– ಅತ್ತೆ – ಮಾವನ ವಿರುದ್ಧ ಎಫ್‌ಐಆರ್
ಬೆಂಗಳೂರು: ಮಾವನ (Father In law) ಜೊತೆಗೆ ಅಕ್ರಮ ಸಂಬಂಧ ಹೊಂದುವಂತೆ ಸೊಸೆಗೆ ಅತ್ತೆಯೇ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ಮೇಲೆ ಅತ್ತೆ-ಮಾವನ ವಿರುದ್ಧ ಎಫ್‌ಐಆರ್ (FIR) ದಾಖಲಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ (BTM layout) ನಿವಾಸಿ ಯಾಸೀನ್ ಪಾಷಾ ಮತ್ತು ಪತ್ನಿ ಶಾಸೀಯಾರಿಂದ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಬಿಎಸ್‌ಎನ್ ಸೆಕ್ಷನ್ 351(2), 352,2(5) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಡ್ರಗ್ ಪೆಡ್ಲರ್‌ಗಳ ಜೊತೆಗೆ ಪೊಲೀಸರ ನಂಟು ಆರೋಪ – ಇನ್‌ಸ್ಪೆಕ್ಟರ್ ಸೇರಿ 11 ಪೊಲೀಸರು ಸಸ್ಪೆಂಡ್

ಮಗ ಯಾಸೀನ್ ಪಾಷಾಗೆ, ಶಾಸೀಯಾ ಅನ್ನೋ ಯುವತಿ ಜೊತೆಗೆ ಕಳೆದ ಮೇ ತಿಂಗಳಲ್ಲಿ ನಿಶ್ಚಿತಾರ್ಥ ಮಾಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಮದುವೆ ಮಾಡಲು ಹುಡುಗನ ಪೋಷಕರು ನಿರಾಕರಣೆ ಮಾಡಿದ್ರು. ಪೋಷಕರ ವಿರೋಧದ ನಡುವೆಯೇ ಮಗ ಯಾಸಿನ್ ನಿಶ್ಚಿತಾರ್ಥ ಆಗಿದ್ದ. ಶಾಸೀಯಾ ಜೊತೆಗೆ ಮೈಸೂರಿನಲ್ಲಿ ಮದುವೆಯಾಗಿ ಮನೆಗೆ ಬಂದಿದ್ದ. ಇದರಿಂದ ಕೋಪಗೊಂಡ ಅತ್ತೆ ಹುಮೇರಾ ಹಾಗೂ ಮಲತಂದೆ ಅಕ್ಬರ್ ಸೊಸೆಗೆ ಕಿರುಕುಳ ನೀಡೋಕೆ ಶುರುಮಾಡಿದ್ದಾಳೆ. ಇದನ್ನೂ ಓದಿ: Chikkaballapura | ಇಬ್ಬರು ಹೆಣ್ಣುಮಕ್ಕಳೊಂದಿಗೆ ವಿಷ ಸೇವಿಸಲು ಪ್ಲ್ಯಾನ್ – ತಾಯಿ ಸಾವು

ಮಾವನ ಜೊತೆಗೆ ಅನೈತಿಕ ಸಂಬಂಧ ಹೊಂದುವಂತೆ ಕಿರುಕುಳ ನೀಡಿದ್ದಾಳೆ. ಇದಕ್ಕೆ ಒಪ್ಪದೇ ಇದ್ದಾಗ ಸೊಸೆ ಶಾಸೀಯಾಗೆ ಆತ್ಮಹತ್ಯೆ ಮಾಡಿಕೊಳ್ಳವಂತೆ ಬೆದರಿಕೆ ಹಾಕಿದ್ದಾಲೆ ಅಂತ. ಸೊಸೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ: ಸಾಲಬಾಧೆ – ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ, ಮೂವರು ಸಾವು
