ಬೆಂಗಳೂರು: ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆಗೆ ಸಜ್ಜಾಗುತ್ತಿದೆ. ಜನರಾಗಲೀ, ಜನಪ್ರತಿನಿಧಿಗಳಾಗಲೀ ಯಾರಾದರು ಅಡ್ಡ ಪಡಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಸಿದ್ಧರಾಗಿದ್ದೇವೆ ಎಂದು ಗೃಹ ಸಚಿವ, ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.
ಈ ಕುರಿತು ನಗರದಲ್ಲಿ ಮಾತನಾಡಿದ ಡಾ.ಜಿ.ಪರಮೇಶ್ವರ್ ಅವರು, ಟಿಪ್ಪು ಜಯಂತಿ ಭದ್ರತೆ ಕುರಿತು ಚರ್ಚೆ ಮಾಡಲು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಕರೆಯಲಾಗಿದೆ. ಬಿಜೆಪಿ ಅವರು ವಿರೋಧ ಮಾಡುವುದು ಅವರಿಗೆ ಮಾಮೂಲಿಯಾಗಿದೆ. ಬಿಜೆಪಿ 2019 ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜಕೀಯವಾಗಿ ಲಾಭ ಮಾಡಿಕೊಳ್ಳಲು ಆಕ್ಷೇಪ ವ್ಯಕ್ತಪಡಿಸಿದೆ. ಜಯಂತಿ ಮಾಡಲು ಎಂದಿನಂತೆ ಗುಪ್ತಚರ ಮಾಹಿತಿ ಆಧರಿಸಿ ಹೆಚ್ಚಿನ ಭದ್ರತೆ ಬೇಕಾದ ಕಡೆ ಪೊಲೀಸ್ ನಿಯೋಜಿಸಿ ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಿಸಲಾಗುವುದು ಎಂದರು.

ಪ್ರೋಟೋಕಾಲ್ ಇದಂತೆ ಮಾಡುತ್ತೇವೆ: ಇದೇ ವೇಳೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಅನಂತಕುಮಾರ್ ಹೆಗಡೆ ಅವರು ಹೆಸರು ಬೇಡ ಎಂದು ಮನವಿ ಮಾಡಿದ್ದರೆ ಎಂಬ ಪ್ರಶ್ನೆಗೆ ಉತ್ತರಿಸಿ ಪ್ರೋಟೋಕಾಲ್ ಇದಂತೆ ಮಾಡುತ್ತೇವೆ ಎಂದರು.
ಶೀಘ್ರ ಸಂಪುಟ ವಿಸ್ತರಣೆ: ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮಾಡುವುದು ಖಚಿತವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ. ಸಂಪುಟದ 6 ಸಚಿವ ಸ್ಥಾನ ತುಂಬುವ ಕೆಲಸ ಮಾಡುತ್ತೇವೆ. ಈ ಕುರಿತು ಸಮನ್ವಯ ಸಮಿತಿ ಸಭೆ ಕರೆದು ತೀರ್ಮಾನ ಮಾಡಿ, ಇದರೊಂದಿಗೆ ನಿಗಮ ಮಂಡಳಿ ನೇಮಕವೂ ನಡೆಯಲಿದೆ ಎಂದು ಖಚಿತ ಪಡಿಸಿದರು.

ಸಮ್ಮಿಶ್ರ ಸರ್ಕಾರದ ರಚನೆ ಆದಾಗಿನಿಂದಲೂ ಸಚಿವ ಸಂಪುಟ ವಿಸ್ತರಣೆಗೆ ಅಡೆತಡೆ ಎದುರಾಗುತ್ತಿದ್ದು, ಸಚಿವ ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್ ಆಯ್ತು ಎನ್ನುವಾಗಲೇ ಉಪ ಚುನಾವಣೆ ಘೋಷಣೆ ಆಯಿತು. ಆದರೆ ಇದೀಗ ಉಪ ಚುನಾವಣೆ ಮತದಾನ ಮುಗಿದಿದ್ದು, ಉಪ ಚುನಾವಣೆ ಫಲಿತಾಂಶದ ಬಳಿಕ ಸಂಪುಟ ವಿಸ್ತರಣೆಯಾಗಲಿದೆ ಎಂಬುವುದು ಖಚಿತವಾಗಿದೆ.
ನಮ್ಮದೇ ಗೆಲುವು: ಲೋಕಸಭಾ ಉಪಚುನಾವಣೆಯಲ್ಲಿ 5 ಕ್ಷೇತ್ರಗಳಲ್ಲೂ ಮೈತ್ರಿ ಅಭ್ಯರ್ಥಿಗಳು ವಿಜಯಗಳಿಸಲಿದ್ದಾರೆ. ರಾಮನಗರ ಬಿಜೆಪಿ ಅಭ್ಯರ್ಥಿಗೆ ಹಣದ ಆಮಿಷ ತೋರಿಲ್ಲ ಎಂಬ ವಿಚಾರವಾಗಿ ಉತ್ತರಿಸಿದ ಅವರು, ಚಾಮುಂಡೇಶ್ವರಿ ಮೇಲೆ ಅಣೆ ಮಾಡಿ ಎಂಬುವುದು ಅವರ ಸಂಸ್ಕೃತಿ. ಚಂದ್ರಶೇಖರ್ ಮೂಲತಃ ಕಾಂಗ್ರೆಸ್ ನವರು ಹಾಗಾಗಿ ವಾಪಸ್ ಆಗಿದ್ದಾರೆ. ಇದಕ್ಕೆ ಹಣದ ಆಮಿಷದ ಬಣ್ಣ ಬೇಡ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply