Exclusive: ‘ಬಡವ ರಾಸ್ಕಲ್’ ನಿರ್ದೇಶಕನ ಜೊತೆ ಡಾಲಿ ಹೊಸ ಸಿನಿಮಾ

ಡಾಲಿ ಧನಂಜಯ (Daali Dhananjay) ಇತ್ತೀಚಿಗೆ ‘ಹೊಯ್ಸಳ’ನಾಗಿ (Hoysala) ಅಬ್ಬರಿಸಿದ್ದರು. ಗುರುದೇವ್ ಹೊಯ್ಸಳ ಪಾತ್ರಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ಡಾಲಿ ಮುಂದಿನ ಸಿನಿಮಾ ಯಾವುದು? ಯಾರ ಜೊತೆ ಸಿನಿಮಾ ಮಾಡ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ನಟ, ವಿಲನ್, ನಿರ್ಮಾಪಕ, ಲಿರಿಕ್ಸ್ ರೈಟರ್ ಆಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಡಾಲಿಗೆ ಕನ್ನಡ ಮತ್ತು ತೆಲುಗು, ತಮಿಳು ಚಿತ್ರರಂಗದಲ್ಲಿ ಭರ್ಜರಿ ಡಿಮ್ಯಾಂಡ್‌ಯಿದೆ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ಧನಂಜಯ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಲಾಕ್‌ಡೌನ್ ಬಳಿಕ ‘ಬಡವ ರಾಸ್ಕಲ್’ (Badava Rascal) ಸಿನಿಮಾ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿತ್ತು. 16 ಕೋಟಿ ವೆಚ್ಚದಲ್ಲಿ ತಯಾರಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಲೂಟಿ ಮಾಡಿತ್ತು. ಫ್ರೆಂಡ್‌ಶಿಪ್- ಪ್ರೀತಿ ಎರಡರ ಮೌಲ್ಯವನ್ನ ನಿರ್ದೇಶಕ ಶಂಕರ್ ಗುರು (Shankar Guru) ಅದ್ಭುತವಾಗಿ ತೋರಿಸಿದ್ದರು. ಡಾಲಿ- ಅಮೃತಾ ಅಯ್ಯಂಗಾರ್ (Amrutha Iyengar) ಜೋಡಿ ಬೆಳ್ಳಿಪರದೆಯಲ್ಲಿ ಮೋಡಿ ಮಾಡಿತ್ತು. ನಿರ್ದೇಶಕ ಶಂಕರ್ ಗುರು- ಡಾಲಿ ಕಾಂಬೋ ಸಿನಿಮಾ ವರ್ಕ್ ಆಗಿತ್ತು. ಇದೀಗ ಇದೇ ಜೋಡಿ ಕಮಾಲ್ ಮಾಡಲು ಸಜ್ಜಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದನ್ನೂ ಓದಿ:60ರ ದಶಕದ ಕಥೆ ಹೇಳಲು ರೆಡಿಯಾದ ನೆನಪಿರಲಿ ಪ್ರೇಮ್

‘ಬಡವ ರಾಸ್ಕಲ್’ ನಿರ್ದೇಶಕ ಶಂಕರ್ ಗುರು- ಧನಂಜಯ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಬರಲಿದೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಮೂಲಗಳ ಪ್ರಕಾರ, ಶಂಕರ್ ಗುರು ರೆಡಿ ಮಾಡಿರುವ ಸ್ಕ್ರಿಪ್ಟ್ ಕೇಳಿ, ಖುಷಿಯಿಂದ ಡಾಲಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಇಬ್ಬರು ಒಟ್ಟಿಗೆ ಸಿನಿಮಾ ಮಾಡ್ತಿರುವ ಸುದ್ದಿ ಅದೆಷ್ಟರ ಮಟ್ಟಿಗೆ ನಿಜ? ಎಂಬುದನ್ನ ಮುಂದಿನ ದಿನಗಳಲ್ಲಿ ಡಾಲಿ-ಶಂಕರ್ ಅಧಿಕೃತ ಅಪ್‌ಡೇಟ್‌ಗೆ ಕಾದುನೋಡಬೇಕಿದೆ.

‘ಉತ್ತರಾಕಾಂಡ’ (Uttarakanda) ಸಿನಿಮಾಗೆ ಈಗಾಗಲೇ ತಯಾರಿ ನಡೆಯುತ್ತಿದೆ. ಡಾಲಿ, ರಮ್ಯಾ, ಶಿವಣ್ಣ ಕಾಂಬಿನೇಷನ್‌ನಲ್ಲಿ ಉತ್ತರ ಕರ್ನಾಟಕದ ಸೊಗಡಿನಲ್ಲಿ ಈ ಚಿತ್ರ ಮೂಡಿ ಬರಲಿದೆ.

ಶ್ರುತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌