ಹಿಂದೂ ಕಾರ್ಯಕರ್ತರ ಹತ್ಯೆ, ಗಲಭೆಗೆ ತರಬೇತಿ ನಡೆಯುತ್ತಿದ್ದ ಹಾಲ್‍ಗೆ ಬೀಗ ಮುದ್ರೆ

ಮಂಗಳೂರು: ಪಿಎಫ್‍ಐ (PFI) ಸಂಘಟನೆಯ ತರಬೇತಿ ಹಾಗೂ ಮಾಸ್ಟರ್ ಪ್ಲಾನ್ ಮಾಡುತ್ತಿದ್ದ ದಕ್ಷಿಣ ಕನ್ನಡ  (Dakshina Kannada) ಜಿಲ್ಲೆಯ ಬಂಟ್ವಾಳದ ಮಿತ್ತೂರಿನಲ್ಲಿರುವ ಫ್ರೀಡಂ ಕಮ್ಯುನಿಟಿ ಹಾಲ್‍ಗೆ (Freedom Community Hall) ಇಂದು ಬೀಗಮುದ್ರೆ ಜಡಿಯಲಾಗಿದೆ.

ಈ ಹಾಲ್‍ನಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆ ಹಾಗೂ ಗಲಭೆಯ ತರಬೇತಿ ನಡೆಯುತ್ತಿದ್ದ ಬಗ್ಗೆ ಬಂಧಿತ ಪಿಎಫ್‍ಐ ಕಾರ್ಯಕರ್ತರೇ ಬಾಯಿ ಬಿಟ್ಟಿರುವುದರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಬೀಗ ಹಾಕಲು ಅಧಿಕೃತ ಆದೇಶ ಹೊರಡಿಸಿದರು. ಹೀಗಾಗಿ ವಿಟ್ಲ ಉಪತಹಶೀಲ್ದಾರ್ ವಿಜಯ್ ವಿಕ್ರಮ್ ಹಾಗೂ ವಿಟ್ಲ ಪೊಲೀಸರು ಇಂದು ಹಾಲ್‍ಗೆ ಬೀಗಮುದ್ರೆ ಹಾಕಿದ್ದಾರೆ. ಇದನ್ನೂ ಓದಿ: ಕರಾವಳಿಯಲ್ಲಿ PFI ಟೆರರ್ ಟ್ರೈನಿಂಗ್- ಸ್ಫೋಟಕ ಸತ್ಯ ಬಯಲು

ಹಲವು ಹಿಂದೂ ಮುಖಂಡರ ಕೊಲೆ ಸೇರಿದಂತೆ ಕಲ್ಲಡ್ಕ ಗಲಭೆ, ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೂ ಇದೇ ಹಾಲ್‍ನಲ್ಲಿ ಪ್ಲಾನ್ ಹಾಗೂ ತರಬೇತಿ ನಡೆದಿತ್ತು. ಈ ಹಿನ್ನಲೆಯಲ್ಲಿ ಹಾಲ್‍ನ ಟ್ರಸ್ಟಿ ಅಯೂಬ್ ಅಗ್ನಾಡಿಯನ್ನು ಬಂಧಿಸಿ ನಿನ್ನೆ ಬೆಂಗಳೂರು ಪೊಲೀಸರು ಸ್ಥಳ ಮಹಜರು ನಡೆಸಿದ್ದರು. ಇದನ್ನೂ ಓದಿ: ಕರ್ನಾಟಕ, ತಮಿಳುನಾಡಿನಲ್ಲಿ ಕೋಮುಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದ PFI

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *