ಯಾರಿಗೂ ಭಯಪಡಬೇಡಿ, ದೇಶದಲ್ಲಿ ಪ್ರೀತಿ, ಭ್ರಾತೃತ್ವವನ್ನು ಹರಡಿ – ಯುವ ಜನತೆಗೆ ರಾಹುಲ್ ಸಂದೇಶ

ಮುಂಬೈ: ಯಾರಿಗೂ ಹೆದರಬೇಡಿ ಮತ್ತು ರಾಷ್ಟ್ರವನ್ನು ವಿಭಜಿಸುವ ದ್ವೇಷವನ್ನು ಹರಡದಂತೆ ನೋಡಿಕೊಳ್ಳಿ. ದೇಶದಲ್ಲಿ ಪ್ರೀತಿ, ಭ್ರಾತೃತ್ವವನ್ನು ಹರಡಿ, ದ್ವೇಷವನ್ನಲ್ಲ ಎಂದು ಭಾರತದ ಯುವ ಪೀಳಿಗೆಗೆ ಕಾಂಗ್ರೆಸ್ (Congress) ಸಂಸದ ರಾಹುಲ್ ಗಾಂಧಿ (Rahul Gandhi) ಕರೆ ನೀಡಿದ್ದಾರೆ.

ಮಹಾರಾಷ್ಟ್ರದ (Maharashtra) ನಾಂದೇಡ್‍ನಲ್ಲಿ (Nanded) ಭಾರತ್ ಜೋಡೋ ಯಾತ್ರೆಯ (Bharat Jodo Yatra) ವೇಳೆ ಯುವ ಪೀಳಿಗೆಗೆ ಸಂದೇಶವೊಂದನ್ನು ನೀಡುವಂತೆ ಕೇಳಿದಾಗ ರಾಹುಲ್ ಗಾಂಧಿ ಅವರು “ದರೋ ಮತ್ (Daro mat) [ಭಯಪಡಬೇಡಿ]” ಎಂದು ಸಂದೇಶ ಸಾರಿದ್ದಾರೆ. ಇದನ್ನೂ ಓದಿ: ಬಿರಿಯಾನಿ ಕೊಡಲು ತಡಮಾಡಿದ ರೆಸ್ಟೋರೆಂಟ್ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ

ಈ ವೀಡಿಯೋವನ್ನು ಕಾಂಗ್ರೆಸ್ ತನ್ನ ಟ್ವಿಟ್ಟರ್ ಖಾತೆಯನ್ನು ಹಂಚಿಕೊಂಡಿದ್ದು, ವೀಡಿಯೋದಲ್ಲಿ ರಾಹುಲ್ ಗಾಂಧಿ ಅವರು, ನಾನು ಪ್ರಧಾನಿ ನರೇಂದ್ರ ಮೋದಿ ಅಥವಾ ಆರ್‍ಎಸ್‍ಎಸ್ ಅನ್ನು ಗುರಿಯಾಗಿಸಕೊಂಡು ಹೇಳುತ್ತಿಲ್ಲ. ಜೀವನದಲ್ಲಿ ಯಾವುದಕ್ಕೂ ಭಯಪಡಬೇಡಿ, ನಿರ್ಭೀತರಾಗಿದ್ದರೆ ಯಾರನ್ನೂ ದ್ವೇಷಿಸುವುದಿಲ್ಲ. ನಿಮ್ಮ ಹೃದಯದಲ್ಲಿರುವ ಭಯವನ್ನು ತೊಡೆದುಹಾಕಿ ಮತ್ತು ದೇಶಕ್ಕಾಗಿ ಕೆಲಸ ಮಾಡಿ. ದೇಶದಲ್ಲಿ ಪ್ರೀತಿ ಮತ್ತು ಸಹೋದರತ್ವವನ್ನು ಹರಡಿ, ದ್ವೇಷವಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಪಾಕಿಸ್ತಾನದ ಗೆಲುವು ಸಂಭ್ರಮಿಸಿದ ಕಿಡಿಗೇಡಿಗಳು – ನಾಲ್ವರು ವಶಕ್ಕೆ

ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್‍ನ ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದ ಐದನೇ ದಿನಕ್ಕೆ ಕಾಲಿಟ್ಟು, ಶುಕ್ರವಾರ ನಾಂದೇಡ್ ಜಿಲ್ಲೆಯಲ್ಲಿ ಪಾದಯಾತ್ರೆ ನಡೆಸಲಾಯಿತು. ನಂತರ ನೆರೆಯ ಹಿಂಗೋಲಿ ಜಿಲ್ಲೆಗೆ ಯಾತ್ರೆ ಪ್ರವೇಶಿಸಲಿದ್ದು, ಅಲ್ಲಿ ಶಿವಸೇನಾ ನಾಯಕ ಉದ್ಧವ್ ಬಾಳಾಸಾಹೇಬ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಭಾಗವಹಿಸಲಿದ್ದಾರೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *