ಬಾಬಾ ಭಕ್ತರೇ ಶಿರಡಿ ಪ್ರಸಾದ ತಿನ್ನೋ ಮುನ್ನ ಎಚ್ಚರ- ಈ ಸುದ್ದಿ ಓದಿ

ಬೆಂಗಳೂರು: ಶಿರಡಿ ಸಾಯಿಬಾಬಾನನ್ನು ನಂಬದ ಜೀವಗಳಿಲ್ಲ. ಬಾಬಾ ದರ್ಶನಕ್ಕೆ, ಅಲ್ಲಿನ ಪ್ರಸಾದ ತಿಂದರೆ ಬದುಕು ಪಾವನ ಅನ್ನೋ ನಂಬಿಕೆ ಕೋಟಿ ಭಕ್ತರದ್ದು. ಆದ್ರೇ ಈಗ ನಂಬಿಕೆಯ ಬುಡವೊಂದು ಅಲ್ಲಾಡುತ್ತಿದೆ. ಕೋಟಿ ಭಕ್ತರು ಬಾಬಾ ಪ್ರಸಾದ ಕಂಡ್ರೆ ಮಾರು ದೂರು ಓಡೋ ಪ್ರಮಾದವೊಂದು ನಡೆದು ಹೋಗಿದೆ.

ಬಾಬಾ ಭಕ್ತರಾಗಿರುವ ಬೆಂಗಳೂರಿನ ಸದಾಶಿವನಗರದ ನಿವಾಸಿ ಪರಶುರಾಮ್ ಶಿರಡಿಗೆ ತೆರಳಿ ಅಲ್ಲಿಂದ ಮೂವತ್ತು ಪ್ಯಾಕೆಟ್ ಪ್ರಸಾದದ ಪೇಡಾವನ್ನು ಸನ್ನಿಧಿಯಿಂದ ಕಳೆದ ತಿಂಗಳು ತಂದಿದ್ದಾರೆ. ಬಾಬಾ ಪ್ರಸಾದ ತಿಂದ ತಕ್ಷಣ ಅವ್ರಿಗೆ ವಾಂತಿ, ಭೇದಿ, ಹೊಟ್ಟೆನೋವು ಶುರುವಾಗಿದೆ. ಕೂಡಲೇ ಪ್ರಸಾದವನ್ನ ಪರಿಶೀಲಿಸಿ ನೋಡಿದಾಗ ಪೇಡಾದಲ್ಲಿ ಕಪ್ಪು ಮೆಟಲ್‍ನಂತಹ ವಸ್ತು ಪತ್ತೆಯಾಗಿದೆ. ಸುಟ್ಟಾಗ ವಿಚಿತ್ರ ಪ್ಲಾಸ್ಟಿಕ್ ವಾಸನೆ ಬಂದಿದೆ. ಕೂಡಲೇ ಇದನ್ನು ರಾಮಯ್ಯ ಆಸ್ಪತ್ರೆಯ ಲ್ಯಾಬ್‍ಗೆ ತೆಗೆದುಕೊಂಡು ಹೋಗಿ ಪರೀಕ್ಷೆಗೆ ನೀಡಿದ್ದಾರೆ. ಈಗ ಲ್ಯಾಬ್‍ನಿಂದ ಊಹಿಸಲಾರದ ಬಾಬಾ ಪ್ರಸಾದದ ಅಸಲಿಯತ್ತು ಬಯಲಾಗಿದೆ.

ಏನೇನಿದೆ ಪ್ರಸಾದದಲ್ಲಿ?: ಬಾಬಾ ಪ್ರಸಾದದಲ್ಲಿ ರಾಶಿರಾಶಿ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಅಷ್ಟೇ ಅಲ್ಲದೇ ಅತ್ಯಂತ ಅಪಾಯಕಾರಿಯಾದ ಸ್ಟೆಪಿಲೋಕಾಕಯ್ ಹಾಗೂ ಸೂಡಾಮೋನಸ್ ಅನ್ನುವ ಬ್ಯಾಡ್ ಬ್ಯಾಕ್ಟೀರಿಯಾ ಪತ್ತೆಯಾಗಿದೆ. ಸಾಮಾನ್ಯವಾಗಿ ಸೂಡಾಮೋನಸ್ ಗಾಯವಾಗಿರುವ, ಕೀವಾಗಿರುವ ಅಥವಾ ಹುಣ್ಣಾಗಿದ್ರೆ ಈ ಬ್ಯಾಕ್ಟೀರಿಯಾ ಇರುತ್ತೆ. ಇದು ಪ್ರಸಾದದಲ್ಲಿ ಕಂಡುಬಂದಿದೆ ಅಂದ್ರೆ ಪ್ರಸಾದ ತಯಾರಿಸುವ ವ್ಯಕ್ತಿ ವೈಯಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಂಡಿಲ್ಲ. ಅದ್ರಿಂದ ಪ್ರಸಾದವೇ ವಿಷವಾಗಿ ಮಾರ್ಪಾಡಾಗಿದೆ ಅನ್ನೋ ಶಾಕಿಂಗ್ ಸುದ್ದಿ ಲ್ಯಾಬ್ ರಿಪೋರ್ಟ್‍ನಲ್ಲಿ ಬಯಲಾಗಿದೆ. ಇದರ ಜೊತೆಗೆ ಪಾಲ್ಮೇಟಿಕ್ ಆ್ಯಸಿಡ್ ಅಂಶವೂ ಇದೆ. ಪೇಡಾಗೆ ಹಾಲು ಮಿಕ್ಸ್ ಮಾಡೋ ಬದಲು ವನಸ್ಪತಿ ಎಣ್ಣೆ ಬಳಕೆ ಮಾಡಿದ್ದು ಇನ್ನೊಂದು ಅನಾಹುತಕ್ಕೆ ಕಾರಣವಾಗಿದೆ.

ಈ ಪ್ರಸಾದ ತಿಂದ್ರೆ ಏನಾಗುತ್ತೆ?: ಈ ವಿಷಯುಕ್ತ, ಕಲಬೆರೆಕೆ ಪ್ರಸಾದ ತಿಂದ್ರೆ ಹೊಟ್ಟೆನೋವು, ವಾಂತಿ-ಬೇಧಿ, ಜ್ವರ ಬಾಯಿಯ ಹುಣ್ಣು ಸೇರಿದಂತೆ ಟೈಫಾಯ್ಡ್, ಜಾಂಡೀಸ್‍ನಂತಹ ಕಾಯಿಲೆ ಬರಲಿದೆ. ಇಲ್ಲಿ ಸಂಪೂರ್ಣವಾಗಿ ಆಹಾರ ಸುರಕ್ಷತೆ ಕಾಯ್ದೆಯನ್ನು ಉಲ್ಲಂಘನೆ ಮಾಡಲಾಗಿದೆ ಅಂತಾ ವೈದ್ಯರು ಹೇಳ್ತಾರೆ. ಇನ್ನು ಲ್ಯಾಬ್ ಟೆಸ್ಟ್‍ಗೆ ಕೊಟ್ಟ ಸಾಯಿ ಭಕ್ತರಂತೂ ಈ ರಿಪೋರ್ಟ್‍ನಿಂದ ಕಂಗಾಲಾಗಿದ್ದಾರೆ.

Comments

Leave a Reply

Your email address will not be published. Required fields are marked *