ಅತ್ತೆಯನ್ನು ಕೊಂದು, ಮೃತ ದೇಹಕ್ಕೆ ಬೆಂಕಿ ಹಚ್ಚಿದ ಸೊಸೆ

ಚೆನ್ನೈ: ಅತ್ತೆಯನ್ನು ಸ್ಕ್ರ್ಯೂಡ್ರೈವರ್‌ನಿಂದ ಇರಿದು ಕೊಂದು ನಂತರ ಮೃತ ದೇಹಕ್ಕೆ ಬೆಂಕಿ ಹಚ್ಚಿದ ಸೊಸೆ, ಬೆಂಕಿ ದುರಂತದಿಂದ ಅತ್ತೆ ಸಾವನ್ನಪ್ಪಿದ್ದಾರೆ ಎಂಬಂತೆ ಬಿಂಬಿಸಲು ಪ್ರಯತ್ನಿಸಿ ಸಿಕ್ಕಿ ಬಿದ್ದಿರುವ ಘಟನೆ ತಮಿಳುನಾಡಿನ ವಿಶ್ವಾಸ್‍ನಗರದಲ್ಲಿ ನಡೆದಿದೆ.

ನವೀನಾ (46) ಮೃತ ಅತ್ತೆ. 27 ವರ್ಷದ ಸೊಸೆ ರೇಷ್ಮಾ ಅತ್ತೆಯನ್ನು ಕೊಂದ ಆರೋಪಿಯಾಗಿದ್ದಾಳೆ. ನವೀನಾ ತಾಯಿ ಎಸ್.ಶಕಿಂಶಾ ಪೊಲೀಸರಿಗೆ ದೂರು ನೀಡಿದ್ದು, ತನ್ನ ಮಗಳು ಬೆಂಕಿಯಿಂದ ಸುಟ್ಟ ಗಾಯದಿಂದ ಸತ್ತಿದ್ದಾಳೆ. ಆದರೆ ಆಕೆಯ ತಲೆ ಮೇಲೆ ಗಾಯವಾಗಿದೆ. ನನ್ನ ಮಗಳಿಗೆ ಹೀಗೆ ಆಗುವಾಗ ಆಕೆಯ ಸೊಸೆ ರೇಷ್ಮಾ ಮತ್ತು ಅವಳ 2ವರ್ಷದ ಮಗ ಅಲ್ಲಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಇದನ್ನೂ ಓದಿ: NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್‌ಐ!

ಪೊಲೀಸರು ರೇಷ್ಮಾಳನ್ನು ವಿಚಾರಣೆಗೆ ಒಳಪಡಿಸಿದಾಗ, ನವೀನಾ ಮೊದಲು ಅಡುಗೆ ಮನೆಯಲ್ಲಿ ನೆಲದ ಮೇಲೆ ಬಿದ್ದರು. ನಂತರ ತನ್ನನ್ನು ಎತ್ತುವಂತೆ ನನ್ನ ಬಳಿ ಕೇಳಿದಳು. ಆದರೆ ಸ್ವಲ್ಪ ತಡವಾಗುತ್ತಿದ್ದಂತೆ ನನ್ನನ್ನು ನಿಂದಿಸಲು ಪ್ರಯತ್ನ ಪಟ್ಟಳು. ಆಗ ನನಗೆ ಕೋಪ ಬಂದು, ಅಲ್ಲಿಯೇ ಇದ್ದ ಸ್ಕ್ರ್ಯೂಡ್ರೈವರ್‌ನಿಂದ ಹಲವು ಬಾರಿ ಇರಿದು, ಹೊಡೆದು ಕೊಂದೆ. ನಂತರ ಅದನ್ನು ಬೆಂಕಿ ಅನಾಹುತವೆಂದು ಬಿಂಬಿಸಲು ಯತ್ನಿಸಿದೆ ಎಂದು ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

ಸದ್ಯ ರೇಷ್ಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆ ನವೀನಾ ದೇಹವನ್ನು ಪೋಸ್ಟ್ ಮಾರ್ಟಮ್‍ಗೆ ಕಳುಹಿಸಲಾಗಿದೆ.

Comments

Leave a Reply

Your email address will not be published. Required fields are marked *