ಇನ್ಮುಂದೆ ಭಾರತದಲ್ಲೇ ತಯಾರಾಗುತ್ತೆ ರಫೇಲ್ ಬಿಡಿಭಾಗಗಳು – ಟಾಟಾ ಜೊತೆ ಡಸಾಲ್ಟ್ ಒಪ್ಪಂದ

ನವದೆಹಲಿ: ಭಾರತದ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ರಫೇಲ್ ಜೆಟ್‌ಗಳ ಬಿಡಿ ಭಾಗಗಳು ಇನ್ನು ಮುಂದೆ ನಮ್ಮ ದೇಶದಲ್ಲೇ ತಯಾರಾಗಲಿವೆ. ಈ ಮಹತ್ವದ ಯೋಜನೆಗಾಗಿ ರಫೇಲ್ (Rafale Fighter Jet) ತಯಾರಕ ಕಂಪನಿ ಡಸಾಲ್ಟ್ ಏವಿಯೇಷನ್ (Dassault) ಟಾಟಾ ಗ್ರೂಪ್‌ನೊಂದಿಗೆ (Tata) ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದೆ.

ಡಸ್ಸಾಲ್ಟ್ ಏವಿಯೇಷನ್ ​​ಮತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ ಭಾರತದಲ್ಲಿ ರಫೇಲ್ ಯುದ್ಧ ವಿಮಾನದ ಫ್ಯೂಸ್‌ಲೇಜ್ ತಯಾರಿಸಲು ನಾಲ್ಕು ಒಪ್ಪಂದಗಳಿಗೆ ಸಹಿ ಹಾಕಿವೆ. ಇನ್ನೂ ಫೈಟರ್‌ ಜೆಟ್‌ಗಳ ಬಿಡಿಭಾಗಗಳನ್ನು ತಯಾರಿಸಲು ಹೈದರಾಬಾದ್‌ನಲ್ಲಿ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗುತ್ತಿದೆ. ಇದು ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ. ಇದನ್ನೂ ಓದಿ: ಖರೀದಿಗೆ ಸಹಿ; ಭಾರತ-ಫ್ರಾನ್ಸ್ ಮಧ್ಯೆ 63,000 ಕೋಟಿ ಮೆಗಾ ಡೀಲ್‌

ರಫೇಲ್‌ನ ಪ್ರಮುಖ ಬಿಡಿಭಾಗಗಳಾದ ಹಿಂಭಾಗದ ಫ್ಯೂಸ್‌ಲೇಜ್‌ನ ಲ್ಯಾಟರಲ್ ಶೆಲ್‌ಗಳು, ಕೇಂದ್ರ ಫ್ಯೂಸ್‌ಲೇಜ್ ಮತ್ತು ವಿಮಾನದ ಮುಂಭಾಗ ಸೇರಿದಂತೆ ಹಲವಾರು ಪ್ರಮುಖ ಬಿಡಿಭಾಗಗಳು ಹೈದರಾಬಾದ್‌ನಲ್ಲಿಯೇ ತಯಾರಾಗಲಿವೆ. ಫ್ರಾನ್ಸ್‌ನ ಹೊರಗೆ ಇವುಗಳನ್ನು ಉತ್ಪಾದಿಸಲಾಗುತ್ತಿರುವುದು ಇದೇ ಮೊದಲಾಗಿದೆ.

2028ರ ಹಣಕಾಸು ವರ್ಷದ ವೇಳೆಗೆ ಎರಡು ವಿಮಾನಗಳನ್ನು ತಯಾರಿಸುವ ಗುರಿಯನ್ನು ಡಸ್ಸಾಲ್ಟ್ ಏವಿಯೇಷನ್ ​​ಮತ್ತು ಟಾಟಾ ಅಡ್ವಾನ್ಸ್‌ಡ್ ಸಿಸ್ಟಮ್ಸ್ ಲಿಮಿಟೆಡ್ ಹೊಂದಿವೆ. ಇದನ್ನೂ ಓದಿ: 26 ರಫೇಲ್ ಯುದ್ಧ ವಿಮಾನ ಖರೀದಿ – ಭಾರತ ಫ್ರಾನ್ಸ್ ಮಧ್ಯೆ 63,000 ಕೋಟಿ ಡೀಲ್‌ಗೆ ಅನುಮೋದನೆ