ವಿದೇಶಿಗನ ಜೊತೆ ಸಖತ್ ಸ್ಟೆಪ್ ಹಾಕಿದ ಅಜ್ಜ – ವೀಡಿಯೋ ವೈರಲ್

ನವದೆಹಲಿ: ಸೋಶಿಯಲ್ ಮೀಡಿಯಾ ಬಂದಾಗಿನಿಂದ ಜನರು ತಮ್ಮ ಕ್ರೀಯಾಶೀಲತೆ ಮತ್ತು ತಮ್ಮ ಸಾಮರ್ಥ್ಯವನ್ನು ತೋರಿಸಲು ತುದಿಗಾಲಲ್ಲಿ ನಿಂತಿರುತ್ತಾರೆ. ಅದೇ ರೀತಿ ಇಲ್ಲೊಬ್ಬ ಅಜ್ಜ ಫಾರಿನರ್ಸ್ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದು, ಈಗ ಆ ವೀಡಿಯೋ ವೈರಲ್ ಆಗುತ್ತಿದೆ.

ವಿದೇಶಿಗನೊಬ್ಬನು ಬಾಲಿವುಡ್ ಹಾಡಿಗೆ ರಸ್ತೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದು, ಇದರಿಂದ ಪ್ರೇರಣೆಗೊಂಡ ಅಜ್ಜ ಅವರ ಜೊತೆ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಅಲ್ಲಿ ನೆರೆದಿದ್ದ ಜನಸಮೂಹವು ಇವರ ಡ್ಯಾನ್ಸ್ ನೋಡಿ ಫುಲ್ ಎಂಜಾಯ್ ಮಾಡುತ್ತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ವಿದೇಶಿಗ ತನ್ನ ಸ್ಟೆಪ್ ನ್ನು ಹೇಳಿಕೊಂಡುತ್ತಿರುವುದನ್ನು ಲೆಕ್ಕಿಸದೆ, ಅಜ್ಜ ತನಗೆ ತೋಚಿದ ಸ್ಟೆಪ್ ಅನ್ನು ಹಾಕಿ ಕುಣಿದಿದ್ದಾರೆ. ಡ್ಯಾನ್ಸ್ ಮಾಡುತ್ತಿರುವಾಗ ಅಜ್ಜನಲ್ಲಿದ್ದ ಮುಗ್ಧತೆ, ಸಂತೋಷವನ್ನು ವೀಡಿಯೋದಲ್ಲಿ ಗಮನಿಸಬಹುದು. ಇದನ್ನೂ ಓದಿ: ಪುನೀತ್‍ರಂತೆಯೇ ಯಾವಾಗಲು ಒಳ್ಳೆಯ ಕೆಲಸ ಮಾಡೋಣ: ವಿಜಯ ರಾಘವೇಂದ್ರ

ಟ್ವಿಟ್ಟರ್ ನಲ್ಲಿ ಸುಧೀರ್ದಂಡೋಟಿಯ ಎಂಬವರು ಈ ವೀಡಿಯೋವನ್ನು ಹಂಚಿಕೊಂಡಿದ್ದು, ಸ್ವದೇಶಿ ಶೈಲಿಯ ಮುಂದೆ ವಿದೇಶಿಯರೂ ಮಂಕಾಗುತ್ತಾರೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಈ ವೀಡಿಯೋ ನೋಡಿದ ನೆಟ್ಟಿಗರು ‘ದಾದಾಜಿ’, ‘ಕೀಪ್ ಇಟ್ ಅಪ್ ದಾದು!’ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಯೇ ಹಮಾರೆ ದಾದಾಜಿ ಹೇ ಭಾರತೀಯ ದಾದಾಜಿ(ನಮ್ಮ ಅಜ್ಜ ಭಾರತೀಯ ಅಜ್ಜ) ಎಂದು ಕಮೆಂಟ್ ಮಾಡಿದ್ದಾರೆ.

ವಿದೇಶಿಗ ಮತ್ತು ವೃದ್ಧ ಸಲ್ಮಾನ್ ಖಾನ್ ಮತ್ತು ಕಾಜೋಲ್ ನಟನೆಯ ‘ಪ್ಯಾರ್ ಕಿಯಾ ತೋ ಡರ್ನಾ ಕ್ಯಾ’ ಸಿನಿಮಾದಿಂದ ‘ಓ ಓ ಜಾನೇ ಜಾನಾ’ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಕೊನೆಯಲ್ಲಿ ಇಬ್ಬರು ಕೈಯನ್ನು ಕುಲುಕುವ ಮೂಲಕ ಉತ್ಸಾಹದಿಂದ ಹೊರಡುತ್ತಾರೆ. ಒಟ್ಟಿನಲ್ಲಿ ಈ ವೀಡಿಯೋ ನೋಡಿದವರತ್ತು ಅಜ್ಜನ ಡ್ಯಾನ್ಸ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇದನ್ನೂ ಓದಿ: 2ನೇ ಪತ್ನಿಯ ಕತ್ತು ಕೊಯ್ದ ಪತಿ ಮಹಾಶಯ ಪರಾರಿ

Comments

Leave a Reply

Your email address will not be published. Required fields are marked *