ಮಗಳ ಮೇಲೆ ತಂದೆ ಸೇರಿ 28 ಮಂದಿಯಿಂದ ಅತ್ಯಾಚಾರ

ಲಕ್ನೋ: ಪಿಯು ವಿದ್ಯಾರ್ಥಿನಿ ಮೇಲೆ ತಂದೆ ಸೇರಿ 28 ಮಂದಿ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಲಲಿತಪುರ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಲ್ಲಿ ಸಂತ್ರೆಸ್ತೆಯ ತಂದೆ ಸಮಾಜವಾದಿ ಪಾರ್ಟಿ(ಎಸ್‍ಪಿ) ಮತ್ತು ಬಹುಜನ ಸಮಾಜ ಪಾರ್ಟಿ(ಬಿಎಸ್‍ಪಿ)ಯ ಜಿಲ್ಲಾಧ್ಯಕ್ಷರು ಕೂಡ ಸೇರಿದ್ದಾರೆ. ತಾನು 6ನೇ ತರಗತಿಯಲ್ಲಿದ್ದಾಗಲೇ ತನ್ನ ಮೇಲೆ ಮೊದಲ ಬಾರಿಗೆ ತಂದೆ ಅತ್ಯಾಚಾರ ಎಸಗಿದ್ದು, ಅಂದಿನಿಂದ ಅನೇಕ ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಸಂತ್ರಸ್ತೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.

ತನ್ನ ತಂದೆ ವ್ಯಾಪಾರಕ್ಕೆಂದು ಕರೆ ಮಾಡಿ ಕರೆದು ಇತರರಿಂದಲೂ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಅಲ್ಲದೇ ಸಂತ್ರಸ್ತೆ ನೀಡಿದ ದೂರಿನಲ್ಲಿ ಸಮಾಜವಾದಿ ಪಕ್ಷದ ಜಿಲ್ಲಾಧ್ಯಕ್ಷ ತಿಲಕ್ ಯಾದವ್, ಅವರ ಮೂವರು ಕಿರಿಯ ಸಹೋದರರು, ಬಿಎಸ್‍ಪಿ ಜಿಲ್ಲಾ ಅಧ್ಯಕ್ಷ ದೀಪಕ್ ಅಹಿರ್ವಾರ್, ಮತ್ತೋರ್ವ ಬಿಎಸ್‍ಪಿ ನಾಯಕ ನೀರಜ್ ತಿವಾರಿ ಮತ್ತು ಆಕೆಯ ಕುಟುಂಬದ ಕೆಲ ಸದಸ್ಯರು ಅತ್ಯಾಚಾರ ಮಾಡಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಇದನ್ನೂ ಓದಿ:  ಸಿಂಹಕ್ಕೂ ಅಂಜದೇ ಮಾಂಸ ತಿನ್ನಿಸಿದ ರಾಕಿ ಬಾಯ್ – ವೀಡಿಯೋ ವೈರಲ್

ಸಂತ್ರಸ್ತೆ ನೀಡಿರುವ ದೂರಿನ ಆಧಾರದ ಮೇಲೆ ಇದೀಗ ಪೊಲೀಸರು, ತಂದೆ ಸೇರಿದಂತೆ ಎಲ್ಲ ಆರೋಪಿಗಳ ವಿರುದ್ಧ ಸೆಕ್ಷನ್ 354 (ಹಲ್ಲೆ), 376ಡಿ (ಅತ್ಯಾಚಾರ), 323 (ಸ್ವಯಂಪ್ರೇರಣೆಯಿಂದ ನೋಯಿಸುವ), 328, 506 (ಕ್ರಿಮಿನಲ್ ಬೆದರಿಕೆ), 120 ಬಿ ಮತ್ತು ಪೋಕ್ಸೋ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಸದ್ಯ 28 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಬಾಲಕಿ ಅಪ್ರಾಪ್ತ ವಯಸ್ಕಳಾಗಿದ್ದು, ಆಕೆಗೆ ಒಬ್ಬ ಸಹೋದರ ಕೂಡ ಇದ್ದಾನೆ. ಸಂತ್ರಸ್ತೆ ನೀಡಿದ ಮಾಹಿತಿ ಕುರಿತಂತೆ ಪರಿಶೀಲಿಸಲಾಗುತ್ತಿದೆ” ಎಂದು ಲಲಿತಪುರ ಎಎಸ್‍ಪಿ ಗಿರಿಜೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ:  ನಾಡಿನೆಲ್ಲೆಡೆ ಆಯುಧಪೂಜೆಯ ಸಂಭ್ರಮ – ರಾಜವಂಶಸ್ಥರ ಆಯುಧಗಳಿಗೆ ಪೂಜೆ ಸಲ್ಲಿಸಲಿರುವ ಯದುವೀರ್

ಇದೀಗ ಬಾಲಕಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಈ ವಿಚಾರ ಬಹಳ ಸೂಕ್ಷ್ಮವಾಗಿದ್ದು, ಎಲ್ಲಾ ಆಯಾಮಗಳಲ್ಲಿಯೂ ತನಿಖೆ ನಡೆಸಲಾಗುತ್ತಿದೆ. ಹೊಸ ಸಾಕ್ಷ್ಯವೊಂದು ಬೆಳಕಿಗೆ ಬಂದಿದ್ದು, ಸರಿಯಾದ ಮಾರ್ಗದಲ್ಲಿ ತನಿಖೆ ನಡೆಸಿ ಸಂತ್ರಸ್ತೆಗೆ ನ್ಯಾಯ ಒದಗಿಸುತ್ತೇವೆ ಎಂದು ಎಎಸ್‍ಪಿ ಗಿರಿಜೇಶ್ ಕುಮಾರ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *