ದರ್ಶನ್ ಜೊತೆ ರಾರಾಜಿಸಿದ ಸ್ಯಾಂಡಲ್‍ವುಡ್ ನಟ

ಬೆಂಗಳೂರು: ಸ್ಯಾಂಡಲ್‍ವುಡ್ ಗೆ ನವ ನಾಯಕ ಎಂಟ್ರಿಕೊಟ್ಟಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಪಕ್ಕದಲ್ಲಿ ಆಟೋ ಮೇಲೆ ರಾರಾಜಿಸುತ್ತಿದ್ದಾರೆ.

`ಬಜಾರ್’ ಸಿನಿಮಾದ ನಟ ಧನ್ವೀರ್ ದರ್ಶನ್ ಜೊತೆ ಕಾಣಿಸಿಕೊಂಡಿದ್ದಾರೆ. ಸಿಂಪಲ್ ಸುನಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಸಿನಿಮಾದಲ್ಲಿ ಮೊದಲ ಬಾರಿಗೆ ಧನ್ವೀರ್ ನಾಯಕನಾಗಿ ಅಭಿನಯಿಸುವ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

ಇತ್ತೀಚಿಗಷ್ಟೇ ಧನ್ವೀರ್ ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಂಡಿದ್ದಾರೆ. ಆದ್ದರಿಂದ ಇವರಿಗೆ ದರ್ಶನ್ ಅಭಿಮಾನಿಗಳಿಂದ ಉಡುಗೊರೆ ಸಿಕ್ಕಿದೆ. ನಟ ಧನ್ವೀರ್ ದರ್ಶನ್ ಅವರ ಅಭಿಮಾನಿ. ಈ ಬಗ್ಗೆ ಅವರು ಹಿಂದೆಯೇ ಹೇಳಿದ್ದರು. ಆದ್ದರಿಂದ ದರ್ಶನ್ ಅಭಿಮಾನಿ ತಮ್ಮ ಆಟೋ ಮೇಲೆ ಧನ್ವೀರ್ ಹುಟ್ಟುಹಬ್ಬದ ವಿಶೇಷವಾಗಿ ದರ್ಶನ್ ಹಾಗೂ ಧನ್ವೀರ್ ಅವರ ಫೋಟೋವನ್ನು ಹಾಕಿಸಿಕೊಂಡಿದ್ದಾರೆ.

ದರ್ಶನ್ ಜೊತೆ ತಮ್ಮ ಫೋಟೋ ನೋಡಿ ಸಂತಸ ಪಟ್ಟ ಧನ್ವೀರ್ ಈ ಬಗ್ಗೆ  ಫೇಸ್ ಬುಕ್ ನಲ್ಲಿ ಖುಷಿ ಹಂಚಿಕೊಂಡಿದ್ದಾರೆ. “ನನಗೆ ಪ್ರತಿ ವರ್ಷ ಬರ್ತ್ ಡೇಗೆ ಸಿಗುತ್ತಿದ್ದ ಉಡುಗೊರೆಗಿಂತ ಈ ವರ್ಷ ತುಂಬಾ ದೊಡ್ಡ ಗಿಫ್ಟ್ ಸಿಕ್ಕಿದೆ. ಆಟೋ ಮೇಲೆ ತುಂಬಾ ದೊಡ್ಡ ಸ್ಟಾರ್ ಗಳ ಫೋಟೋ ಇರುವುದನ್ನು ನೋಡಿದ್ದೇನೆ. ಆದರೆ ನನ್ನ ಫೋಟೋ ನೋಡಿ ಏನು ಹೇಳಬೇಕೋ ತಿಳಿಯುತ್ತಿಲ್ಲ. ಅದರಲ್ಲೂ ದರ್ಶನ್ ಪಕ್ಕದಲ್ಲಿ ನನ್ನ ಫೋಟೋ ಹಾಕಿರುವುದು ತುಂಬಾ ಖುಷಿಯಾಗಿದೆ. ದರ್ಶನ್ ಸರ್ ಅಭಿಮಾನಿಗಳಿಗೆ ಧನ್ಯವಾದಗಳು ಆಟೋ ಡ್ರೈವರ್ ಚಂದನ್ ಅವರಿಗೆ ಕೋಟಿ ನಮನಗಳು, ನಿಮ್ಮ ಪ್ರೀತಿ ವಿಶ್ವಾಸಕ್ಕೆ ನಾನು ಯಾವಾಗಲೂ ಚಿರಋಣಿ” ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಸುನಿ ಅವರು ಈ ಹಿಂದೆ ಚಮಕ್ ಸಿನಿಮಾ ಮಾಡಿದ್ದರು. ಈಗ `ಬಜಾರ್’ ಸಿನಿಮಾ ನಿರ್ದೇಶನ ಮಾಡಿದ್ದು, ತಿಮ್ಮೇಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ. ಸದ್ಯಕ್ಕೆ ಈ ಸಿನಿಮಾ ಚಿತ್ರೀಕರಣವನ್ನು ಮುಗಿಸಿ ತೆರೆಗೆ ಬರಲು ಸಿದ್ಧವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *