ಚೇರಲ್ಲಿ ಪರಮೇಶ್ವರ್.. ಸುತ್ತ ಹುಡ್ಗೀರ ನೃತ್ಯ- ಜನನಾಯಕ ನಮ್ಮ ಊರಿಗೆ ಹಾಡಲ್ಲಿ `ಕೈ’ ನಾಯಕ

ತುಮಕೂರು: ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಚುನಾವಣಾ ಪ್ರಚಾರಕ್ಕಾಗಿ ಹೈಡ್ರಾಮಾ ನಡೆಸಿದ್ದಾರೆ. ಹೆಣ್ಮಕ್ಕಳ ಡಾನ್ಸ್ ಮಧ್ಯೆ ವಿರಾಜಮಾನರಾಗಿ ಸಭ್ಯತೆ ಮರೆತಿದ್ದಾರೆ.

ತಮ್ಮ ಸ್ವಕ್ಷೇತ್ರ ಕೊರಟಗೆರೆ ಪಟ್ಟಣದಲ್ಲಿ ಜಿ ಪರಮೇಶ್ವರ್ ಕ್ರೀಡಾ ಹಾಗೂ ಸಾಂಸ್ಕೃತಿಕ ವೇದಿಕೆಯಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೆಣ್ಮಕ್ಕಳ ಡಾನ್ಸ್ ನಡುವೆ ಕುಳಿತುಕೊಳ್ಳುವ ಮೂಲಕ ಪರಮ್ ನೆರೆದಿದ್ದ ಜನರ ಗಮನ ಸೆಳೆದಿದ್ದಾರೆ. ಜನನಾಯಕ ಎಂಬ ಹಾಡಿಗೆ ಹೆಣ್ಮಕ್ಕಳು ನೃತ್ಯ ಮಾಡುತ್ತಿದ್ದರೆ ಅವರ ನಡುವೆ ಜಿ.ಪರಮೇಶ್ವರ್ ಕುಳಿತು ಜನನಾಯಕರಾಗಿದ್ದಾರೆ.

ಜಿ. ಪರಮೇಶ್ವರ್ ಅವರ ಈ ಅವತಾರವನ್ನು ಪ್ರೇಕ್ಷಕರು ತಮ್ಮ ಮೊಬೈಲಲ್ಲಿ ಸೆರೆಹಿಡಿದಿದ್ದು, ಬಳಿಕ ವೈರಲ್ ಮಾಡಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಈ ಧೊರಣೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಗಿಮಿಕ್ ಮಾಡ್ತಾ ಇದ್ದಾರೆ ಎಂಬ ಟೀಕೆಗೆ ಒಳಗಾಗಿದೆ.

Comments

Leave a Reply

Your email address will not be published. Required fields are marked *