ಪಬ್ಲಿಕ್ ಟಿವಿ ಇಂಪ್ಯಾಕ್ಟ್- ರಾಂಪುರ ಗ್ರಾಮಕ್ಕೆ ತೆರಳಿ ರಸ್ತೆ ಪರಿಶೀಲಿಸಿದ ದಾವಣಗೆರೆ ಡಿಸಿ

– 2 ತಿಂಗಳೊಳಗೆ ರಸ್ತೆ, ಕೆಲವೇ ದಿನದಲ್ಲಿ ಬಸ್ ವ್ಯವಸ್ಥೆ
– ನಿನ್ನ ಮದುವೆಯನ್ನೂ ಮಾಡಿಸ್ತೇನೆಂದು ಬಿಂದುಗೆ ಭರವಸೆ

ದಾವಣಗೆರೆ: ಜಿಲ್ಲೆಯ ಮಾಯಕೊಂಡ ಕ್ಷೇತ್ರದ ಹೆಚ್ ರಾಂಪುರ ಗ್ರಾಮದ ಸಮಸ್ಯೆಯನ್ನು ಕಂಡು ಬೇಸತ್ತು ಪ್ರಧಾನಿ, ಮುಖ್ಯಮಂತ್ರಿಗೆ ಪತ್ರ ಬರೆದು ನಮ್ಮ ಊರಿನ ರಸ್ತೆ ಆಗುವವರೆಗೆ ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಬಿಂದು ಕುರಿತು ಪಬ್ಲಿಕ್‍ಟಿವಿ ವರದಿ ಬಳಿಕ ದಾವಣಗೆರೆ ಡಿಸಿ ಮಹಾಂತೇಶ್ ಬೀಳಗಿ ತೆರಳಿ ಸ್ಥಳ ಪರಿಶೀಲನೆ ಮಾಡಿದ್ದಾರೆ. ಬಳಿಕ ಬಿಂದುಗೆ ಕರೆ ಮಾಡಿ 2 ತಿಂಗಳೊಳಗೆ ರಸ್ತೆ, ಕೆಲವೇ ದಿನದಲ್ಲಿ ಬಸ್ ವ್ಯವಸ್ಥೆಯೂ ಆಗಲಿದೆ. ಜೊತೆಗೆ ನಿನ್ನ ಮದುವೆಯನ್ನೂ ನಾನೇ ಮಾಡಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.

ರಾಂಪುರ ದಾವಣಗೆರೆ ಜಿಲ್ಲಾ ಕೇಂದ್ರದಿಂದ ಕೇವಲ 30 ಕಿಲೋ ಮೀಟರ್ ದೂರವಿದ್ದರೆ, ಮಾಯಕೊಂಡ ವಿಧಾನಸಭಾ ಕ್ಷೇತ್ರದಿಂದ 6 ಕಿಲೋ ಮೀಟರ್ ದೂರವಷ್ಟೇ ಇದೆ. ಆದರೂ ಈ ಊರು ಇಂದಿಗೂ ಮೂಲಭೂತ ಸೌಕರ್ಯದಿಂದ ವಂಚಿತಗೊಂಡಿದೆ. ಈ ಊರಲ್ಲಿ ಯುವತಿಯರು ಶಾಲಾ-ಕಾಲೇಜ್‍ಗೆ ಹೋಗಬೇಕೆಂದರೆ ನಡೆದುಕೊಂಡೆ ಹೋಗಬೇಕು. ಮಳೆಗಾಲದಲ್ಲಿ ಮಣ್ಣಿನ ರಸ್ತೆಯಲ್ಲಿ ನಡೆದು ಶಾಲಾ-ಕಾಲೇಜಿಗೆ ತೆರಳಬೇಕಾದ ಪರಿಸ್ಥಿತಿ ಇದೆ. ಸ್ವಾತಂತ್ರ್ಯ ಬಂದು 7 ದಶಕಗಳಾದರೂ ಈ ಗ್ರಾಮಕ್ಕೆ ಇನ್ನೂ ಸರ್ಕಾರಿ ಸಾರಿಗೆ ವ್ಯವಸ್ಥೆ ಇಲ್ಲ. ಬಸ್ ಇಲ್ಲದ ಕಾರಣ ಗ್ರಾಮದಲ್ಲಿ ಎಷ್ಟೋ ಯುವತಿಯರು ವಿದ್ಯಾಭ್ಯಾಸವನ್ನೇ ಮೊಟುಕುಗೊಳಿಸಿದ್ದಾರೆ. ಇದರಿಂದ ಬಾಲ್ಯ ವಿವಾಹ ಕೂಡ ಹೆಚ್ಚಾಗುತ್ತಿವೆ. ವಿಪರ್ಯಾಸವೆಂದರೆ ಓದುವ ಆಸೆಯಿದ್ದರೂ ಸರಿಯಾದ ಬಸ್ ವ್ಯವಸ್ಥೆ ಇಲ್ಲ ಎಂಬ ಕಾರಣ ಮಹಿಳೆಯರು ಮನೆಯಲ್ಲೇ ಕೂರುವಂತಾಗಿದೆ. ಇದರಿಂದ ಈ ಊರಲ್ಲಿ ಹೆಣ್ಣು ಮಕ್ಕಳು ಹೆಚ್ಚಿನ ವಿದ್ಯಾಭ್ಯಾಸ ಮಾಡಿಲ್ಲ ಎಂದು ಮದುವೆಯಾಗಲು ಹಿಂದೇಟು ಹಾಕುತ್ತಿದ್ದಾರೆ ಎಂಬುದರ ಕುರಿತು ಪಬ್ಲಿಕ್ ಟಿವಿ ವಿಸ್ತೃತ ವರದಿ ಬಿತ್ತರಿಸಿತು. ಇದನ್ನೂ ಓದಿ: ಊರಿನ ರಸ್ತೆ ಆಗುವರೆಗೂ ಮದುವೆಯಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಯುವತಿ

ಪಬ್ಲಿಕ್ ಟಿವಿ ವರದಿ ನೋಡಿ ರಾಮನಗರ ಗ್ರಾಮಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಗ್ರಾಮದ ಹೊರವಲರದಲ್ಲಿ ಕಾರು ನಿಲ್ಲಿಸಿ, ನಡೆದುಕೊಂಡು ಬಂದು ರಸ್ತೆ ಪರಿಶೀಲನೆ ನಡೆಸಿದರು. ಇದೇ ವೇಳೆ ದಾವಣಗೆರೆ ಜಿಲ್ಲೆಯ ಮಾಯಕೊಂಡ ಹೋಬಳಿಯ ರಾಮಪುರ ಗ್ರಾಮಕ್ಕೆ ಆಗಮಿಸಿ ರಸ್ತೆ ಆಗುವವರೆಗೆ ಮದುವೆ ಆಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಯುವತಿ ಬಿಂದುಗೆ ಕರೆ ಮಾಡಿದ ಮಹಾಂತೇಶ್ ಬೀಳಗಿ, ಕೆಲವೇ ದಿನಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗುವುದು. ಎರಡು ತಿಂಗಳೊಳಗೆ ರಸ್ತೆ ಕೂಡ ಆಗುತ್ತದೆ. ಜೊತೆಗೆ ನಾನೇ ಮುಂದೆ ನಿಂತು ನಿನ್ನ ಮದುವೆಯನ್ನು ಕೂಡ ಮಾಡಿಸುತ್ತೇನೆ ಎಂದು ಹೇಳಿದ್ದಾರೆ. ಇದನ್ನು ಕೇಳಿಸಿಕೊಂಡು ಖುಷಿಪಟ್ಟ ಯುವತಿ ಬಿಂದು, ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಮೂರೂವರೆ ತಿಂಗಳ ಬಳಿಕ ಕೊರೊನಾ ಗೆದ್ದ ವೈದ್ಯ- ಡಾಕ್ಟರ್ ಕಣ್ಣೀರ ಕಥೆ ಓದಿ

Comments

Leave a Reply

Your email address will not be published. Required fields are marked *