ರಾಜ್ಯ ಸರ್ಕಾರ ವೆಜ್ ಬೇರೆ, ನಾನ್ ವೆಜ್ ಬೇರೆ ಶಾಲೆ ತೆರೆಯಲಿ: ದಯಾನಂದ ಸ್ವಾಮೀಜಿ

Dayananda Swamiji

ಧಾರವಾಡ: ಸರ್ಕಾರಿ ಶಾಲೆಗಳಲ್ಲಿ ಮೊಟ್ಟೆ ವಿತರಣೆ ವಿಚಾರವಾಗಿ ಅಖಿಲ ಭಾರತ ಸಸ್ಯಹಾರಿ ಒಕ್ಕೂಟದ ಪ್ರಧಾನ ಸಂಚಾಲಕರಾಗಿರುವ ದಯಾನಂದ ಸ್ವಾಮೀಜಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಧಾರವಾಡದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮೊಟ್ಟೆ ತಿನ್ನಿಸುವ ಕೆಲಸ ಪ್ರಾರಂಭಿಸಿದೆ, ಸಸ್ಯಹಾರಿ ಧಾರ್ಮಿಯರ ಆಗ್ರಹಕ್ಕೆ ಸ್ಪಂದಿಸುತ್ತಿಲ್ಲ ಎಂದು ಹೇಳಿದರು. ನಾಡಿನ ಪೂಜ್ಯರು, ಗಣ್ಯರೆಲ್ಲ ಬೇಡಿಕೊಂಡರೂ ಸರ್ಕಾರ ಕಿವುಡಾಗಿದೆ. ಸಸ್ಯಹಾರಿ ಧರ್ಮಿಯರ ಮಾತುಗಳಿಗೆ ಕಿಂಚಿತ್ತು ಬೆಲೆ ಕೊಡುತ್ತಿಲ್ಲ ಎಂದ ಕಿಡಿಕಾರಿದರು. ಇದನ್ನೂ ಓದಿ: ಒಬ್ಬ ಕ್ರಿಮಿನಲ್‍ನ ರಕ್ಷಿಸುತ್ತಿದ್ದೀರಾ – ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಿಡಿ

 

ವಿದ್ಯಾ ದೇಗುಲಗಳನ್ನು ಮಿಲ್ಟ್ರಿ ಹೋಟೆಲ್ ಮಾಡಬೇಡಿ, ಮೊಟ್ಟೆಗೆ ಬದಲಾಗಿ ಅನೇಕ ಸಸ್ಯಹಾರಿ ಪೌಷ್ಟಿಕಾಂಶ ಪದಾರ್ಥಗಳಿವೆ, ಅವುಗಳನ್ನು ಮಕ್ಕಳಿಗೆ ನೀಡಬೇಕು. ಈ ಕೂಡಲೇ ಸರ್ಕಾರ ಮೊಟ್ಟೆ ವಿತರಣೆ ಕೈ ಬಿಡಬೇಕು, ಇಲ್ಲದಿದ್ದಲ್ಲಿ ಸಸ್ಯಾಹಾರಿ ಮಕ್ಕಳಿಗೆ ಪ್ರತ್ಯೇಕ ಶಾಲೆ ಮತ್ತು ನಾನ್ ವೆಜ್ ಶಾಲೆಗಳನ್ನು ತೆರೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೆಮಿಕಲ್ಸ್ ಫ್ಯಾಕ್ಟರಿ ಸ್ಫೋಟ – 2 ಸಾವು, 15 ಮಂದಿಗೆ ಗಾಯ

ಡಿ. 19ರೊಳಗೆ ಮೊಟ್ಟೆ ಆದೇಶ ಹಿಂಪಡೆಯಬೇಕು, ಇಲ್ಲದಿದ್ದಲ್ಲಿ 20ರಂದು ಬೆಳಗಾವಿ ಸುವರ್ಣ ಸೌಧ ಬಳಿ ಬೃಹತ್ ಸಂತ ಸಮಾವೇಶ ಮಾಡುತ್ತೇವೆ. ಸಹಸ್ರಾರು ಸಸ್ಯಹಾರಿಗಳು ಪಾಲ್ಗೊಳ್ಳುತ್ತಾರೆ. ಸುವರ್ಣ ಸೌಧಕ್ಕೆ ಘೇರಾವ್ ಹಾಕುತ್ತೇವೆ. ಜೈಲ್ ಭರೋ ಸಹ ಮಾಡಲು ಮುಂದಾಗುತ್ತೇವೆ ಎಂದು ಎಚ್ಚರಿಕೆ ನೀಡಿದರು.

Comments

Leave a Reply

Your email address will not be published. Required fields are marked *