ಸುಮಲತಾ ಅಂಬರೀಶ್‍ಗೆ ದಚ್ಚು-ಕಿಚ್ಚನಿಂದ ಭಾವನಾತ್ಮಕ ಬರ್ತ್ ಡೇ ವಿಶ್

ಬೆಂಗಳೂರು: ಇಂದು ಹಿರಿಯ ನಟಿ ಸುಮತಲಾ ಅಂಬರೀಶ್ ಅವರ 55ನೇ ವರ್ಷದ ಹುಟ್ಟುಹಬ್ಬ. ಆದ್ದರಿಂದ ನಟರಾದ ದರ್ಶನ್ ಮತ್ತು ಕಿಚ್ಚ ಸುದೀಪ್ ಅವರು ಭಾವನಾತ್ಮಕವಾಗಿ ಶುಭಾಶಯವನ್ನು ತಿಳಿಸಿದ್ದಾರೆ.

ಸುಮಲತಾ ಅವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಸ್ಯಾಂಡಲ್ ವುಡ್ ತಾರೆಯರು ಬರ್ತ್ ಡೇ ಶುಭಾಶಯದ ಮಹಾಪೂರವೇ ಹರಿದು ಬರುತ್ತಿದೆ. ನಟ ಸುದೀಪ್ ಮತ್ತು ದರ್ಶನ್ ಟ್ವೀಟ್ ಮಾಡುವ ಮೂಲಕ ಶುಭಾಶಯ ಕೋರಿದ್ದಾರೆ.

ನಟ ದರ್ಶನ್ ಅವರು, “ನನ್ನ ನೆಚ್ಚಿನ ಮದರ್ ಇಂಡಿಯಾಗೆ ಹುಟ್ಟುಹಬ್ಬದ ಶುಭಾಶಯಗಳು. ಇನ್ನೊಂದು ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದೀರಾ. ನೀವು ನನಗೆ ಒಬ್ಬ ಅದ್ಭುತ ವ್ಯಕ್ತಿ. ಯಾವಾಗಲೂ ಸಂತೋಷದಿಂದ ಇರಿ” ಎಂದು ಬರೆದು ಅದರ ಜೊತೆಗೆ ಸುಮಲತಾ ಮತ್ತು ಅಂಬರೀಶ್ ಒಟ್ಟಿಗೆ ಇರುವ ಫೋಟೋ ಹಾಕಿ ಟ್ವೀಟ್ ಮಾಡಿದ್ದಾರೆ.

ನಟ ಸುದೀಪ್ ಅವರು, “ನೀವು ಒಬ್ಬ ಅದ್ಭುತ ವ್ಯಕ್ತಿಯಾಗಿದ್ದೀರಿ. ನಿಮ್ಮ ನಗು ನಮಗೆ ಸ್ಪೂರ್ತಿದಾಯಕವಾಗಿದೆ. ಜೀವನದಲ್ಲಿ ಎದುರಾಗುವ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವುದು ಎಂಬುದನ್ನು ನಿಮ್ಮನ್ನು ನೋಡಿ ಕಲಿತ್ತಿದ್ದೇವೆ. ನೀವು ನಮ್ಮ ಜೀವನದ ಒಂದು ಭಾಗವಾಗಿದ್ದೀರಿ ಅಕ್ಕ” ಎಂದು ಬರ್ತ್ ಡೇ ಶುಭಾಶಯವನ್ನು ತಿಳಿಸಿದ್ದಾರೆ.

ಶುಭಾಶಯ ಕೋರಿದ ದರ್ಶನ್ ಮತ್ತು ಸುಸದೀಪ್ ಅವರಿಗೆ ಸುಮಲತಾ ಅವರು ರೀಟ್ವೀಟ್ ಮಾಡಿ ಧನ್ಯವಾದ ತಿಳಿಸಿದ್ದಾರೆ. `ನಿಮ್ಮ ಪ್ರೀತಿಯ ಶುಭಾಶಯವಿಲ್ಲದೆ ನನ್ನ ಹುಟ್ಟುಹಬ್ಬ ಸಂಪೂರ್ಣವಾಗುವುದಿಲ್ಲ. ಥ್ಯಾಂಕ್ ಯು ಮೈ ಡಾರ್ಲಿಂಗ್ ದರ್ಶನ್” ಎಂದು ತಿಳಿಸಿದ್ದಾರೆ. ಸುದೀಪ್ ಅವರಿಗೆ `ನೀವು ಯಾವಗಾಲೂ ನನಗೆ ವಿಶೇಷ ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *