ದಿನ ಭವಿಷ್ಯ: 30-07-2023

ಪಂಚಾಂಗ
ನಾಮ ಸಂವತ್ಸರ – ಶೋಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಅಧಿಕ ಶ್ರಾವಣ
ಪಕ್ಷ – ಶುಕ್ಲ
ತಿಥಿ – ದ್ವಾದಶಿ
ನಕ್ಷತ್ರ – ಮೂಲ

ರಾಹುಕಾಲ: 5:12 PM – 6:47 PM
ಗುಳಿಕಕಾಲ: 3:36 PM – 5:12 PM
ಯಮಗಂಡಕಾಲ: 12:26 PM – 2:01 PM

ಮೇಷ: ಮಾತಿನಲ್ಲಿ ಹಿಡಿತವಿರಲಿ, ಬೆಂಕಿ ಅವಘಡಗಳಾಗದಂತೆ ಎಚ್ಚರವಿರಲಿ, ಟ್ಯೂಷನ್ ಮಾಡುವವರಿಗೆ ಹೆಚ್ಚು ಆದಾಯ.

ವೃಷಭ: ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ, ಆತ್ಮವಿಶ್ವಾಸದಿಂದ ಮುಂದುವರೆಯಿರಿ, ಮಂಗಳ ಕಾರ್ಯಗಳಲ್ಲಿ ಭಾಗಿ.

ಮಿಥುನ: ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಉಪನ್ಯಾಸಕರಿಗೆ ಶುಭ, ವಾಹನ ಚಾಲನೆಯಲ್ಲಿ ಎಚ್ಚರ.

ಕರ್ಕಾಟಕ: ಸಣ್ಣ ಮಾತಿನಿಂದ ಜಗಳ, ಚತುರತೆಯಿಂದ ವ್ಯವಹಾರಗಳಲ್ಲಿ ಲಾಭ, ವಿದೇಶಿ ವ್ಯವಹಾರಗಳಲ್ಲಿ ಮುನ್ನಡೆ.

ಸಿಂಹ: ಕಚೇರಿಯಲ್ಲಿ ನಾನಾ ತೊಂದರೆ, ಸಹೋದರರಿಂದ ಆಸ್ತಿ ವಿಚಾರ ಪ್ರಸ್ತಾಪ, ಆಭರಣ ಮಾರಾಟಗಾರರಿಗೆ ಶುಭ.

ಕನ್ಯಾ: ನಂಬಿದ ಜನರಿಂದ ಮೋಸ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ ಲಭ್ಯ, ಆರೋಗ್ಯದ ಬಗ್ಗೆ ಎಚ್ಚರವಿರಲಿ.

ತುಲಾ: ಯತ್ನ ಕಾರ್ಯದಲ್ಲಿ ಭಂಗ, ಸಾಲಬಾಧೆ ಕಾಡುವುದು, ದಿನಸಿ ವ್ಯಾಪಾರದಲ್ಲಿ ಲಾಭ.

ವೃಶ್ಚಿಕ: ಕುಟುಂಬದಲ್ಲಿ ಸಂತಸದ ವಾತಾವರಣ, ಸೋದರಿಯರಿಂದ ತೊಂದರೆ, ಕೃಷಿಯಿಂದ ಆದಾಯ.

ಧನಸ್ಸು: ರಿಯಲ್ ಎಸ್ಟೇಟ್ ಉದ್ಯಮದವರಿಗೆ ಶುಭ, ಹಣಕಾಸು ಸಮಸ್ಯೆ ಉಂಟಾಗಬಹುದು, ಮಾತಿನಿಂದ ಅನರ್ಥ.

ಮಕರ: ಉದ್ಯೋಗಸ್ಥರಿಗೆ ಏಳಿಗೆ, ತಾಳ್ಮೆ ಹಾಗೂ ದೃಢ ನಿರ್ಧಾರಗಳು ಮುಖ್ಯ, ಹಳೆಯ ಗೆಳೆಯರ ಭೇಟಿ.

ಕುಂಭ: ಮನಸ್ಸಿನಲ್ಲಿ ಅಶಾಂತಿ, ಆದಾಯಕ್ಕಿಂತ ಖರ್ಚು ಜಾಸ್ತಿ, ನ್ಯಾಯವಾದಿಗಳಿಗೆ ಶುಭ.

ಮೀನ: ದಾಯಾದಿ ಕಲಹ, ಬಾಕಿ ಹಣ ಕೈ ಸೇರುವುದು, ಮಕ್ಕಳ ಅಗತ್ಯಕ್ಕಾಗಿ ಖರ್ಚು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]