ತಾಯಿಯ 100ನೇ ಹುಟ್ಟುಹಬ್ಬದ ಸಂಭ್ರಮದಲ್ಲಿ ಕವನ ಹೇಳಿ ಮೃತಪಟ್ಟ ಮಗಳು!

ಮಂಗಳೂರು: ತಾಯಿಯ ನೂರನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲೇ ಮಗಳು ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಗ್ಲೋರಿಯಾ ಲೋಬೋ(75) ಮೃತ ದುರ್ದೈವಿ. ಮಂಗಳೂರಿನ ಪಾಂಡೇಶ್ವರ ನಿವಾಸಿ ಗ್ಲಾಡಿ ಡಿಸೋಜಾ ಕಳೆದ ಮಾರ್ಚ್ 30 ರಂದು ಶತಮಾನೋತ್ಸವ ಕಂಡಿದ್ದರು. ಆದರೆ ತಾಯಿಯ ನೂರನೇ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಕೆನಡಾದಲ್ಲಿ ವಾಸವಾಗಿರುವ ಪುತ್ರಿ ಗ್ಲೋರಿಯಾ ಲೋಬೋ ಪಾಂಡೇಶ್ವರದ ಹಿರಿಯರ ಆಶ್ರಮದಲ್ಲಿ ಅದ್ಧೂರಿ ಹುಟ್ಟುಹಬ್ಬ ಆಯೋಜಿಸಿದ್ದರು.

ತಾಯಿ ಬದುಕಿನ ವಿವಿಧ ಹಂತದ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ನೂರರ ಹರೆಯದ ತಾಯಿ ಕೇಕ್ ಕಟ್ ಮಾಡೋವಾಗ ಗ್ಲೋರಿಯಾ ತಾನೇ ಬರೆದ ಕವನ ಹೇಳಿ ಸಂಭ್ರಮ ಪಟ್ಟಿದ್ದರು. ಇದಾಗಿ ಕೆಲವೇ ಕ್ಷಣಗಳಲ್ಲಿ ಗ್ಲೋರಿಯಾ ನಿಂತಲ್ಲೇ ಕುಸಿದು ಬಿದ್ದಿದ್ದಾರೆ. ಇದನ್ನು ಓದಿ: 5 ಮಕ್ಕಳು, 60 ಕ್ಕೂ ಹೆಚ್ಚು ಮೊಮ್ಮಕಳು, ಮರಿ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಸೆಂಚುರಿ ಅಜ್ಜಿ

ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ತಾಯಿ ಹುಟ್ಟು ಹಬ್ಬ ಆಚರಿಸಲೆಂದು ಕಳೆದ ಎರಡು ವಾರದ ಹಿಂದೆಯಷ್ಟೇ ಗ್ಲೋರಿಯಾ ಕೆನಡಾದಿಂದ ಮಂಗಳೂರಿಗೆ ಆಗಮಿಸಿದ್ದರು.

Comments

Leave a Reply

Your email address will not be published. Required fields are marked *