ಹೊಸ ವರ್ಷದ ದಿನವೇ ‘ಡೆವಿಲ್’ ಚಿತ್ರದ ಡಬ್ಬಿಂಗ್‌ನಲ್ಲಿ ದರ್ಶನ್ ಬ್ಯುಸಿ

ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದಲ್ಲಿ ಜಾಮೀನು ಸಿಕ್ಕ ಬೆನ್ನಲ್ಲೇ ಸಿನಿಮಾ ಕೆಲಸದಲ್ಲಿ ದರ್ಶನ್ (Darshan) ಬ್ಯುಸಿಯಾಗಿದ್ದಾರೆ. ಹೊಸ ವರ್ಷದ ದಿನವೇ ‘ಡೆವಿಲ್’ (Devil) ಸಿನಿಮಾದ ಡಬ್ಬಿಂಗ್‌ನಲ್ಲಿ ದರ್ಶನ್ ನಿರತರಾಗಿದ್ದಾರೆ. ಇದನ್ನೂ ಓದಿ: ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2’ ಸಕ್ಸಸ್‌ಗೆ ಶುಭಹಾರೈಸಿದ ಆಮೀರ್ ಖಾನ್

ಸದ್ಯ ಬೇಲ್ ಮೇಲಿರುವ ದರ್ಶನ್ ಅವರು ಬೆನ್ನು ನೋವಿಗೆ ಚಿಕಿತ್ಸೆ ಕೂಡ ಪಡೆಯುತ್ತಿದ್ದಾರೆ. ಇದರ ನಡುವೆ ಹೊಸ ವರ್ಷದ ದಿನವೇ ‘ಡೆವಿಲ್’ ಡಬ್ಬಿಂಗ್ ಕಾರ್ಯ ಶುರು ಮಾಡಿದ್ದಾರೆ. ಈ ಹಿಂದೆಯೇ ಅವರು ‘ಡೆವಿಲ್’ ಸಿನಿಮಾದ 50%ರಷ್ಟು ಚಿತ್ರೀಕರಣ ಮುಗಿಸಿದ್ದರು. ಈಗ ಡಬ್ಬಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ.

ದರ್ಶನ್ ಆರೋಗ್ಯದಲ್ಲಿ ಕೊಂಚ ಚೇತರಿಸಿಕೊಂಡ್ಮೇಲೆ ಫೆ.22ರ ಬಳಿಕ ‘ಡೆವಿಲ್’ (Devil) ಸಿನಿಮಾದ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಇನ್ನೂ ಈ ಚಿತ್ರವನ್ನು ಮಿಲನಾ ಪ್ರಕಾಶ್ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್‌ಗೆ ಕುಡ್ಲದ ಕುವರಿ ರಚನಾ ರೈ (Rachana Rai) ನಾಯಕಿಯಾಗಲಿದ್ದಾರೆ.