– ಪಂಚಾಯಿತಿ ದಾಖಲೆಯಲ್ಲಿಲ್ಲ ಶವ ಹೂತ ಮಾಹಿತಿ
ಚಿಕ್ಕಮಗಳೂರು: ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಕಾಫಿನಾಡ ದತ್ತಪೀಠದ (Datta Peeta) ಗುಹೆ ಒಳಗೆ-ಹೊರಗೆ ಇರೋ ಗೋರಿಗಳು ನಕಲಿ ಅಂತ ಬಿಜೆಪಿ-ಹಿಂದೂ ಸಂಘಟನೆಗಳು 30 ವರ್ಷದಿಂದ ಹೇಳಿಕೊಂಡೇ ಬರುತ್ತಿವೆ. ಇದರ ನಡುವೆ ಇನಾಂ ದತ್ತಾತ್ರೇಯ ಗ್ರಾಮ ಪಂಚಾಯಿತಿ ಅಧಿಕಾರಿಗಳು ಕೊಟ್ಟಿರೋ ಉತ್ತರ ಎಲ್ಲರ ಕಿವಿಯನ್ನ ನೆಟ್ಟಗಾಗಿಸಿದೆ.
ಹಿಂದೂಪರ ಸಂಘಟನೆಗಳು ಆರ್‌ಟಿಐನಲ್ಲಿ ಗೋರಿಗಳು ಯಾರದ್ದು? ನೀವು ಯಾರದ್ದಾದರೂ ಶವ ಹೂತಿದ್ದೀರಾ? ಸಾಧು-ಸಂತರು, ಮುಸ್ಲಿಂ ಧರ್ಮಗುರುಗಳು, ಪಕೀರರ ಶವ ಹೂತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ. ಈ ಮಾಹಿತಿಗೆ ಇನಾಂ ದತ್ತಾತ್ರೇಯ ಪೀಠ ಗ್ರಾಮ ಪಂಚಾಯಿತಿ ಯಾವುದೇ ಮಾಹಿತಿ ಗ್ರಾಮ ಪಂಚಾಯಿತಿಯಲ್ಲಿ ಇಲ್ಲ ಎಂದು ಹಿಂಬರಹ ನೀಡಿದ್ದಾರೆ. ಇದು ಬಿಜೆಪಿಗರು (BJP) ಇಷ್ಟು ವರ್ಷ ಮಾಡಿಕೊಂಡ ಬಂದ ಆರೋಪಕ್ಕೆ ಪುಷ್ಠಿ ಸಿಕ್ಕಿದ್ದು ಇನ್ಮುಂದೆ ಹೋರಾಟದ ಹಾದಿ ಬದಲಾಗೋ ಸಾಧ್ಯತೆ ಕೂಡ ಇದೆ. ಇದನ್ನೂ ಓದಿ: ದತ್ತಪೀಠ ವಿವಾದ; ಭೂ ದಾಖಲೆಗಳ ಆಧಾರದ ಮೇಲೆ ವಿವಾದ ಬಗೆಹರಿಯಲಿ: ಸಿ.ಟಿ ರವಿ
ಈ ಬಗ್ಗೆ ಪ್ರತಿಕ್ರಿಯಿಸಿರುವ ವಿಹೆಚ್‌ಪಿ (VHP) ಮುಖಂಡ ರಂಗನಾಥ್, ಗ್ರಾಮ ಪಂಚಾಯಿತಿಯ ಈ ಉತ್ತರ ಹಿಂದೂಪರ ಸಂಘಟನೆಗಳ ಹೋರಾಟಕ್ಕೆ ಆನೆ ಬಲ ತರಿಸಿದೆ. ಹಿಂದೂ ಪರ ಸಂಘಟನೆಗಳು 30 ವರ್ಷಗಳಿಂದ ದತ್ತಪೀಠ ಹಿಂದೂಗಳದ್ದು. ಧರ್ಮಸ್ಥಳದ ಉತ್ಖನನದ ಹಿಂದೆ ದೊಡ್ಡ ಷಡ್ಯಂತ್ರ ಅಡಗಿದೆ. ದತ್ತಪೀಠದಲ್ಲೂ ಅಂತಹದ್ದೇ ಷಡ್ಯಂತ್ರ ನಡೆದಿದೆ. ಹಿಂದೂ ಧಾರ್ಮಿಕ ಶ್ರದ್ಧಾ ಕೇಂದ್ರವಾಗಿರೋದ್ರಿಂದ ಅಲ್ಲಿ ಯಾವುದೇ ಮುಸ್ಲಿಮರ ಕುರುಹುಗಳಿಲ್ಲ. ಹಾಗಾಗಿ, ದತ್ತಪೀಠವನ್ನು ಮುಸ್ಲಿಂ ಮುಕ್ತವನ್ನಾಗಿಸಿ ಸಂಪೂರ್ಣವಾಗಿ ಹಿಂದುಗಳಿಗೆ ಒಪ್ಪಿಸಬೇಕೆಂದು ಆಗ್ರಹಿಸಿದ್ದಾರೆ.
30 ವರ್ಷದ ದತ್ತಪೀಠದ ವಿವಾದ-ಹೋರಾಟ ಈಗ ಮತ್ತೊಂದು ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ. ಗ್ರಾಮ ಪಂಚಾಯಿತಿ ಅಲ್ಲಿನ ಗೋರಿಗಳ ಬಗ್ಗೆ ನಮಲ್ಲಿ ಯಾವುದೇ ಮಾಹಿತಿ-ದಾಖಲೆ ಇಲ್ಲ ಎಂದಿರೋದು ಹಿಂದೂಗಳ ಆರೋಪ-ಹೋರಾಟಕ್ಕೆ ಸಿಕ್ಕ ಅರ್ಧ ಜಯದಂತಾಗಿದೆ. ಆದರೆ, ಪ್ರಕರಣ ಕೋರ್ಟ್ ಕಟಕಟೆಯಲ್ಲಿದ್ದು ಅಂತಿಮವಾಗಿ ತೀರ್ಪು ಏನು ಬರುತ್ತೋ ಅನ್ನೋದು ಎರಡೂ ಧರ್ಮದವರಿಗೂ ಕುತೂಹಲ ಮೂಡಿಸಿದೆ. ಇದನ್ನೂ ಓದಿ: ದತ್ತಪೀಠದ ಪೂಜಾ ಪದ್ಧತಿ – ಸುಪ್ರಿಂ ಸೂಚನೆಯಂತೆ ಕ್ಯಾಬಿನೆಟ್ ಸಬ್ ಕಮಿಟಿ ಸಭೆ
