16 ಕೆ.ಜಿ ಚಿನ್ನದ ಸೀರೆ ಉಡಿಸಿ ಮಹಾಲಕ್ಷ್ಮಿ ದೇವಿಗೆ ಅಲಂಕಾರ

Gold Saree

ಮುಂಬೈ: ನವರಾತ್ರಿ ಹಬ್ಬದಲ್ಲಿ ದುರ್ಗಾ ಪೂಜೆಯ ಕೊನೆಯ ದಿನವನ್ನು ವಿಜಯದಶಮಿ ಎಂದು ಕರೆಯಲಾಗುತ್ತದೆ.

ಈ ದಿನ ಕೆಟ್ಟದ್ದರ ವಿರುದ್ಧ ಒಳ್ಳೆಯದು ವಿಜಯ ಸಾಧಿಸುವುದನ್ನು ಸೂಚಿಸುತ್ತದೆ. ದೇಶಾದ್ಯಂತ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ ಮತ್ತು ರಾವಣ, ಮೇಘನಾಥ ಮತ್ತು ಕುಂಭಕರ್ಣನ ಪ್ರತಿಕೃತಿಗಳನ್ನು ಸುಡಲಾಗುತ್ತದೆ.  ಇದನ್ನೂ ಓದಿ: ಜನಸಂಖ್ಯಾ ಅಸಮತೋಲನ ತಡೆಗೆ ಹೊಸ ನೀತಿ ಜಾರಿಗೊಳಿಸಬೇಕು: ಮೋಹನ್ ಭಾಗವತ್

Gold Saree

ದಸರಾದ ಈ ಶುಭ ಸಂದರ್ಭದಲ್ಲಿ, ಪುಣೆಯ ಸರಸ್‍ಬಾಗ್‍ನ ಮುಂಭಾಗದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನವು ಭಾರೀ ಸದ್ದು ಮಾಡುತ್ತಿದೆ. ಏಕೆಂದರೆ ಪ್ರತಿ ವರ್ಷ ದಸರಾ ಸಂದರ್ಭದಲ್ಲಿ ದೇವಸ್ಥಾನದಲ್ಲಿರುವ ಮಹಾಲಕ್ಷ್ಮಿ ದೇವಿ ವಿಗ್ರಹಕ್ಕೆ 16 ಕೆಜಿ ಚಿನ್ನದ ಸೀರೆಯನ್ನು ಉಡಿಸಲಾಗುತ್ತದೆ. ಹೌದು, 2011 ರಲ್ಲಿ ಭಕ್ತರೊಬ್ಬರು ದೇವಸ್ಥಾನದ ಟ್ರಸ್ಟಿಗೆ ಈ ಚಿನ್ನದ ಸೀರೆಯನ್ನು ದಾನ ಮಾಡಿದ್ದು, ಅದನ್ನು ದಕ್ಷಿಣ ಭಾರತದಲ್ಲಿ ಚಿನ್ನದ ಕೆಲಸಗಾರರಿಂದ ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ. ಭಕ್ತ ಈ ಸೀರೆಯನ್ನು ದೇವಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ.

Gold Saree

ಪ್ರತಿವರ್ಷ ನವರಾತ್ರಿ ಮತ್ತು ದೀಪಾವಳಿಯ ಶುಭ ದಿನಗಳಲ್ಲಿ ಮಹಾಲಕ್ಷ್ಮಿ ದೇವಿಯನ್ನು ಚಿನ್ನದ ಆಭರಣ ಮತ್ತು ಸೀರೆಯಿಂದ ಅಲಂಕರಿಸಲಾಗುತ್ತದೆ. ದೇವಿಯು ಧರಿಸಿದ ಸೀರೆಯ ತೂಕವು 16 ಕೆಜಿಯಷ್ಟು ಭಾರವಿದೆ. ದೇವಸ್ಥಾನವು ಕಟ್ಟುನಿಟ್ಟಾದ ನಿಯಮಗಳನ್ನು ಅನುಸರಿಸುತ್ತಿದ್ದು, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಜನದಟ್ಟಣೆಯ ಸಮಸ್ಯೆಯ ಬಗ್ಗೆ ಸರಿಯಾದ ಕಾಳಜಿ ವಹಿಸಲಾಗಿದೆ.  ಇದನ್ನೂ ಓದಿ:  ಭಯ ಹುಟ್ಟಿಸಲು ಉಗ್ರರು ಹತ್ಯೆಯನ್ನು ಗುರಿಯಾಗಿಸಿಕೊಂಡಿದ್ದಾರೆ: ಮೋಹನ್ ಭಾಗವತ್

ಭವ್ಯವಾದ ಮೂರ್ತಿಯ ದರ್ಶನಕ್ಕಾಗಿ ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಭಕ್ತ ಸಾಗರವೇ ಹರಿದು ಬರುತ್ತಿದೆ. ಇದಲ್ಲದೆ, ಮಹಾಲಕ್ಷ್ಮಿ ದೇವಾಲಯದ ದೀಪಾಲಂಕಾರ ಕೂಡ ಅದ್ಭುತವಾಗಿದೆ.

Comments

Leave a Reply

Your email address will not be published. Required fields are marked *