ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎನ್ನುವ ಆದೇಶ ಪತ್ರವನ್ನು ಹಾಕಿ, ಟ್ವೀಟ್ ಮೂಲಕ ರಾಜ್ಯ ಕೈ ನಾಯಕರ ವಿರುದ್ಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ವ್ಯಂಗ್ಯವಾಡಿದ್ದಾರೆ.
ಇದಪ್ಪಾ ವರಸೆ! ಅಂತಿಮವಾಗಿ ತೆರೆಗೆ ದೃಶ್ಯ ಬಂದಿದೆ. ತಾವೇ ಸೂತ್ರಧಾರಿ ತಾವೇ ಪಾತ್ರಧಾರಿ. ಯಾರಲ್ಲಿ ದೂತರೇ! ನನ್ನ ಸಭೆಗೆ ಹಾಜಾರಾಗದ ವಂದಿ ಮಾಗಧರನ್ನು ನನ್ನ ಸಾಮ್ರಾಜ್ಯದಿಂದಲೇ ಉಚ್ಚಾಟಿಸಿ. ಇದು ಕಟ್ಟಾಜ್ಞೆ, ರಾಜಾಜ್ಞೆ. ಸ್ವತಃ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು ಹಿಂಗೆ ಎಂದು ಸಸಚಿವರು ಟ್ವೀಟ್ ಮಾಡಿದ್ದಾರೆ.
ಇದಪ್ಪಾ ವರಸೆ !!!
ಅಂತಿಮ ತೆರೆಗೆ ದೃಶ್ಯ -ಕೈಮಾಕ್ಸ್
ತಾವೇ ಸೂತ್ರಧಾರಿ ತಾವೇ ಪಾತ್ರಧಾರಿ
ಯಾರಲ್ಲಿ ದೂತರೇ !! ನನ್ನ ಸಭೆಗೆ ಹಾಜಾರಾಗದ ವಂಧಿ ಮಾಗಧರನ್ನು ನನ್ನ ಸಾಮ್ರಾಜ್ಯದಿಂದಲೇ ಉಚ್ಚಾಟಿಸಿ ಇದು ಕಟ್ಟಾಜ್ಞೆ ,ರಾಜಾಜ್ಞೆ
ಸ್ವಗತ : ಹೆಂಗೆ ಕೋತಿ ಬೆಣ್ಣೆ ತಿಂದು ಕುರಿ ಮುಖಕ್ಕೆ ಹಚ್ಚಿದ್ದು pic.twitter.com/PlCzZU4Z7Q— Sadananda Gowda (@DVSadanandGowda) January 17, 2019
ಆಪರೇಷನ್ ಕಮಲದ ಭೀತಿಯಿಂದ ಎಚ್ಚೆತ್ತುಕೊಂಡ ಕಾಂಗ್ರೆಸ್ ನಾಯಕರು ಶುಕ್ರವಾರ ಕಾಂಗ್ರೆಸ್ ಶಾಸಕರ ಸಭೆಯನ್ನು ಕರೆದಿದ್ದಾರೆ. ಈ ಸಭೆಗೆ ಕಡ್ಡಾಯವಾಗಿ ಎಲ್ಲ ಶಾಸಕರು ಹಾಜರಾಗಬೇಕು ಎಂದು ಸೂಚಿಸಿದೆ. ಕಾಂಗ್ರೆಸ್ನ ಈ ಆದೇಶವನ್ನು ಎತ್ತಿ ಹಿಡಿದು ಡಿ.ವಿ.ಸದಾನಂದಗೌಡ ಅವರು ಕೈ ನಾಯಕರ ಕಾಲೆಳೆದಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply