ಕಾವೇರಿ ತೀರ್ಪಿನ ಬಗ್ಗೆ ದರ್ಶನ್ ಸಂತಸ ವ್ಯಕ್ತಪಡಿಸಿದ್ದು ಹೀಗೆ

ಬೆಂಗಳೂರು: ನನ್ನ ಹುಟ್ಟು ಹಬ್ಬದಂದು ಕಾವೇರಿ ತೀರ್ಪು ಕರ್ನಾಟಕದ ಪರವಾಗಿ ಪ್ರಕಟವಾಗಿದ್ದು ತುಂಬಾ ಖುಷಿ ತಂದಿದೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಸಂತೋಷವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡರು.

ಸುಪ್ರಿಂನಲ್ಲಿ ಕಾವೇರಿ ವಿಚಾರಣೆ ಬಂದ್ರೆ ಸಾಕು ಎಲ್ಲಿ ಕಪ್ರ್ಯೂ ಆರಂಭವಾಗುತ್ತದೆ ಎನ್ನುವ ಭಯವಾಗುತ್ತಿತ್ತು. ಬಹುಶಃ ಇಂದು ಎಲ್ಲರ ಮನೆಯಲ್ಲಿ ಹಬ್ಬದ ವಾತಾವರಣ ನಿರ್ಮಾಣ ಆಗಿರುತ್ತದೆ. ನಮ್ಮ ಹುಟ್ಟು ಹಬ್ಬದಂದು ರಾಜ್ಯದ ಜನತೆಗೆ ಗುಡ್ ನ್ಯೂಸ್ ಸಿಕ್ಕಿರುವುದು ಅದೇ ನನಗೆ ದೊಡ್ಡ ಗಿಫ್ಟ್ ಎಂದು ಖುಷಿ ವ್ಯಕ್ತಪಡಿಸಿದರು.

ಮೆಜೆಸ್ಟಿಕ್ ನಿಂದ ಇಲ್ಲಿಯವರೆಗೆ ಕಷ್ಟಪಟ್ಟು ಮತ್ತು ಇಷ್ಟಪಟ್ಟು ಬಂದಿದ್ದೇನೆ. ಇಂದು ಅಭಿಮಾನಿಗಳೆಲ್ಲ ಸಂತೋಷ ಸಡಗರದಿಂದ ‘ಡಿ-ಉತ್ಸವ’ ಆಚರಣೆ ಮಾಡುತ್ತಿರುವುದು ತುಂಬಾ ಖುಷಿ ತಂದಿದೆ. ಇಂದು ಕುರುಕ್ಷೇತ್ರ ಚಿತ್ರದ ಬಳಿಕ ‘ಯಜಮಾನ’ ಸಿನಿಮಾದ ಶೂಟಿಂಗ್‍ನಲ್ಲಿ ತೊಡಗಿಕೊಳ್ಳುತ್ತೇನೆ. ಎಲ್ಲ ಅಭಿಮಾನಿಗಳಿಂದ ನಾನಿಂದು ಇಲ್ಲಿದ್ದೇನೆ ಅಂತಾ ಹೇಳಿದ್ರು. ಇದನ್ನೂ ಓದಿ: ದರ್ಶನ್ ಹುಟ್ಟುಹಬ್ಬಕ್ಕೆ ತೆಲುಗು ಅಭಿಮಾನಿಯಿಂದ ಉಚಿತ ಹೇರ್ ಕಟಿಂಗ್, ಶೇವಿಂಗ್!

ಪ್ರತಿ ವರ್ಷದಂತೆ ಈ ವರ್ಷ ಕೂಡ ಅಭಿಮಾನಿಗಳು ಹಾಗೂ ಕುಟುಂಬಸ್ಥರೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ನಿಜಕ್ಕೂ ವಿಶೇಷವಾಗಿದೆ. ಅಭಿಮಾನಿಗಳೇ ನನಗೆಲ್ಲಾ, ಸ್ನೇಹಿತರು ದಿನಾ ಸಿಗುತ್ತಾರೆ. ಅಭಿಮಾನಿಗಳು ಇವತ್ತು ಮಾತ್ರ ಸಿಗುತ್ತಾರೆ. ಅವರಿಗೋಸ್ಕರ ಅವರ ಜೊತೆ ಇರುತ್ತೀನಿ. ನಾನಾ ಜಿಲ್ಲೆಗಳಿಂದ ಬಂದು ಶುಭ ಹಾರೈಸಲು ಬಂದಿರೋ ಅಭಿಮಾನಿಗಳಿಗೆ ನಾನು ಚಿರುಋಣಿಯಾಗಿರುತ್ತೀನಿ. ಯುವಕರಿಗೆ ನಾನಿಷ್ಟೇ ಹೇಳಲು ಬಯಸುತ್ತೇನೆ. ಅದೇನೆಂದ್ರೆ ಟೈಂ ಇಂಪಾರ್ಟೆಂಟ್.. ಟೈಂ ವೇಸ್ಟ್ ಮಾಡಬೇಡಿ. ಎಂದು ಹೇಳಿ ಇನ್ನೂ ಒಳ್ಳೊಳ್ಳೆ ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ.

ಇಂದು ರಾಜರಾಜೇಶ್ವರಿ ನಗರದಲ್ಲಿರೋ ತಮ್ಮ ನಿವಾಸದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 41ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಸಹಸ್ರಾರು ಅಭಿಮಾನಿಗಳು ದರ್ಶನ್ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಿದ್ದು, ಸರತಿ ಸಾಲಲ್ಲಿ ಕಾದು ನಿಂತು, ತಮ್ಮ ಆರಾಧ್ಯ ದೈವ ದರ್ಶನ್ ಗೆ ಹುಟ್ಟು ಹಬ್ಬದ ಭರಪೂರ ಶುಭಾಶಯಗಳನ್ನ ಕೋರಿದರು.

Comments

Leave a Reply

Your email address will not be published. Required fields are marked *