ಬೆಂಗಳೂರು: ತುಮಕೂರಿನ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಹಾಗೂ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಅವರ ಸಹೋದರ ಡಾ.ಜಿ.ಶಿವಪ್ರಸಾದ್ ವಿಧಿವಶರಾಗಿದ್ದಾರೆ.
ಕಳೆದ ಆರು ತಿಂಗಳಿನಿಂದ ಕೋಮಾ ಸ್ಥಿತಿಯಲ್ಲಿದ್ದ ಶಿವಪ್ರಸಾದ್ (70) ಅವರು ಗುರುವಾರ ಸಂಜೆ ನಿಧನರಾದರು. ವೃತ್ತಿಯಿಂದ ನೇತ್ರ ತಜ್ಞರಾಗಿದ್ದರು ಶೈಕ್ಷಣಿಕ ರಂಗಕ್ಕೂ ಕೊಡುಗೆ ನೀಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿದ್ದು, ರಾಜ್ಯದ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಹಿರಿಯ ಸಹೋದರ ಡಾ.ಜಿ.ಶಿವಪ್ರಸಾದ್ ನಿಧನರಾದ ಸುದ್ದಿ ಕೇಳಿ ದು:ಖವಾಯಿತು. ಡಾ.ಶಿವಪ್ರಸಾದ್ ತುಮಕೂರಿನಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಕುಟುಂಬದ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ ಎಂದು ಬರೆದು ಸಂತಾಪ ಸೂಚಿಸಿದ್ದಾರೆ.
ರಾಜ್ಯದ ಉಪ ಮುಖ್ಯಮಂತ್ರಿಗಳಾದ @DrParameshwara ಅವರ ಹಿರಿಯ ಸಹೋದರ ಡಾ.ಜಿ.ಶಿವಪ್ರಸಾದ್ ನಿಧನರಾದ ಸುದ್ದಿ ಕೇಳಿ ದು:ಖವಾಯಿತು. ಡಾ.ಶಿವಪ್ರಸಾದ್ ತುಮಕೂರಿನಲ್ಲಿ ಶ್ರೀ ಸಿದ್ದಾರ್ಥ ಶಿಕ್ಷಣ ಸಂಸ್ಥೆಯ ಮೂಲಕ ಶಿಕ್ಷಣ ಕ್ಷೇತ್ರಕ್ಕೆನೀಡಿರುವ ಕೊಡುಗೆ ಅಪಾರ. ಅವರ ಕುಟುಂಬದ ದು:ಖದಲ್ಲಿ ನಾನೂ ಭಾಗಿಯಾಗಿದ್ದೇನೆ. pic.twitter.com/q50LXkGUmX
— Siddaramaiah (@siddaramaiah) July 26, 2018

Leave a Reply