ದರ್ಶನ್‌ ಜಾಮೀನು ಭವಿಷ್ಯ; ವಾದ-ಪ್ರತಿವಾದ ಮುಕ್ತಾಯ – ಒಂದು ವಾರದಲ್ಲಿ ಸುಪ್ರೀಂ ಆದೇಶ

ನವದೆಹಲಿ: ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಟ ದರ್ಶನ್‌ಗೆ ಮತ್ತೆ ಜೈಲಾಗುತ್ತಾ ಅಥವಾ ಜಾಮೀನು ಸಿಗುತ್ತಾ ಅನ್ನೋ ವಿಚಾರ ಕುತೂಹಲವಾಗಿಯೇ ಉಳಿದಿದೆ. ಸದ್ಯ ವಾದ-ಪ್ರತಿವಾದ ಮುಕ್ತಾಯಗೊಂಡಿದ್ದು, ಒಂದು ವಾರದಲ್ಲಿ ಆದೇಶ ಪ್ರಕಟಿಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ ನೀಡಿ‌ದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನಿಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠ ವಿಚಾರಣೆ ನಡೆಸಿತು. ಹೈಕೋರ್ಟ್‌ ರೀತಿ ತರಾತುರಿಯಲ್ಲಿ ಆದೇಶ ನೀಡುವುದಿಲ್ಲ ಎಂದು ಹೇಳಿದ ಸುಪ್ರೀಂ ಒಂದು ವಾರದಲ್ಲಿ ಆದೇಶ ಪ್ರಕಟಿಸುವುದಾಗಿ ಹೇಳಿತು. ಇದನ್ನೂ ಓದಿ: 3,000 ಕೋಟಿ ಸಾಲ ವಂಚನೆ ಕೇಸ್‌ – ಅನಿಲ್‌ ಅಂಬಾನಿಗೆ ಸೇರಿದ 50 ಕಂಪನಿಗಳ ಮೇಲೆ ED ದಾಳಿ

ಒಂದೂವರೆ ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿ ಕಡೆಯಲ್ಲಿ ಇತರೇ ಆರೋಪಿಗಳ ಪರ ವಕೀಲರ ಮಾಹಿತಿ ಕೇಳಿತು. ಎಲ್ಲ ಆರೋಪಿಗಳ ಪರ ವಕೀಲರು ಲಿಖಿತ ವಾದ ಮಂಡಿಸಬಹುದು. ಇಂದಿನಿಂದ ಒಂದು ವಾರದಲ್ಲಿ ಮೂರು ಪುಟಗಳ ಮಾಹಿತಿ ನೀಡಬೇಕು. ಬಳಿಕ ಆದೇಶ ನೀಡುವುದಾಗಿ ಕೋರ್ಟ್‌ ಹೇಳಿತು.

ದರ್ಶನ್‌ ಪರ ಹಿರಿಯ ವಕೀಲ ಸಿದ್ಧಾರ್ಥ್ ದವೆ ವಾದ ಮಂಡಿಸಿದ್ರೆ, ಸರ್ಕಾರಿ ವಕೀಲರಾಗಿ ಸಿದ್ಧಾರ್ಥ ಲೂಥ್ರಾ ಪ್ರಬಲ ವಾದ ಮಂಡಿಸಿದರು. ಇದನ್ನೂ ಓದಿ: ED ಭರ್ಜರಿ ಬೇಟೆ – ಟಿಎಂಸಿ ಮಾಜಿ ಸಂಸದನ ಪುತ್ರನಿಗೆ ಸೇರಿದ 127 ಕೋಟಿ ಮೌಲ್ಯದ ಷೇರು ಜಪ್ತಿ