ಏಕಾಏಕಿ ಡಿಸಿಎಂ ಪರಮೇಶ್ವರ್ ವಿದೇಶಿ ಪ್ರವಾಸ ರದ್ದು!

ಬೆಂಗಳೂರು: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರ ವಿದೇಶ ಪ್ರವಾಸ ರದ್ದಾಗಿದೆ. ಪರಂ ಅವರು ಇಂದು ಸ್ಯಾನ್ ಫ್ರಾನ್ಸಿಸ್ಕೋ ಭೇಟಿಗೆ ಇಂದು ತೆರಳಬೇಕಿತ್ತು. ಆದ್ರೆ ಹೈಕಮಾಂಡ್ ಏಕಾಏಕಿ ಇವರ ಪ್ರವಾಸವನ್ನು ರದ್ದು ಮಾಡಿದೆ.

ಡಿಸಿಎಂ ಅವರು ಇಂದು ವಿದೇಶಕ್ಕೆ ಭೇಟಿ ನೀಡಿ ಅಲ್ಲಿನ ಪೊಲೀಸ್ ಇಲಾಖೆ ಕುರಿತ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಬೇಕಿತ್ತು. ಆದ್ರೆ ಇದೀಗ ಏಕಾಏಕಿ ಹೈಕಮಾಂಡ್ ಸೂಚನೆಯಿಂದ ಪರಮ್ ಕೈಬಿಟ್ಟಿದ್ದಾರೆ.

ರದ್ದಾಗಿದ್ದು ಏಕೆ?:
ರಾಜ್ಯದಲ್ಲಿ ರಾಜಕೀಯ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲ. ಬಿಜೆಪಿ ಸದ್ದಿಲ್ಲದೇ ರಹಸ್ಯ ಚಟುವಟಿಕೆ ನಡೆಸುತ್ತಿದೆ. ಆಪರೇಷನ್ ಕಮಲ ನಡೆಸಲು ಬಿಜೆಪಿ ಪ್ಲಾನ್ ಮಾಡುತ್ತಿದೆ. ಈ ಮಧ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ವಿದೇಶ ಪ್ರವಾಸದಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸ್ ಶಾಸಕರ ಮೇಲೆ ನಿಗಾ ಇಡಲು ನಾಯಕರೇ ಇಲ್ಲದಾದರೆ ಕಷ್ಟ ಅಂತ ಹೈಕಮಾಂಡ್ ಹೇಳಿದೆ. ಇದನ್ನೂ ಓದಿ: 10 ದಿನದ ಯುರೋಪ್ ಪ್ರವಾಸ ಹೊರಟ ಸಿದ್ದರಾಮಯ್ಯ- ಕಾಂಗ್ರೆಸ್ ಮುಖಂಡರು ಏನ್ ಹೇಳಿದ್ರು?

ಇವೆಲ್ಲದರ ಮಧ್ಯೆ ಸಚಿವ ಡಿಕೆಶಿಗೆ ಇಡಿಯಿಂದ ನೊಟೀಸ್ ಬರುವ ಸಾಧ್ಯತೆಗಳು ಕೂಡ ಹೆಚ್ಚಿವೆ. ಡಿಕೆಶಿ ಅವರು ಇಡೀ ಸವಾಲು ಎದುರಿಸಲು ಕಾನೂನು ಸಲಹೆಗೆ ಮುಂದಾಗಿದ್ದಾರೆ. ಈ ಎಲ್ಲಾ ಗೊಂದಲದಿಂದ ಡಿಕೆಶಿ ಕೈ ಕಟ್ಟಿ ಹಾಕಲ್ಪಟ್ಟಿದೆ. ಈ ಎಲ್ಲಾ ಸಮಸ್ಯೆಗಳಿರುವಾಗ ಪರಮೇಶ್ವರ್ ಕೂಡ ವಿದೇಶಕ್ಕೆ ಹೊರಟರೆ ನಮ್ಮಲ್ಲಿ ನಲ್ಲಿ ಹೇಳೋರು ಕೆಳೋರು ಇರಲ್ಲ. ಬಿಜೆಪಿಯ ಆಪರೇಷನ್ ಕಮಲ ಪ್ರಯತ್ನಗಳಿಗೆ ತಡೆ ಹಾಕುವ ತುರ್ತಿದೆ. ಹೀಗಾಗಿ ಪರಮೇಶ್ವರ್ ಅಮೆರಿಕ ಪ್ರವಾಸ ಬೇಡ ಎಂದ ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದೆ ಅಂತ ಪಕ್ಷದ ಮೂಲಗಳಿಂದ ಪಬ್ಲಿಕ್ ಟಿವಿಗೆ ಮಾಹಿತಿ ಲಭಿಸಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *