ಬಳ್ಳಾರಿ ಜೈಲಿನಲ್ಲಿರುವ ಆರೋಪಿ ದರ್ಶನ್‌ಗೆ ಬೆನ್ನು ನೋವು

ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ಬಳ್ಳಾರಿ ಜೈಲು ಪಾಲಾಗಿರುವ ದರ್ಶನ್‌ಗೆ (Darshan) ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಅನಾರೋಗ್ಯದಿಂದ ಬಳಲುತ್ತಿರುವ ನಟನಿಗೆ ಜೈಲಿನ ವೈದ್ಯರು ತಪಾಸಣೆ ನಡೆಸಿದ್ದಾರೆ. ಇದನ್ನೂ ಓದಿ:ಗುಂಡೇಟಿನಿಂದ ಆಸ್ಪತ್ರೆ ಸೇರಿದ್ದ ನಟ ಗೋವಿಂದ ಡಿಸ್ಚಾರ್ಜ್

ದರ್ಶನ್ ಬೆನ್ನು ನೋವಿನ ಸಮಸ್ಯೆಯಿಂದ (Back Pain) ಬಳಲುತ್ತಿದ್ದರು. ತಪಾಸಣೆಯನ್ನು ಅವರು ನಿರಾಕರಿಸಿದ್ದರು. ಆದರೆ ಈಗ ಬೆನ್ನು ನೋವಿನಿಂದಾಗಿ ಮೂಳೆಯಲ್ಲಿ ಊತದ ಸಮಸ್ಯೆ ಕಾಣಿಸಿಕೊಂಡಿದೆ. ಈ ಪರಿಣಾಮ, ಸೆಂಟ್ರಲ್ ಜೈಲು ವೈದ್ಯರಿಂದ 10 ನಿಮಿಷಗಳ ಕಾಲ ದರ್ಶನ್‌ಗೆ ಆರೋಗ್ಯ ತಪಾಸಣೆ ಮಾಡಲಾಗಿದೆ.

ಸ್ಕ್ಯಾನಿಂಗ್ ಸೇರಿದಂತೆ ಇತರೆ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಿದ್ದು, ಅದನ್ನು ದರ್ಶನ್ ನಿರಾಕರಿಸಿದ್ದಾರೆ. ಇನ್ನೂ ಇಂದು ಜೈಲಾಧಿಕಾರಿಗಳ ಕೈ ಸೇರಲಿದೆ ದರ್ಶನ್‌ ಆರೋಗ್ಯದ ಕುರಿತು ವಿಮ್ಸ್‌ ಆಸ್ಪತ್ರೆಯ ವೈದ್ಯರ ಮೆಡಿಕಲ್ ರಿಪೋರ್ಟ್‌ನ ವರದಿ ನೋಡಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಲಿದ್ದಾರೆ.

ಅಂದಹಾಗೆ, ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಹಾಗೂ ಪವಿತ್ರಾ ಗೌಡರ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 5ಕ್ಕೆ ಮುಂದೂಡಿ ಸಿಸಿಹೆಚ್ 57ನೇ ನ್ಯಾಯಾಲಯವು ಆದೇಶ ಹೊರಡಿಸಿದೆ.