ಯಾರೂ ಇಂಥ ಕೃತ್ಯ ಎಸಗದಿರಿ- ಅಭಿಮಾನಿಗಳಿಗೆ ದರ್ಶನ್ ಸಂದೇಶ

ಬೆಂಗಳೂರು: ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರದ ಸಂದೇಶ ಹಾಕುತ್ತಿದ್ದ ತಮ್ಮ ಹೆಸರಿನ ನಕಲಿ ಖಾತೆ ವಿರುದ್ಧ ಇದೀಗ ಚಾಲೆಂಜಿಂಗ್ ಸ್ಠಾರ್ ಗರಂ ಆಗಿದ್ದಾರೆ.

ಕಳೆದ ಕೆಲ ದಿನಗಳಿಂದ ದರ್ಶನ್ ತೂಗುದೀಪ ಶ್ರೀನಿವಾಸ್ ಹೆಸರಲ್ಲಿ ಎಚ್.ಡಿ ಕುಮಾರಸ್ವಾಮಿ ವಿರುದ್ಧ ಸರಣಿ ಟ್ವೀಟ್‍ಗಳು ಬರೋಕೆ ಶುರುವಾಗಿದ್ದವು. ನಕಲಿ ಅಕೌಂಟ್ ದರ್ಶನ್ ಗಮನಕ್ಕೆ ಬಂದ ಕೂಡಲೇ ತಮ್ಮ ರಿಯಲ್ ಅಕೌಂಟ್‍ನಿಂದ ಜನತೆಗೆ ಸಂದೇಶ ಕೋರಿದ್ದಾರೆ.

“ನನ್ನ ಹೆಸರಲ್ಲಿ ಕಿಡಿಗೇಡಿಗಳು ನಕಲಿ ಖಾತೆ ಹೊಂದಿದ್ದಾರೆ. ಇದರ ಮೂಲಕ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಇದು ತಪ್ಪು. ಸೈಬರ್ ಕ್ರೈಂ ಡಿಪಾರ್ಟ್ ಮೆಂಟ್ ತಪ್ಪಿತಸ್ಥರಿಗೆ ಶಿಕ್ಷೆ ನೀಡೋದಾಗಿ ಹೇಳಿದೆ. ಯಾರೂ ಕೂಡ ಇಂಥಹ ಕೃತ್ಯ ಎಸಗದಿರಿ” ಎಂಬುದಾಗಿ ದರ್ಶನ್ ಅಭಿಮಾನಿಗಳಿಗೆ ಟ್ವಿಟ್ಟರ್ ಮತ್ತು ಫೇಸ್ ಬುಕ್ ಮೂಲಕ ಸಂದೇಶ ರವಾನಿಸಿದ್ದಾರೆ.

ಆಗಿದ್ದೇನು?
ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ್ ನಕಲಿ ಫೇಸ್‍ಬುಕ್ ಅಕೌಂಟ್ ಓಪನ್ ಮಾಡಿ ಸಿಎಂ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ದರ್ಶನ್ ಅವರ ಹೆಸರಿನಲ್ಲಿ ಫೇಕ್ ಅಕೌಂಟ್ ಓಪನ್ ಮಾಡಿದ್ದು, ಇದರಲ್ಲಿ ಸಿಎಂ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ್ದರು. `ಈ ಸಲ ಕಪ್ಪು ನಮ್ದೆ ಕಪ್ಪು ನಮ್ದೆ ಅಂತಿದ್ದವರು, ಆ ಕಪ್ಪು ಇದು ಅಂತ ಹೇಳೋಕೇನಾಗಿತ್ರೋ’ ಎಂದು ಕುಮಾರಸ್ವಾಮಿ ಅವರನ್ನು ಟಾರ್ಗೇಟ್ ಮಾಡಿ ಪೋಸ್ಟ್ ಹಾಕಲಾಗಿತ್ತು.

Comments

Leave a Reply

Your email address will not be published. Required fields are marked *