ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಬ್ಲಾಸ್ಟ್ – ಯುವಕ ಗಂಭೀರ

ಬೆಂಗಳೂರು: ಗ್ಯಾಸ್ ಸೋರಿಕೆಯಾಗಿ (Gas Leak) ಸಿಲಿಂಡರ್ ಬ್ಲಾಸ್ಟ್ (Cylinder Blast)  ಆದ ಪರಿಣಾಮ ಯುವಕ ಗಂಭೀರ ಗಾಯಗೊಂಡಿರುವ ಘಟನೆ ಬೆಂಗಳೂರಿನ (Bengaluru) ಬೇಗೂರು (Begur) ಬಳಿಯ ಲಕ್ಷ್ಮಿಪುರದಲ್ಲಿ ನಡೆದಿದೆ.

ಬೊಮ್ಮನಹಳ್ಳಿ ಸಮೀಪದ ಗಾರ್ವೇಬಾವಿಪಾಳ್ಯದಲ್ಲಿ ಘಟನೆ ನಡೆದಿದ್ದು, ಬಿಹಾರ (Bihar) ಮೂಲದ ಅಂಕಿತ್ ರಾಜ್ (25) ಎಂಬ ಯುವಕ ಘಟನೆಯಲ್ಲಿ ಗಂಭೀರ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾನೆ. ಪದ್ಮಾವತಿ ಎಂಬವರಿಗೆ ಸೇರಿದ ಕಟ್ಟಡದಲ್ಲಿ ಯುವಕರು ಬಾಡಿಗೆಗೆ ವಾಸವಿದ್ದರು. ಮನೆಯಲ್ಲಿದ್ದ ಗ್ಯಾಸ್ ಲೀಕ್ ಆಗಿತ್ತು. ಇಂದು ಬೆಳಗ್ಗೆ ಅಂಕಿತ್ ಗ್ಯಾಸ್ ಹಚ್ಚಲು ಹೋಗಿದ್ದ ಸಂದರ್ಭ ಏಕಾಏಕಿ ಸ್ಫೋಟಗೊಂಡಿದೆ. ಅಡುಗೆ ಮಾಡಲು ಹೋದ ವೇಳೆ ಘಟನೆ ನಡೆದಿದ್ದು, ಸಿಲಿಂಡರ್ ಬ್ಲಾಸ್ಟ್‌ನಿಂದ ಮನೆಯ ಕಿಟಕಿ, ಗಾಜುಗಳು ಜಖಂಗೊಂಡಿವೆ. ಇದನ್ನೂ ಓದಿ: ಹಾಸನದಿಂದ ಜೀರೋ ಟ್ರಾಫಿಕ್‌ನಲ್ಲಿ ಬಂದ್ರೂ ಅರ್ಧ ಗಂಟೆ ಚಿಕಿತ್ಸೆಗೆ ವಿಳಂಬ – ನಿಮಾನ್ಸ್‌ನಲ್ಲಿ ಕಂದಮ್ಮ ಸಾವು

ಸ್ಫೋಟದ ತೀವ್ರತೆಗೆ ಮನೆ ಸಂಪೂರ್ಣ ಛಿದ್ರಗೊಂಡಿದ್ದು, ಅಕ್ಕ ಪಕ್ಕದ ಹತ್ತಾರು ಮನೆಗಳಿಗೆ ಹಾನಿಯಾಗಿದೆ. ಅಂಕಿತ್ ರಾಜ್ ಸಾವು ಬದುಕಿನ ನಡುವೆ ಹೋರಾಡುತ್ತಿದ್ದು, 65% ರಷ್ಟು ಸುಟ್ಟ ಗಾಯಗಳಾಗಿವೆ. ಈತನಿಗೆ ಬೊಮ್ಮನಹಳ್ಳಿ ಪ್ರಶಾಂತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಬೇಗೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಹಣಕಾಸಿನ ವಿಚಾರಕ್ಕೆ ಟಿಪ್ಪರ್ ಹರಿಸಿ ವ್ಯಕ್ತಿಯ ಹತ್ಯೆ – ಇಬ್ಬರು ಗಂಭೀರ