ಗೆಲ್ಲುವ ಕುದುರೆ ಬಿಟ್ಟು ಸತ್ತ ಕತ್ತೆಯನ್ನು ಕಣಕ್ಕಿಳಿಸಲಾಗಿದೆ: ದ.ಕ. ಬಿಜೆಪಿ ಮುಖಂಡ

ಮಂಗಳೂರು: ಬಿಜೆಪಿ ಅಭ್ಯರ್ಥಿಗಳ ಎರಡನೇ ಪಟ್ಟಿ ಹೊರಬರುತ್ತಿದ್ದಂತೆಯೇ ದಕ್ಷಿಣ ಕನ್ನಡದಲ್ಲೂ ಭಿನ್ನಮತ ಕಾಣಿಸಿಕೊಂಡಿದೆ.

ಮೂಲ್ಕಿ ಮೂಡಬಿದ್ರೆ ಕ್ಷೇತ್ರದಲ್ಲಿ ಬಿಜೆಪಿಯಿಂದ ಉಮಾನಾಥ್ ಕೋಟ್ಯಾನ್ ಗೆ ಟಿಕೆಟ್ ನೀಡಿರೋದಕ್ಕೆ ಕ್ಷೇತ್ರದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಗದೀಶ್ ಅಧಿಕಾರಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸುವ ಮೂಲಕ ಬಹಿರಂಗವಾಗಿ ತನ್ನ ಅಸಮಾಧಾನವನ್ನು ಹೊರಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ 2ನೇ ಪಟ್ಟಿ ಔಟ್- ವಿಶೇಷತೆಗಳು ಏನು? ಯಾರಿಗೆ ಟಿಕೆಟ್ ಇಲ್ಲ? ಇಲ್ಲಿದೆ ಕಂಪ್ಲೀಟ್ ಡಿಟೈಲ್ಸ್

ಮೂಡಬಿದ್ರೆಯಲ್ಲಿ ಗೆಲ್ಲುವ ಕುದುರೆಯನ್ನು ಬಿಟ್ಟು ಸತ್ತ ಕತ್ತೆಯನ್ನು ಕಣಕ್ಕೆ ಇಳಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಾನು ಮೂಲ್ಕಿಯಲ್ಲಿ ಮಾಡಿಕೊಟ್ಟಿದ್ದ ಬಿಜೆಪಿ ಕಚೇರಿಗೆ ಬೀಗ ಹಾಕ್ತೀನಿ ಅಂತಾ ಹೇಳಿದ್ದಾರೆ. ಅಲ್ಲದೆ, ಎರಡು ದಿನಗಳಲ್ಲಿ ತನ್ನ ಮುಂದಿನ ನಡೆಯನ್ನು ತಿಳಿಸುವುದಾಗಿ ಅವರು ಹೇಳಿದ್ದಾರೆ. ಇದನ್ನೂ ಓದಿ: ಬಿಡುಗಡೆಯಾದ 72 ಕ್ಷೇತ್ರಗಳ ಪೈಕಿ ಬಿಜೆಪಿ ಎಷ್ಟು ಸ್ಥಾನ ಗೆಲ್ಲುತ್ತೆ: ಬಿಎಸ್‍ವೈ ಹೇಳ್ತಾರೆ ಓದಿ

ಇದನ್ನೂ ಓದಿ: Exclusive – ಬಿಜೆಪಿಯ ಅಭ್ಯರ್ಥಿಗಳ ಮೊದಲ ಪಟ್ಟಿ ಔಟ್: ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?

 

Comments

Leave a Reply

Your email address will not be published. Required fields are marked *