ರಾಜ್ಯ ಯುವ ಕಾಂಗ್ರೆಸ್‌ಗೆ ಚುನಾವಣೆ ನಡೆಸಲು ತೀರ್ಮಾನ: ಡಿಕೆಶಿ

ಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್‌ನ (Youth Congress) ಪದಾಧಿಕಾರಿಗಳ ಆಯ್ಕೆಗೆ ಚುನಾವಣೆ ನಡೆಸಲು ನಿರ್ಧರಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಕೆಪಿಸಿಸಿ (KPCC) ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ನಾಯಕರು ಬೇಕು. ನಾಯಕರಿಗೆ ಜವಾಬ್ದಾರಿ ಬೇಕು. ಯುವಕರು ನಾಯಕರಾಗಬೇಕು ಅಂದರೆ ಚುನಾವಣಾ ಕಣದಿಂದಲೇ ಆಗಬೇಕು. ನಾಯಕರನ್ನು ತಯಾರಿಸಬೇಕು ಎಂದು ರಾಹುಲ್ ಆದೇಶ ಕೊಟ್ಟಿದ್ದಾರೆ. ಆದ್ದರಿಂದ ರಾಜ್ಯ ಯುವ ಕಾಂಗ್ರೆಸ್‌ಗೆ ಚುನಾವಣೆ (Election) ನಡೆಸುತ್ತಿದ್ದೇವೆ. ಚುನಾವಣಾ ಆಯೋಗ ನಡೆಸುವ ರೀತಿಯಲ್ಲಿ ಚುನಾವಣೆ ನಡೆಸುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: 15 ತಿಂಗಳಲ್ಲಿ 1,200 ರೈತರ ಆತ್ಮಹತ್ಯೆ – ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗಿಲ್ಲ ಉಜ್ವಲ ಭವಿಷ್ಯ: ಜೋಶಿ

ನಮ್ಮ ಪಕ್ಷದಲ್ಲಿ 3-4 ವರ್ಷಕ್ಕೊಮ್ಮೆ ಯೂತ್ ಕಾಂಗ್ರೆಸ್ ಚುನಾವಣೆ ನಡೆಯುತ್ತದೆ. ಪಕ್ಷದ ಒಳಗಡೆಯೇ ಯೂತ್ ಕಾಂಗ್ರೆಸ್ ಚುನಾವಣೆ ಮಾಡಲು ಹೊರಟಿದ್ದೇವೆ. ಇವತ್ತಿನಿಂದಲೇ ಮೆಂಬರ್‌ಶಿಪ್ ಪ್ರಕ್ರಿಯೆ ಶುರು. ಆನ್‌ಲೈನ್‌ನಲ್ಲಿ ಮಾತ್ರ ಮೆಂಬರ್‌ಶಿಪ್ ಪಡೆದುಕೊಳ್ಳಬಹುದು. ಆನ್‌ಲೈನ್‌ನಲ್ಲೇ ಅರ್ಜಿ ತೆಗೆದುಕೊಳ್ಳುವ ವ್ಯವಸ್ಥೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ಪ್ರಧಾನಿ ಮೋದಿಯಿಂದ ಕ್ಷುಲ್ಲಕ ರಾಜಕಾರಣ: ಖರ್ಗೆ ಕಿಡಿ

ಒಬ್ಬ ವ್ಯಕ್ತಿಗೆ 6 ಮತ ಚಲಾಯಿಸುವ ಅವಕಾಶ ಇರುತ್ತದೆ. 5 ಜಿಲ್ಲೆಗಳಲ್ಲಿ ಮೀಸಲಾತಿ ಕೂಡ ಇರಲಿದೆ. ಮಹಿಳೆ, ಅಲ್ಪಸಂಖ್ಯಾತರು, ಎಸ್ಸಿ-ಎಸ್ಟಿ ಮೀಸಲಾತಿ ಇದೆ. ಮೆಂಬರ್‌ಶಿಪ್‌ನಲ್ಲಿ ಫೇಸ್ ರೀಡಿಂಗ್ ಸಹ ಆಗಲಿದೆ. ಮೆಂಬರ್‌ಶಿಪ್‌ನಲ್ಲೇ ಯಾರು ಬೇಕು ಅಂತ ಆಯ್ಕೆ ಮಾಡಿಕೊಳ್ಳಬಹುದು. ಮೊದಲು ಬಂದವರಿಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನ. ನಂತರ ಬಂದವರಿಗೆ ಉಪಾಧ್ಯಕ್ಷ ಸ್ಥಾನ ಇರುತ್ತದೆ. ಆಗಸ್ಟ್ 2 ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ. ಆಗಸ್ಟ್ 16 ರಿಂದ ಸೆಪ್ಟೆಂಬರ್ 16ರ ವರೆಗೆ ಮೆಂಬರ್‌ಶಿಪ್ ಮಾಡಿಕೊಳ್ಳಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿಯಾಗಿ ಶಾಲಿನಿ ‌ರಜನೀಶ್ ನೇಮಕ