ಹೊತ್ತಿ ಉರಿದ ಬೆಂಗಳೂರಿನ ಫ್ಲ್ಯಾಟ್ – ನೋಡನೋಡುತ್ತಲೇ ಮಹಿಳೆ ಸಜೀವ ದಹನ

ಬೆಂಗಳೂರು: ಸಿಲಿಂಡರ್ ಸ್ಫೋಟವಾಗಿ ಫ್ಲಾಟ್ ಹೊತ್ತು ಉರಿದು ಸಾವು ನೋವು ಸಂಭವಿಸಿರುವ ಘಟನೆ ಬೊಮ್ಮನಹಳ್ಳಿ ಸಮೀಪದ ದೇವರಚಿಕ್ಕನಹಳ್ಳಿ ಬಳಿಯ ಅಪಾರ್ಟ್ಮೆಂಟ್‍ನಲ್ಲಿ ನಡೆದಿದೆ.

ಆಶ್ರಿತ್ ಅಪಾರ್ಟ್ಮೆಂಟ್‍ನಲ್ಲಿ ಸಿಲಿಂಡರ್ ಸ್ಪೋಟವಾಗಿದ್ದು, ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿದ್ದಾರೆ. ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.

ನೋಡನೋಡುತ್ತಲೇ ಮಹಿಳೆಯೊಬ್ಬರು ಸಜೀವ ದಹನವಾಗಿದ್ದಾರೆ. ಗಾಯಗೊಂಡ ಐವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಾರ್ಟ್ಮೆಂಟ್‍ ಒಳಗೆ ಒಬ್ಬರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಮೈಕ್ ನಲ್ಲಿ ಆನೌನ್ಸ್ ಮೆಂಟ್ ಮಾಡಿ ಮನೆಯೊಳಗೆ ಯಾರಾದ್ರೂ ಇದ್ದಾರ ಅಂತಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಇದನ್ನೂ ಓದಿ:  ಮಕ್ಕಳ ನಿರ್ಲಕ್ಷ್ಯ- ಬೇಸತ್ತ ವೃದ್ಧ ತಂದೆ, ತಾಯಿ ಆತ್ಮಹತ್ಯೆ

ಗ್ಯಾಸ್ ಲೈನ್ ಏಕಾಏಕಿ ಬ್ಲಾಸ್ಟ್ ಆಗಿದೆ. ಹೀಗಾಗಿ ಸ್ಫೋಟದ ರಭಸಕ್ಕೆ ಬೆಂಕಿ ಇಡೀ ಅಂತಸ್ತಿಗೆ ವ್ಯಾಪಿಸಿದೆ. ಅಪಾರ್ಟ್ಮೆಂಟ್‍ ಐದು ಅಂತಸ್ತು ಹೊಂದಿದೆ. ಎರಡನೇ ಮಳಿಗೆಯಲ್ಲಿ ಸಿಲಿಂಡರ್ ಬ್ಲಾಸ್ಟ್ ಆಗಿ ಮೂರು ಪ್ಲೋರ್ ಗಳಿಗೆ ಬೆಂಕಿ ವ್ಯಾಪಿಸಿದೆ.

ಇತ್ತೀಚಿನ ಮಾಹಿತಿ ಪ್ರಕಾರ ತಾಯಿ, ಮಗಳು ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಆರು ಜನರ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದೆ.

Comments

Leave a Reply

Your email address will not be published. Required fields are marked *