ದಿನ ಭವಿಷ್ಯ 11-10-2025

ಶ್ರೀ ವಿಶ್ವಾವಸು ನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು
ಆಶ್ವಯುಜ ಮಾಸ, ಕೃಷ್ಣ ಪಕ್ಷ,
ಪಂಚಮಿ, ಶನಿವಾರ, ರೋಹಿಣಿ ನಕ್ಷತ್ರ
ರಾಹುಕಾಲ 09:11 ರಿಂದ 10:40
ಗುಳಿಕಕಾಲ 06:12 ರಿಂದ 07:42
ಯಮಗಂಡಕಾಲ 01:39 ರಿಂದ 03:08

ಮೇಷ: ಕುಟುಂಬಸ್ಥರೊಂದಿಗೆ ಉತ್ತಮ ಒಡನಾಟ, ಆರ್ಥಿಕ ಅಲ್ಪ ಚೇತರಿಕೆ,ತಾಯಿಯಿಂದ ಸಹಾಯ ಧಾರ್ಮಿಕ ಆಚರಣೆಗಳು.

ವೃಷಭ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ನೆರೆಹೊರೆಯವರಿಂದ ಸಹಾಯದ ನಿರೀಕ್ಷೆ, ಹತ್ತಿರದ ಪ್ರಯಾಣ, ಮಾನಸಿಕ ಗೊಂದಲಗಳು.

ಮಿಥುನ: ಪ್ರೀತಿ ಪ್ರೇಮದಲ್ಲಿ ಒಲವು, ಐಷಾರಾಮಿ ಜೀವನದ ಕಲ್ಪನೆ, ಆರ್ಥಿಕ ನಷ್ಟಗಳು, ಕುಟುಂಬದಲ್ಲಿ ಮನಸ್ತಾಪ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಲಾಭ , ಉತ್ತಮ ಹೆಸರುಗಳಿಸುವ ಪ್ರಯತ್ನ, ಸಂತೋಷದಿಂದ ಕಾಲ ಕಳೆಯುವ ನಿರ್ಧಾರ, ಮಾನಸಿಕ ಅಸ್ಥಿರತೆ.

ಸಿಂಹ: ಮಕ್ಕಳಿಂದ ಖರ್ಚು ಮತ್ತು ನಷ್ಟಗಳು, ಉದ್ಯೋಗದಲ್ಲಿ ವಿಘ್ನಗಳು ಮತ್ತು ನಷ್ಟ, ಕೌಟುಂಬಿಕ ಅಂತರ, ಮೋಜು ಮಸ್ತಿಯ ಆಲೋಚನೆ.

ಕನ್ಯಾ: ಪ್ರಯಾಣದಿಂದ ಅನುಕೂಲ, ಆಧ್ಯಾತ್ಮಿಕ ಚಿಂತನೆ, ಉನ್ನತ ವಿದ್ಯಾಭ್ಯಾಸದಲ್ಲಿ ಪ್ರಗತಿ, ಸಂಘಸಂಸ್ಥೆಗಳಿಂದ ಸಹಾಯ.

ತುಲಾ: ಉದ್ಯೋಗದಲ್ಲಿ ಅಡೆತಡೆ, ಜೀವನ ಮುನ್ನಡೆಸುವ ಚಿಂತೆ, ಅಪಘಾತಗಳು, ಮಾತಿನಿಂದ ತೊಂದರೆ.

ವೃಶ್ಚಿಕ: ಗುಪ್ತ ಆಲೋಚನೆ, ವೈವಾಹಿಕ ಜೀವನದ ಚಿಂತೆ, ಪ್ರೀತಿ ಪ್ರೇಮದಲ್ಲಿ ಮೋಸ, ವ್ಯವಹಾರದಲ್ಲಿ ಸಮಸ್ಯೆ.

ಧನಸ್ಸು: ಸಾಲಭಾದೆ, ಶತ್ರು ಕಾಟಗಳು, ಕಿರಿಯರಿಂದ ನಿಂದನೆ, ಕೆಲಸಗಾರರೊಂದಿಗೆ ಮನಸ್ತಾಪ.

ಮಕರ: ಶೃಂಗಾರ ಸಾಧನೆಗಳಿಗೆ ಖರ್ಚು, ವಿವೇಚನೆ ಕಳೆದುಕೊಳ್ಳುವಿರಿ, ಮೋಜು ಮಸ್ತಿಯಿಂದ ತೊಂದರೆಗಳು, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ.

ಕುಂಭ: ಸ್ಥಿರಾಸ್ತಿ ವಾಹನದ ಸಾಲದ ಚಿಂತೆ, ಧಾರ್ಮಿಕ ಆಚರಣೆಗಳು, ಅನಾರೋಗ್ಯದಿಂದ ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಮಹಿಳೆಯರಿಂದ ಸಹಾಯ.

ಮೀನ: ಹತ್ತಿರದ ಪ್ರಯಾಣ, ಉದ್ಯೋಗದ ಹುಡುಕಾಟ, ವಿದ್ಯಾಭ್ಯಾಸದಲ್ಲಿ ಸಮಸ್ಯೆ, ಬರವಣಿಗೆಯಲ್ಲಿ ವ್ಯತ್ಯಾಸ.