ಫೋಟೋ ತೆಗಿಬೇಡ ಅಂತಾ ಹೇಳಿದ್ದೇ ತಪ್ಪಾ: ಯಜಮಾನ ಚಿತ್ರೀಕರಣ ಕಿರಿಕ್‍ಗೆ ದರ್ಶನ್ ಪ್ರತಿಕ್ರಿಯೆ

ಬೆಂಗಳೂರು: ನಿರ್ಮಾಪಕ 30 ಕೋಟಿ ರೂ. ಬಂಡವಾಳ ಹಾಕಿ ಸಿನಿಮಾ ನಿರ್ಮಿಸುತ್ತಾರೆ. ಫೋಟೋ ತೆಗಿಬೇಡ ಅಂತಾ ಹೇಳಿದ್ದೇ ತಪ್ಪಾ ಅಂತಾ ಚಾಲೆಜಿಂಗ್ ಸ್ಟಾರ್ ದರ್ಶನ್ ಪ್ರಶ್ನಿಸಿದ್ದಾರೆ

‘ಯಜಮಾನ’ ಸಿನಿಮಾ ಚಿತ್ರೀಕರಣದ ವೇಳೆ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ ಚಾಲೆಜಿಂಗ್ ಸ್ಟಾರ್, ಸಾರ್ವಜನಿಕ ಸ್ಥಳದಲ್ಲಿ ಚಿತ್ರೀಕರಣ ಮಾಡುತ್ತಿದ್ದಾಗ ಫೋಟೋ ತೆಗೆಯಲು ಬೇಡಾ ಅಂತಾ ಹೇಳುವುದಕ್ಕೆ ಬರುವುದಿಲ್ಲ. ಆದರೆ ಖಾಸಗಿ ಜಾಗದಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಚಿತ್ರೀಕರಣ ಮಾಡುತ್ತಿದ್ದಾಗ ಒಬ್ಬ ಜೂನಿಯರ್ ಕಲಾವಿದ ಹೀಗೆ ಮಾಡುವುದು ಸರಿಯಲ್ಲ ಅಂತಾ ತಿಳಿ ಹೇಳಿದೆ. ತಪ್ಪು ಮಾಡಿದರೆ ಕೇಳುವುದೇ ತಪ್ಪಾ ಅಂತಾ ದರ್ಶನ್ ಪ್ರಶ್ನಿಸಿದ್ದಾರೆ. ಇದನ್ನೂ ಓದಿ:  ದರ್ಶನ್ ಜೂನಿಯರ್ ಕಲಾವಿದನ ಮೇಲೆ ಹಲ್ಲೆ ಮಾಡಿಲ್ಲ: ನಿರ್ಮಾಪಕಿ ಶೈಲಜಾ ನಾಗ್

ಬೃಹತ್ ಮೊತ್ತದಲ್ಲಿ ಸಿನಿಮಾ ಚಿತ್ರೀಕರಣ ಮಾಡಲಾಗುತ್ತಿದೆ. ಜೂನಿಯರ್ ಕಲಾವಿದರಿಗೆ ಊಟ, ತಿಂಡಿ ಹಾಗೂ ಸಾರಿಗೆ ವ್ಯವಸ್ಥೆ ಕೂಡಾ ಇರುತ್ತದೆ. ಇಷ್ಟು ವೆಚ್ಚದಲ್ಲಿ ಸಿನಿಮಾ ಮಾಡುವಾಗ ಫೋಟೋ ತೆಗೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ, ಲೈಕ್, ಕಮೆಂಟ್ಸ್ ತಗೊಂಡರೆ ಚಿತ್ರಮಂದಿರಕ್ಕೆ ಬಂದು ಜನ ಸಿನಿಮಾ ನೋಡುತ್ತಾರಾ? ಇದರಿಂದ ನಿರ್ಮಾಪಕರ ಕಥೆ ಏನಾಗುತ್ತದೆ ಎಂದು ಖರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *