‘ಡೆವಿಲ್’ ಚಿತ್ರದ ಸೆಟ್‌ನಲ್ಲಿ ಗೆಳೆಯನ ಬರ್ತ್‌ಡೇ ಆಚರಿಸಿದ ದರ್ಶನ್

ಟ ದರ್ಶನ್  (Darshan) ‘ಡೆವಿಲ್’ ಸಿನಿಮಾದ (Devil) ಸೆಟ್‌ನಲ್ಲಿ ಗೆಳೆಯ ಸಚ್ಚಿದಾನಂದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಜನ್ಮದಿನದ ಸಂಭ್ರಮದಲ್ಲಿರೋ ಗೆಳೆಯನಿಗೆ ದರ್ಶನ್ ವಿಶೇಷವಾಗಿ ಶುಭಕೋರಿದ್ದಾರೆ. ಈ ಫೋಟೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಇದನ್ನೂ ಓದಿ:ಭಯೋತ್ಪಾದಕರು ಎಂದಿಗೂ ಕಾಶ್ಮೀರದ ಪ್ರಗತಿ ನೋಡಲು ಬಯಸುವುದಿಲ್ಲ: ಸುನೀಲ್ ಶೆಟ್ಟಿ

‘ಡೆವಿಲ್’ ಚಿತ್ರದ ಶೂಟಿಂಗ್‌ನಲ್ಲಿ ದರ್ಶನ್ ಬ್ಯುಸಿಯಾಗಿದ್ದಾರೆ. ಬಿಡುವಿನ ಸಮಯದಲ್ಲಿ ಗೆಳೆಯ ಸಚ್ಚಿದಾನಂದಗೆ ‘ಡೆವಿಲ್’ ಚಿತ್ರದ ಸೆಟ್ ಕರೆಸಿ ಕೇಕ್ ಕಟ್ ಮಾಡಿಸಿದ್ದಾರೆ. ಈ ವೇಳೆ, ದರ್ಶನ್ ಸಹೋದರ ದಿನಕರ್ ತೂಗುದೀಪ (Dinakar Thoogudeepa) ಕೂಡ ಭಾಗಿಯಾಗಿದ್ದಾರೆ. ಈ ಮೂಲಕ ದರ್ಶನ್ ನಯಾ ಲುಕ್ ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ನಟನ ಸ್ಮಾರ್ಟ್ ಲುಕ್ ನೋಡಿ ದೃಷ್ಟಿ ತೆಗೆರೋ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಜೊತೆಗಿನ ಹೊಸ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ- ವಾವ್ ಎಂದ ಫ್ಯಾನ್ಸ್

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೇಲ್ ಮೇಲೆ ದರ್ಶನ್ ಹೊರಬಂದ್ಮೇಲೆ ಪತಿಯ ವ್ಯವಹಾರವನ್ನು ವಿಜಯಲಕ್ಷ್ಮಿ ಅವರೇ ನೋಡಿಕೊಳ್ತಿದ್ದಾರೆ. ದರ್ಶನ್‌ಗೆ ಎಲ್ಲೇ ಶೂಟಿಂಗ್ ಇದ್ರೂ ಅಥವಾ ಯಾವುದೇ ಕಾರ್ಯಕ್ರಮ ಆಗಿದ್ರೂ ಪತ್ನಿ ಅಥವಾ ಸಹೋದರ ದಿನಕರ್ ಜೊತೆಯಾಗಿರುತ್ತಾರೆ.

ಅಂದಹಾಗೆ, ‘ಡೆವಿಲ್’ ಸಿನಿಮಾದಲ್ಲಿ ಜೊತೆ ರಚನಾ ರೈ, ವಿನಯ್ ಗೌಡ, ಶರ್ಮಿಳಾ ಮಾಂಡ್ರೆ ನಟಿಸುತ್ತಿದ್ದಾರೆ. `ತಾರಕ್’ ಡೈರೆಕ್ಟರ್ ಮಿಲನಾ ಪ್ರಕಾಶ್ ‘ಡೆವಿಲ್’ಗೆ ನಿರ್ದೇಶನ ಮಾಡುತ್ತಿದ್ದಾರೆ.