ್ತು. ದೀಪಾವಳಿ ರಜೆಯಲ್ಲಿ ಊರಿಗೆ ಹೋಗಲಾಗದೆ ವಿದ್ಯಾರ್ಥಿಗಳು ವ್ಯಥೆ ಪಡಬಾರದೆಂದು ಎಲ್ಲಾ ವಿದ್ಯಾರ್ಥಿಗಳಿಗಾಗಿ ಕಾಲೇಜಿನ ಆವರಣದಲ್ಲೇ ಅದ್ಧೂರಿಯಾಗಿ ಹಬ್ಬವನ್ನು ಆಚರಿಸಲಾಯಿತು. ಇದನ್ನೂ ಓದಿ: ಅಯೋಧ್ಯೆಯಲ್ಲಿ ದೀಪೋತ್ಸವಕ್ಕೆ ಮೋದಿ ಚಾಲನೆ – ರಾಮ ಜನ್ಮಭೂಮಿಯಲ್ಲಿ ಬೆಳಗಿದವು 18 ಲಕ್ಷ ದೀಪ

ದೇಶದ ವಿವಿಧ ರಾಜ್ಯಗಳ ವಿದ್ಯಾರ್ಥಿಗಳು ಆಯಾ ಪ್ರದೇಶದ ಆಚರಣೆಯನ್ನು ತಮ್ಮ ನೃತ್ಯ ವೈವಿಧ್ಯದ ಮೂಲಕ ತೋರಿಸಿದರೆ, ಕೆಲವರು ಜಾನಪದ, ಫಿಲ್ಮಿ ಡ್ಯಾನ್ಸ್, ಫ್ಯಾಷನ್ ಶೋ ಪ್ರದರ್ಶನ ತೋರಿದರು. ಜೊತೆಗೆ ಎಲ್ಲಾ ವಿದ್ಯಾರ್ಥಿಗಳು ಜಾತಿ ಮತದ ಬೇಧ ಮರೆತು ದೀಪಗಳನ್ನು ಉರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಕೆಲ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಗಳು ಕೇವಲ ಶಿಕ್ಷಣ ನೀಡಿ ಕೈತೊಳೆದುಕೊಳ್ಳುತ್ತೆ. ಆದರೆ ಈ ಕಾಲೇಜು ಮಾತ್ರ ವಿದ್ಯಾರ್ಥಿಗಳಿಗೆ ಮನೆಯವರಿಂದ ದೂರ ಇದ್ದೇವೆ, ಹಬ್ಬಗಳನ್ನು ಆಚರಿಸಲು ಸಾಧ್ಯವಾಗುತ್ತಿಲ್ಲ ಅನ್ನುವ ಕೊರಗು ಇರಬಾರದೆಂಬ ಕಾರಣಕ್ಕೆ ದೀಪಗಳ ಹಬ್ಬವನ್ನು ಆಚರಿಸಿದ್ದು ವಿಶೇಷ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *