ದಿನ ಭವಿಷ್ಯ: 18-10-2025

ಶ್ರೀ ವಿಶ್ವಾವಸುನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ದ್ವಾದಶಿ/ತ್ರಯೋದಶಿ, ಶನಿವಾರ,
ಪೂರ್ವಫಾಲ್ಗುಣಿ ನಕ್ಷತ್ರ / ಉತ್ತರಫಾಲ್ಗುಣಿ ನಕ್ಷತ್ರ

ರಾಹುಕಾಲ: 09:10 ರಿಂದ 10:39
ಗುಳಿಕಕಾಲ: 06:13 ರಿಂದ 07:41
ಯಮಗಂಡಕಾಲ: 01:37 ರಿಂದ 03:06

ಮೇಷ: ಅಧಿಕ ನಷ್ಟ, ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶತ್ರು ದಮನ, ಕೋರ್ಟ್ ಕೇಸುಗಳಲ್ಲಿ ಜಯದ ಸೂಚನೆ.

ವೃಷಭ: ಆಸ್ತಿ ಸಮಸ್ಯೆಗಳು ಬಗೆಹರಿಯುವುದು, ಸಹೋದರಿಯಿಂದ ಅನುಕೂಲ, ರಾಜಕೀಯ ವ್ಯಕ್ತಿಗಳ ಭೇಟಿ.

ಮಿಥುನ: ಉದ್ಯೋಗ ಬದಲಾವಣೆ ಆಲೋಚನೆ, ಮಾತಿನಿಂದ ಕುಟುಂಬಸ್ಥರಿಗೆ ನೋವು, ಗುಪ್ತ ಧನಾಗಮನ.

ಕಟಕ: ವ್ಯವಹಾರ ಕ್ಷೇತ್ರದಲ್ಲಿ ಅಧಿಕ ಧನಾಗಮನ, ಅನಗತ್ಯ ತಿರುಗಾಟ, ಅಧಿಕ ಧೈರ್ಯ, ದಕ್ಷತೆ ಶೌರ್ಯ ದಿಟ್ಟತನ.

ಸಿಂಹ: ಆದಾಯ ಮತ್ತು ನಷ್ಟ ಸಮ, ಉತ್ತಮ ಹೆಸರು ಗೌರವ ಕೀರ್ತಿ, ಅಭಿವೃದ್ಧಿ ಹೊಂದಬೇಕೆನ್ನುವ ಹಂಬಲ, ಆರ್ಥಿಕ ಒತ್ತಡಗಳಿಂದ ನಿದ್ರಾಭಂಗ.

ಕನ್ಯಾ: ಒತ್ತಡಕ್ಕೆ ಸಿಲುಕುವಿರಿ, ಉದ್ಯೋಗ ಒತ್ತಡದಿಂದ ನಿದ್ರಾಭಂಗ, ನಷ್ಟದ ಪ್ರಮಾಣ ಅಧಿಕ, ಸರ್ಕಾರಿ ಅಧಿಕಾರಿಗಳಿಂದ ಸಂಕಷ್ಟ.

ತುಲಾ: ಉದ್ಯೋಗ ಲಾಭ, ಲಾಭದ ಪ್ರಮಾಣ ಕುಂಠಿತ, ಅದೃಷ್ಟ ವಂಚಿತರು ಎನ್ನುವ ಭಾವನೆ.

ವೃಶ್ಚಿಕ: ರಾಜಕೀಯ ವ್ಯಕ್ತಿಗಳಿಂದ ಅನುಕೂಲ, ಶುಭ ದಿನ, ಮಿತ್ರರಿಂದ ಅದೃಷ್ಟ, ಉತ್ತಮ ಹೆಸರು ಗೌರವ.

ಧನಸ್ಸು: ಅನಿರೀಕ್ಷಿತ ಗಣ್ಯರ ಭೇಟಿ, ಪೂರ್ವಿಕರ ಕರ್ಮ ಕಾರ್ಯದಲ್ಲಿ ತೊಡಗುವಿರಿ, ಪ್ರಯಾಣದಲ್ಲಿ ತೊಂದರೆ ಎಚ್ಚರಿಕೆ, ಉದ್ಯೋಗ ಸಮಸ್ಯೆಗಳು.

ಮಕರ: ಸಂಗಾತಿಯೊಂದಿಗೆ ಕಲಹ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಾನಸಿಕವಾಗಿ ಒತ್ತಡ.

ಕುಂಭ: ಆರೋಗ್ಯ ಸಮಸ್ಯೆ ಕಾಡುವುದು, ನೀರಿನಿಂದ ಮತ್ತು ಆಹಾರದಿಂದ ಸಮಸ್ಯೆ, ಅಧಿಕಾರಿಗಳಿಂದ ಸಮಸ್ಯೆ.

ಮೀನ: ಪ್ರೀತಿ ಪ್ರೇಮದ ವಿಷಯಗಳಲ್ಲಿ ಸಮಸ್ಯೆ, ಮಕ್ಕಳೊಂದಿಗೆ ವಾಗ್ವಾದ ಮತ್ತು ಬೇಸರ, ಸಾಲದ ಸಮಸ್ಯೆ, ಶತ್ರು ಬಾಧೆ, ನಷ್ಟದ ಪ್ರಮಾಣ ಅಧಿಕ.