ಜಂಬೂ ಸವಾರಿ ಟಿಕೆಟ್: ಜಿಲ್ಲಾಧಿಕಾರಿ ಸಿಬ್ಬಂದಿ ಜೊತೆ ಜನ್ರ ಮಾತಿನ ಚಕಮಕಿ

ಮೈಸೂರು: ಜಂಬೂಸವಾರಿ ವೀಕ್ಷಣೆಗೆಂದು ಟಿಕೆಟ್ ವಿತರಣೆ ವೇಳೆ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರ ಮಧ್ಯಪ್ರವೇಶದಿಂದ ತಿಳಿಯಾಗಿದೆ.

ದಸರಾ ವೀಕ್ಷಣೆಗೆ ವಿವಿಧ ಮುಖ ಬೆಲೆಯ ಟಿಕೆಟ್ ಮಾರಾಟ ಮಾಡಲು ಜಿಲ್ಲಾಧಿಕಾರಿಗಳ ಕಚೇರಿ ಹಿಂಭಾಗ ಕೌಂಟರ್ ತೆರೆಯಲಾಗಿದೆ. ಟಿಕೆಟ್ ಖರೀದಿಸಲು ಬಂದವರಿಗೆ ಸಿಬ್ಬಂದಿ ಕೆಲವು ನಿಬಂಧನೆಗಳನ್ನ ಹಾಕಿದ್ದರು. ಒಬ್ಬರಿಗೆ ಒಂದು ಟಿಕೆಟ್ ಎಂದು ಕಂಡೀಷನ್ ಹಾಕಿದಾಗ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು.

ಕುಟುಂಬ ಸಮೇತ ನೋಡಬೇಕಾದ್ರೆ ಇಡೀ ಕುಟುಂಬವೇ ಬಂದು ಕ್ಯೂ ನಿಂತು ಟಿಕೆಟ್ ಖರೀದಿಸಬೇಕೆಂದು ಹಾಕಿದ ಷರತ್ತು ಅಸಮಾಧಾನಕ್ಕೆ ಕಾರಣವಾಗಿ ಸಾರ್ವಜನಿಕರು ತೀವ್ರ ವಿರೋಧ ವ್ಯಕ್ತಪಡಿಸಿದರು. ಆಗ ಸಿಬ್ಬಂದಿ ಕೌಂಟರ್ ಮುಚ್ಚಲು ಮುಂದಾದಾಗ ಸಾರ್ವಜನಿಕರ ಅಸಮಾಧಾನ ಮತ್ತಷ್ಟು ಹೆಚ್ಚಾಗಿ ಮಾತಿನ ಚಕಮಕಿಗೆ ಮುಂದಾದರು. ಇದೇ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಾರ್ವಜನಿಕರನ್ನ ಸಮಾಧಾನಪಡಿಸಿದರು.

ಒಂದೇ ಟಿಕೆಟ್ ಯಾಕೆ?: ಜಂಬೂ ಸವಾರಿ ವೀಕ್ಷಿಸಲು ರಾಜ್ಯ ಅಲ್ಲದೇ ದೇಶ, ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ಈ ವೇಳೆ ಒಬ್ಬರಿಗೆ ಜಾಸ್ತಿ ಟಿಕೆಟ್ ಕೊಟ್ಟರೆ ಅದನ್ನು ದುರ್ಬಳಕೆ ಮಾಡಿ ಹೆಚ್ಚಿನ ಹಣಕ್ಕೆ ಮಾರಾಟ ಮಾಡುವ ಕಾರಣ ಒಬ್ಬರಿಗೆ ಒಂದೇ ಟಿಕೆಟ್ ನೀಡಲಾಗುತ್ತದೆ.

Comments

Leave a Reply

Your email address will not be published. Required fields are marked *