ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರವೇ ಉಳಿಯಲ್ಲ: ಗಂಗಾಧರ್ ಕುಲಕರ್ಣಿ

-ಮಾತಿನಂತೆ ಒಂದೇ ವರ್ಷಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡ್ರು

ಚಿಕ್ಕಮಗಳೂರು: ಮಾಜಿಮುಖ್ಯಮಂತ್ರಿ ಯಡಿಯೂರಪ್ಪಗೆ ಅಧಿಕಾರ ಕಳೆದುಕೊಳ್ಳುತ್ತೀರಾ ಎಂದು ಹೇಳಿದ್ದೆ. ಹೇಳಿದ ಒಂದೇ ವರ್ಷಕ್ಕೆ ಯಡಿಯೂರಪ್ಪ ಅಧಿಕಾರ ಕಳೆದುಕೊಂಡ್ರು. ದತ್ತಾತ್ರೇಯರಿಗೆ ದ್ರೋಹ ಮಾಡಿದರೆ ಬಿಜೆಪಿ ಸರ್ಕಾರವೇ ಉಳಿಯಲ್ಲ ಎಂದು ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಬಿಜೆಪಿ ಸರ್ಕಾರದ ವಿರುದ್ಧ ಭವಿಷ್ಯ ನುಡಿದಿದ್ದಾರೆ.

ಶ್ರೀರಾಮಸೇನೆಯ 17ನೇ ವರ್ಷದ ದತ್ತಮಾಲಾ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ಒಂದೇ ತಿಂಗಳಿಗೆ ದತ್ತಪೀಠ ಹಿಂದೂಗಳಿಗೆ ಎಂದು ಹೇಳಿದ್ರಿ. ಅಧಿಕಾರಕ್ಕೆ ಬಂದು ಎರಡ್ಮೂರು ವರ್ಷವಾದ್ರು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಿಲ್ಲ. ರಾಜಕಾರಣ ಏನಾದ್ರು ಮಾಡಿಕೊಳ್ಳಿ, ಧರ್ಮ-ಗುರುಗಳ ಜೊತೆ ಹುಡುಗಾಟ ಒಳ್ಳೆಯದಲ್ಲ. ಇದೀಗ ದತ್ತಪೀಠದ ಕುರಿತಾಗಿ ಸಮಿತಿ ಮಾಡುವ ಅಗತ್ಯವೇನಿದೆ? ಇಷ್ಟು ವರ್ಷ ಕೋರ್ಟ್ ಕೊಟ್ಟ ತೀರ್ಪಿಗೆ ಕಿಮ್ಮತ್ತಿಲ್ವ ಎಂದು ಪ್ರಶ್ನಿಸಿ ತಕ್ಷಣವೇ ಬಾಯಿ ಮುಚ್ಚಿಕೊಂಡು ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ದತ್ತಪೀಠದಲ್ಲಿ ಮುಜಾವರ್ ನೇಮಕ ರದ್ದು – ಮತ್ತೆ ಸರ್ಕಾರದ ಅಂಗಳಕ್ಕೆ ಚೆಂಡು

ಈ ಮೊದಲು ಚಿಕ್ಕಮಗಳೂರು ನಗರದ ಶಂಕರಮಠದಲ್ಲಿ ದತ್ತಮಾಲಾಧಾರಣೆ ಮಾಡುವ ಮೂಲಕ ಗಂಗಾಧರ್ ಕುಲಕರ್ಣಿ ದತ್ತಮಾಲಾ ಅಭಿಯಾನಕ್ಕೆ ಚಾಲನೆ ಚಾಲನೆ ನೀಡಿದರು. ಇವರೊಂದಿಗೆ ಶ್ರೀರಾಮಸೇನೆಯ ಹಲವು ಕಾರ್ಯಕರ್ತರು ಮಾಲಾಧಾರಣೆ ಮಾಡಿದರು. ಇಂದಿನಿಂದ 7 ದಿನ ಈ ಅಭಿಯಾನ ನಡೆಯಲಿದ್ದು, ನವೆಂಬರ್ 14 ರಂದು ಇನಾಂ ದತ್ತಾತ್ರೇಯ ಪೀಠದಲ್ಲಿ ವಿವಿಧ ಮಠಾಧೀಶರು ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಇಂದಿನಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಶ್ರೀರಾಮಸೇನೆ ಕಾರ್ಯಕರ್ತರು ಮಾಲಾಧಾರಣೆ ಮಾಡಲಿದ್ದಾರೆ. ಇದನ್ನೂ ಓದಿ: ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು: ಈಶ್ವರಪ್ಪ

Comments

Leave a Reply

Your email address will not be published. Required fields are marked *