ಮಂಗಳೂರಲ್ಲಿ ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಡ್ರಗ್ಸ್ ಚಾಕ್ಲೇಟ್ ಮಾರಾಟ- ಇಬ್ಬರು ವಶಕ್ಕೆ

ಮಂಗಳೂರು: ಭಾರೀ ಪ್ರಮಾಣದ ಮತ್ತು ತರಿಸುವ ಡ್ರಗ್ಸ್ (Drugs) ಮಿಶ್ರಿತ ಒಂದು ಕ್ವಿಂಟಾಲ್ ಬಾಂಗ್ ಚಾಕ್ಲೇಟ್‍ಗಳನ್ನು (Chocolate) ಪೊಲೀಸರು (Police) ವಶಪಡಿಸಿಕೊಂಡ ಪ್ರಕರಣ ಮಂಗಳೂರಿನಲ್ಲಿ (Mangaluru) ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಉತ್ತರ ಪ್ರದೇಶ ಮೂಲದ ಬೆಚನ್ ಸೋನ್ಕರ್ (45) ಹಾಗೂ ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ಮನೋಹರ್ ಶೇಟ್ (49) ಪೊಲೀಸರು ವಶಕ್ಕೆ ಪಡೆದ ಆರೋಪಿಗಳಾಗಿದ್ದಾರೆ. ಖಚಿತ ಮಾಹಿತಿ ಮೇರೆಗೆ ನಗರದ ಕಾರ್ ಸ್ಟ್ರೀಟ್ ಹಾಗೂ ಹೈಲ್ಯಾಂಡ್ ಎಂಬಲ್ಲಿನ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಚಾಕ್ಲೇಟ್‍ಗಳು ಪತ್ತೆಯಾಗಿವೆ. ಇವುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ರಹಸ್ಯವಾಗಿ ಮಾರಾಟ ಮಾಡಲಾಗುತ್ತಿತ್ತು. ಉತ್ತರ ಭಾರತದಿಂದ ಇವುಗಳನ್ನು ತರಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಮಾನಹಾನಿ ಕೇಸ್‌ನಲ್ಲಿ ಜೈಲು ಶಿಕ್ಷೆ – ಸುಪ್ರೀಂ ಕೋರ್ಟ್‌ನಲ್ಲೂ ರಾಹುಲ್ ಗಾಂಧಿಗೆ ಹಿನ್ನಡೆ

ಮಹಾಶಕ್ತಿ ಮುನಕ್ಕಾ, ಬಮ್‍ಬಮ್ ಮುನೆಕ್ಕಾವಟಿ, ಪಾವರ್ ಮುನಕ್ಕಾವಟಿ ಹಾಗೂ ಆನಂದ ಚೂರ್ಣ ಹೆಸರಿನಲ್ಲಿ ಈ ಚಾಕ್ಲೇಟ್‍ಗಳು ಪತ್ತೆಯಾಗಿವೆ. ಒಂದು ಚಾಕ್ಲೇಟ್‍ಗೆ 30 ರೂ.ನಂತೆ ಮಾರಾಟ ಮಾಡಲಾಗುತ್ತಿತ್ತು. ಚಾಕ್ಲೇಟ್‍ಗೆ ಅಮಲು ಪದಾರ್ಥ ಬೆರೆಸಿರುವ ಬಗ್ಗೆ ತಿಳಿಯಲು ಸ್ಯಾಂಪಲ್‍ನ್ನು ಎಫ್‍ಎಸ್‍ಎಲ್‍ಗೆ ರವಾನೆ ಮಾಡಲಾಗಿದೆ. ಇವುಗಳಲ್ಲಿ ಗಾಂಜಾ ವಿಶ್ರಣವಾಗಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಉಕ್ಕಿ ಹರಿಯುತ್ತಿರುವ ಸೇತುವೆ ಮೇಲೆ ಬೈಕ್ ಸವಾರನ ಹುಚ್ಚಾಟ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]