ಕಾರ್ಮೋಡ ಕವಿದಿತ್ತು.. ಮುತ್ತಿನ ಹನಿಗಳು ಉದುರಿತು.. ತೂಗುವ ತೊಟ್ಟಿಲು ಕೈತಪ್ಪಿತು.. ನಾನ್ ಇದ್ದೇನಲೇ ಪರಾಕ್!

– ಮುಳ್ಳು ಗದ್ದುಗೆ ಏರಿ ಕಾರ್ಣಿಕ ನುಡಿದ ಸ್ವಾಮೀಜಿ

ದಾವಣಗೆರೆ: ಚನ್ನಗಿರಿ (Channagiri) ತಾಲೂಕಿನ ಕೆಂಗಾಪುರ ಗ್ರಾಮದ ರಾಮಲಿಂಗೇಶ್ವರ ಮುಳ್ಳು ಗದ್ದುಗೆ ಐತಿಹಾಸಿಕ ಜಾತ್ರೆಯಲ್ಲಿ ಗದ್ದುಗೆ ಏರಿ ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ.

ಕಾರ್ಮೋಡ ಕವಿದಿತ್ತು ಮುತ್ತಿನ ಹನಿಗಳು ಉದರಿತು ತೂಗುವ ತೊಟ್ಟಿಲು ಕೈತಪ್ಪಿತು ನಾನ್ ಇದ್ದೇನಲೇ ಪರಾಕ್ ಎಂದು ಶ್ರೀ ರಾಮಲಿಂಗೇಶ್ವರ ಮಠದ ಶ್ರೀ ರಾಮಲಿಂಗೇಶ್ವರ ಮಹಾಸ್ವಾಮಿಗಳು (Ramalingeshwara Swamiji Karnika) ಭವಿಷ್ಯ ನುಡಿದಿದ್ದಾರೆ.

ಮಹಾಶಿವರಾತ್ರಿ (Maha Shivratri) ಮಾರನೇ ದಿನ ನಡೆಯುವ ಜಾತ್ರೆಯಲ್ಲಿ ಸ್ವಾಮೀಜಿ ಮುಳ್ಳಿನ ಪಲ್ಲಕ್ಕಿ ಮೇಲೆ ಕೂರುತ್ತಾರೆ. ಬಳಿಕ ಮುಳ್ಳಿನ ಗದ್ದುಗೆ ಮೇಲೆ ಸ್ವಾಮೀಜಿ ಕುಪ್ಪಳಿಸುತ್ತ ಮೆರವಣಿಗೆಯಲ್ಲಿ ಸಾಗುತ್ತಾರೆ. ಈ ಉತ್ಸವಕ್ಕೆ ಸಾವಿರಾರು ಭಕ್ತರು ಸಾಕ್ಷಿಯಾಗಿದ್ದಾರೆ.

ಭಕ್ತರ ಕಷ್ಟ ನನಗಿರಲಿ, ಜಗದ ಸುಖ ಶಾಂತಿ ಭಕ್ತರಿಗೆ ಇರಲಿ ಎಂಬ ಸಂಕೇತದ ಪ್ರತೀಕವಾಗಿ ಮುಳ್ಳು ಗದ್ದುಗೆ ಉತ್ಸವ ನಡೆಸಲಾಗುತ್ತದೆ. ಮುಳ್ಳು ಗದ್ದುಗೆ ಮೆರವಣಿಗೆ ನಂತರ ಸ್ವಾಮೀಜಿ ಕಾರ್ಣಿಕ ನುಡಿದಿದ್ದಾರೆ. ಸ್ವಾಮೀಜಿ ನುಡಿದ ಕಾರ್ಣಿಕ ಸತ್ಯವಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಭಕ್ತರದ್ದು.